ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ; ಶಾಸಕ ಜಿಟಿ ದೇವೇಗೌಡ

ಹಾಲಿ ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪ್​ ಸಿಂಹಗೆ ಕೊಕ್​ ನೀಡಿ, ಯದುವೀರ್​ಗೆ (Yaduveer) ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ,(GT Devegowda) ‘ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ ಎಂದರು.

ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ; ಶಾಸಕ ಜಿಟಿ ದೇವೇಗೌಡ
ಜಿಟಿ ದೇವೇಗೌಡ, ಯದುವೀರ್​
Edited By: ಕಿರಣ್ ಹನುಮಂತ್​ ಮಾದಾರ್

Updated on: Mar 15, 2024 | 9:37 PM

ಮೈಸೂರು, ಮಾ.15: ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಮೈಸೂರು-ಕೊಡಗು ಕ್ಷೇತ್ರ ಸಂಸದ ಪ್ರತಾಪ್​ ಸಿಂಹಗೆ ಕೊಕ್​ ನೀಡಿ, ಯದುವೀರ್​ಗೆ (Yaduveer) ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್​​ ಶಾಸಕ ಜಿ.ಟಿ.ದೇವೇಗೌಡ,(GT Devegowda) ‘ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ, ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್​ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದಿದ್ದಾರೆ.

ಮಹಾರಾಜರು ಎಂಪಿಯಾದ್ರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತೆ

‘ಈ ಹಿಂದೆ ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹನನ್ನ ಒಂದು ರೂಪಾಯಿ ಪಡೆಯದೇ ಗೆಲ್ಲಿಸಿದ್ದೇವೆ. ಅವರು ಕೂಡ ಒಂದು ರೂಪಾಯಿ ಪಡೆಯದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹರನ್ನು ಅಭಿನಂದಿಸುತ್ತೇನೆ. ಅವರು 10 ವರ್ಷಗಳಲ್ಲಿ ಎಷ್ಟು ಮನೆಗೆ ಭೇಟಿ ನೀಡಿದ್ದಾನೆ. ಯದುವೀರ್‌ಗೆ ಅವಕಾಶ ಕೊಡಿ, ನಿಮ್ಮ ಮನೆ ಮನೆಗೆ ಬರುತ್ತಾರೆ. ಮಹಾರಾಜರು ಎಂಪಿಯಾದರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತದೆ. ಬಡವರ ಕಷ್ಟಕ್ಕೆ ಆಗುತ್ತಾರೆ. ಯದುವೀರ್‌ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಗೌರವ ಕೊಡುತ್ತಾರೆ ಎಂದರು.

ಇದನ್ನೂ ಓದಿ:ಮೊದಲ ದಿನವೇ ಭರ್ಜರಿ ಪ್ರಚಾರ: ಫುಟ್‌ಪಾತ್‌ನಲ್ಲಿ ಯದುವೀರ್​ ಚಾಯ್ ಪೆ ಚರ್ಚಾ

ಮೈಸೂರು ಮಹರಾಜರ ಕೊಡುಗೆ ನಿಮಗೆ ತಿಳಿದಿದೆ. ಮೀಸಲಾತಿ ಜಾರಿ ಮಾಡಿದ್ದೆ ಮೈಸೂರು ಮಹರಾಜರು. ಇವತ್ತು ಕೆಲವರು ನಾವು ಕೊಟ್ಟೆವು ಎಂದು ಹೇಳುತ್ತಾರೆ. ನಾನು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್​ರನ್ನ ಭಕ್ತಿಯಿಂದ ನೋಡುತ್ತಿದ್ದೆವು. ಮೈಸೂರು ಮಹರಾಜರ ಕುಟುಂಬದ ಜೊತೆ ಈಗಲೂ ಉತ್ತಮ ಒಡನಾಟ, ಅಭಿಮಾನ ಇದೆ. ನಮ್ಮ ಮತ್ತೆ ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರವಾಗಿ ವೈಮನಸ್ಸಿಲ್ಲ. ಈಗಾಗಲೇ ಬಿಜೆಪಿಯವರು 25 ಕ್ಷೇತ್ರ ಗೆದ್ದಿದ್ದಾರೆ. ಇನ್ನು ಗೆಲ್ಲಬೇಕಿರುವುದು ಮೂರು ಕ್ಷೇತ್ರ. ಆ ಮೂರು ಕ್ಷೇತ್ರ ಮಂಡ್ಯ, ಹಾಸನ, ಕೋಲಾರ ಮಾತ್ರ ಜೆಡಿಎಸ್ ಕೇಳುತ್ತದೆ. 28ಕ್ಕೆ 28 ಕ್ಷೇತ್ರವನ್ನ ಮೈತ್ರಿ ಅಭ್ಯರ್ಥಿಗಳು ಗೆದ್ದರೆ, ನಮ್ಮ ಎಲ್ಲಾ ಕೆಲಸಗಳು ಆಗುತ್ತವೆ. ಯಾರು ಎಷ್ಟೇ ಹಣ ಆಮಿಷ ನೀಡಲಿ. ನಾವೆಲ್ಲರೂ ಸೇರಿ ಯದುವೀರ್ ಒಡೆಯರ್​ರನ್ನ ಗೆಲ್ಲಿಸೋಣ ಎಂದು ಹೇಳಿದರು.

ಜಿಟಿ ದೇವೇಗೌಡರ ಸಹಕಾರ ಕೇಳಲಿಕ್ಕೆ ಬಂದಿದ್ದೇವೆ-ಯದುವೀರ್

ಇದೇ ವೇಳೆ ಯದುವೀರ್​ ಮಾತನಾಡಿ, ‘ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ವ್ಯಕ್ತಿ. ಜಿಟಿ ದೇವೇಗೌಡರ ಸಹಕಾರ ಕೇಳಲಿಕ್ಕೆ ಬಂದಿದ್ದೇವೆ. ಇಂತಹ ವ್ಯಕ್ತಿಗಳ ಜೊತೆ ಚುನಾವಣೆಗೆ ಹೋಗೋದು ಖುಷಿಯ ವಿಷಯ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲೂ ನಾವು ಸಿದ್ದರಾಗಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us