ಮೈಸೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಹಾಗೂ ಕದ್ದ ಮಾಲು ಖರೀದಿಸುತ್ತಿದ್ದ ಒಬ್ಬನ ಬಂಧನ

Mysuru News: ಇವರು ಐಷಾರಾಮಿ ಜೀವನಕ್ಕಾಗಿ ಕಳ್ಳತನವೇ ವೃತ್ತಿಯಾಗಿಸಿಕೊಂಡಿದ್ದರು. ಹಾಗೂ ಮೈಸೂರಿನ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಮೈಸೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಹಾಗೂ ಕದ್ದ ಮಾಲು ಖರೀದಿಸುತ್ತಿದ್ದ ಒಬ್ಬನ ಬಂಧನ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on:Sep 03, 2021 | 3:58 PM

ಮೈಸೂರು: ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಹಾಗೂ ಕದ್ದ ಮಾಲು ಖರೀದಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರಿಂದ ಮೂರು ಮಂದಿಯ ಬಂಧನವಾಗಿದೆ. ಬಂಧಿತರಿಂದ 21 ಲಕ್ಷ ಮೌಲ್ಯದ 388 ಗ್ರಾಂ ಚಿನ್ನ, 4 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಕೆ.ಆರ್. ಮೊಹಲ್ಲಾದ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು(28), ಶಾಂತಿನಗರದ ನಿವಾಸಿ ತಾಜುದ್ದೀನ್ ಅಲಿಯಾಸ್ ಕಾಲು (21) ಬಂಧಿತ ಆರೋಪಿಗಳು. ಅಶೋಕ ರಸ್ತೆಯಲ್ಲಿರುವ ಮರಿಯಂ ಜ್ಯುವೆಲ್ಲರ್ಸ್ ಮಾಲೀಕ ಮೊಹಮ್ಮದ್ ಫರ್ವೇಜ್ (41) ಎಂಬಾತನನ್ನು ಕೂಡ ಸೆರೆ ಹಿಡಿಯಲಾಗಿದೆ. ಇವರು ಐಷಾರಾಮಿ ಜೀವನಕ್ಕಾಗಿ ಕಳ್ಳತನವೇ ವೃತ್ತಿಯಾಗಿಸಿಕೊಂಡಿದ್ದರು. ಹಾಗೂ ಮೈಸೂರಿನ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ಮನೆಕೆಲಸ ಮಾಡುವವರಿಂದಲೇ ಕಳ್ಳತನ ಮನೆಯಲ್ಲಿ ಕೆಲಸ ಮಾಡುವವರೇ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣವೊಂದು ಸಪ್ಟೆಂಬರ್ 1 ರಂದು ಬೆಂಗಳೂರಿನಲ್ಲಿ ದಾಖಲಾಗಿತ್ತು. ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈದ್ಯ ದಂಪತಿ ಮನೆಯಲ್ಲಿ ಕಳ್ಳತನವಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮ್ಮು ಎಂಬುವವರನ್ನು ಬಂಧಿಸಲಾಗಿತ್ತು. ಬಂಧಿತ ಅಮ್ಮುಳಿಂದ 235 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿತ್ತು.

ವೈದ್ಯ ದಂಪತಿಗಳು ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಚಿನ್ನ ಇಡಲು ಹೋದಾಗ ಚಿನ್ನ ಕಳ್ಳತನವಾಗಿದ್ದರ ಕೃತ್ಯ ಬಯಲಾಗಿತ್ತು. ಆಗ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಾಕಷ್ಟು ಭದ್ರತೆ ಇರುವ ಸ್ಥಳದಲ್ಲಿ ವೈದ್ಯ ದಂಪತಿಗಳು ವಾಸವಿದ್ದುದರಿಂದ ಮನೆಯ ಕೆಲಸದವರ ಮೇಲೆ ಅನುಮಾನ ಹೆಚ್ಚಾಗಿತ್ತು. ತನಿಖೆ ಕೈಗೊಂಡ ನಂತರ ಅಮ್ಮು ಕೃತ್ಯ ಬಯಲಾಗಿತ್ತು.

ವೈದ್ಯರ ಮನೆಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಅಮ್ಮು, ಮನೆಯಲ್ಲಿದ್ದ ಚಿನ್ನವನ್ನು ಹಂತಹಂತವಾಗಿ ಕದ್ದೊಯ್ದಿದ್ದಳು. ಮನೆಯಲ್ಲಿ ನಾಲ್ವರು ಕೆಲಸಗಾರರಿದ್ದುದರಿಂದ ಅನುಮಾನ ಬಾರದಂತೆ ಕೃತ್ಯ ಎಸಗಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಬಂಧಿತಳಿಂದ ಸುಮಾರು 12 ಲಕ್ಷ ರೂ ಮೌಲ್ಯದ 235 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಪರಿಸರ ಹೋರಾಟಗಾರ ಗಿರೀಶ್ ಮೇಲೆ ಹಲ್ಲೆ ಪ್ರಕರಣ: ಏಳು ಜನರ ಬಂಧನ

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ ವಂಚನೆ; ಬೆಂಗಳೂರಿನಲ್ಲಿ ಆರೋಪಿ ಸೆರೆ

Published On - 3:43 pm, Fri, 3 September 21