ವಸತಿ ಶಾಲೆ ಪಕ್ಕದಲ್ಲೇ ಕಸ ವಿಲೇವಾರಿ ಘಟಕ; ಮೂಗು ಮುಚ್ಚಿ ಪಾಠ ಕೇಳುವ ಸ್ಥಿತಿ, ಪುರಸಭೆ ವಿರುದ್ಧ ಪೋಷಕರ ಆಕ್ರೋಶ

| Updated By: ಆಯೇಷಾ ಬಾನು

Updated on: Jan 25, 2024 | 8:31 AM

ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿರುವ ವಸತಿ ಶಾಲೆಯೊಂದರ ಮಕ್ಕಳ ಸ್ಥಿತಿ ಹೇಳತೀರದ್ದು. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೂಡ್ಲುರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪಕ್ಕದಲ್ಲೇ ಕಸ ವಿಲೇವಾರಿ ಘಟಕ ಇದ್ದು ಮಕ್ಕಳು ಶಾಲೆಯಲ್ಲಿ ಮೂಗು ಮುಚ್ಚಿಕೊಂಡು ಪಾಠ ಕೇಳುವಂತಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ವಸತಿ ಶಾಲೆ ಪಕ್ಕದಲ್ಲೇ ಕಸ ವಿಲೇವಾರಿ ಘಟಕ; ಮೂಗು ಮುಚ್ಚಿ ಪಾಠ ಕೇಳುವ ಸ್ಥಿತಿ, ಪುರಸಭೆ ವಿರುದ್ಧ ಪೋಷಕರ ಆಕ್ರೋಶ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
Follow us on

ಮೈಸೂರು, ಜ.25: ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿರುವ ವಸತಿ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ಪ್ರತಿದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ಶಾಲೆಯ ಪಕ್ಕದಲ್ಲೇ ಕಸ ವಿಲೇವಾರಿ ಘಟಕ (Garbage Disposal Unit) ಇದ್ದು ಮಕ್ಕಳು ಶಾಲೆಯಲ್ಲಿ ಮೂಗು ಮುಚ್ಚಿಕೊಂಡು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳಿಗೆ ಕಿರಿ-ಕಿರಿ, ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಮಕ್ಕಳು-ಶಿಕ್ಷಕರು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೂಡ್ಲುರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಳುವಂತಿಲ್ಲ. ಏಕೆಂದರೆ ಪುರಸಭೆ ನಿರ್ಲಕ್ಷಕ್ಕೆ ಈ ಶಾಲಾ ಮಕ್ಕಳು ದಿನ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಮೂಗು ಮುಚ್ಚಿಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಟಿ.ನರಸೀಪುರ ತಾಲೂಕು ವರುಣ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಶಾಲೆಯಲ್ಲಿ ಇಂತಹದೊಂದು ಕೆಟ್ಟ ಸ್ಥಿತಿ ಇದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂ ಖರ್ಚು ಮಾಡಿ ಶಾಲೆ ನಿರ್ಮಾಣ ಮಾಡಲಾಗಿದೆ. ಆದರೆ ಶಾಲೆಯ ಕಾಂಪೌಂಡ್ ಪಕ್ಕದಲ್ಲೇ ಕಸ ವಿಲೇವಾರಿ ಘಟಕ ಇದ್ದು ಇದರಿಂದ ಸಮಸ್ಯೆ ಎದುರಾಗಿದೆ. ಕಸ ವಿಲೇವಾರಿ ಘಟಕ ಸ್ಥಳಾಂತರ ಮಾಡುವಂತೆ ಅನೇಕ ಭಾರಿ ಮನವಿ ಮಾಡಲಾಗಿದ್ದು ಪುರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ನಿನ್ನೆ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಶಾಲೆ, ವಸತಿ ಕೊಠಡಿ ತುಂಬೆಲ್ಲ ದಟ್ಟ ಹೊಗೆ ಆವರಿಸಿಕೊಂಡಿತ್ತು. ಹೀಗಾಗಿ ಟಿ. ನರಸೀಪುರ ಪುರಸಭೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದು ಆದಷ್ಟು ಬೇಗ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸ್ಪೈಸ್​ಜೆಟ್ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ: ದೆಹಲಿ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

ಕರ್ತವ್ಯ ಲೋಪ, ಚೆಸ್ಕಾಂ ಎಂಡಿ ಅಮಾನತು

ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಫದಲ್ಲಿ ಚೆಸ್ಕಾಂ ಎಂಡಿಯನ್ನ ಅಮಾನತುಗೊಳಿಸಲಾಗಿದೆ. ಸಿ.ಎನ್‌.‌ಶ್ರೀಧರ್ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಿನ್ನೆ ಸಿಎಂ ಕಾರ್ಯಕ್ರಮ ನಡೆಯುತ್ತಿತ್ತು. ನೀರಾವರಿ ಯೋಜನೆಗೆ ಸಿಎಂ ಚಾಲನೆ ನೀಡಬೇಕಿತ್ತು. ಸಿಎಂ ಬಟನ್ ಒತ್ತಿದಾಗ ಚಾಲನೆಯಾಗಲಿಲ್ಲ. ಇದ್ರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ರು. ಇದೀಗ ವಿದ್ಯುತ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಿದ ಹಾಗೂ ಕಾರ್ಯಕ್ರಮಕ್ಕೂ ಗೈರಾಗಿದ್ದ ಚೆಸ್ಕಾಂ ಎಂಡಿ ಸಿ.ಎನ್‌.‌ಶ್ರೀಧರ್​​ನನ್ನು ಅಮಾನತುಗೊಳಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ