ಮೈಸೂರು: ಕೊರೊನಾದಿಂದ ಆಸ್ಪತ್ರೆಗೆ ಸೇರಿದಾಗ ಸೋಂಕಿತರ ಬೆಲೆಬಾಳುವ ವಸ್ತುಗಳನ್ನು ಎಗರಿಸುವ ಪ್ರಕರಣಗಳು ಇನ್ನೂ ನಿಂತಿಲ್ಲ. ಕಳೆದ ಏಪ್ರಿಲ್-ಮೇ ತಿಂಗಳುಗಳಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದ್ದಾಗ ಈ ಕಳ್ಳರ ಕರಾತ್ತು ರಾಜ್ಯದಲ್ಲಿ ಹೆಚ್ಚಾಗಿ ಕಂಡುಬಂದಿತ್ತು. ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಿರುದ್ದವೂ ಇಂತಹ ಪ್ರಕರಣವೊದು ದಾಖಲಾಗಿದೆ.
ಮೈಸೂರಿನ ಎಂ.ಕೆ. ಯಶವಂತ್ ಕುಮಾರ್ ರವರಿಂದ ಈ ಸಂಬಂಧ ದೂರು ದಾಖಲಾಗಿದೆ. ಅವರ ತಾಯಿ ತಾಯಿ ಗೌರಮ್ಮ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊರೊನಾಗೆ ಬಲಿಯಾಗಿದ್ದರು.
ಗೌರಮ್ಮ ಅವರು ಆಸ್ಪತ್ರೆ ಸೇರಿದಾಗ 4 ಚಿನ್ನದ ಬಳೆ, ಒಂದು ಉಂಗುರ, 2 ಓಲೆ ಮತ್ತು ಕೊರಳಿನಲ್ಲಿ ಒಂದು ಚಿನ್ನದ ಸರ ಧರಿಸಿದ್ದರು. ಬಿಲ್ ಪಾವತಿಸಿದ ನಂತರ ನಿಮ್ಮ ತಾಯಿಯವರ ಒಡವೆಗಳನ್ನು ನೀಡುತ್ತೇವೆಂದು ಆಸ್ಪತ್ರೆಯ ಸಿಬ್ಬಂದಿ ಯಶವಂತ್ ಕುಮಾರ್ಗೆ ತಿಳಿಸಿದ್ದರು. ನಂತರ ಎಲ್ಲಾ ಒಡವೆ ನೀಡಿದ ಆಸ್ಪತ್ರೆ ಸಿಬ್ಬಂದಿ 25 ಗ್ರಾಂ ತೂಕದ ಚಿನ್ನದ ಸರವನ್ನು ಬಿಟ್ಟು ಎಲ್ಲವನ್ನೂ ಹಿಂತಿರುಗಿಸಿದ್ದಾರೆ. ಸರದ ಬಗ್ಗೆ ಕೇಳಿದಾಗ ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಆಸ್ಪತ್ರೆಯ ಸಿಬ್ಬಂದಿ. ಈ ಸಂಬಂಧ ವಿದ್ಯಾರಣ್ಯಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಯುವ ಕಾಂಗ್ರೆಸ್ ಕಾರ್ಯಕರ್ತರು; ಮೊಬೈಲ್ ಕಳುವಾಗಿದೆ ಎಂದು ಪತ್ರ ಬರೆದ ಕೊಡಗು ಬಾಲಕಿಗೆ ಹೊಸ ಫೋನ್!
(Gold chain allegedly stolen from coronavirus patient in mysore by private hospital)