ನಂಜುಡೇಶ್ವರನಿಗೆ ತುಲಾಭಾರ ಸೇವೆ: ತಮ್ಮ ಆರೋಗ್ಯಕ್ಕಾಗಿ ಕುಟುಂಬದ ಸದಸ್ಯರೊಬ್ಬರು ಹೊತ್ತಿದ್ದ ಹರಕೆ ತೀರಿಸಿದ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದರೊಂದಿಗೆ ಕುಟುಂಬದ ಸದಸ್ಯರೊಬ್ಬರು ಹೊತ್ತುಕೊಂಡಿದ್ದ ಹರಕೆಯನ್ನು ಕುಮಾರಸ್ವಾಮಿ ತೀರಿಸಿದ್ದಾರೆ.
ಮೈಸೂರು, (ಅಕ್ಟೋಬರ್ 16): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ((HD Deve Gowda)ದಂಪತಿ ಕಳೆದ ಒಂದು ವಾರ ಅಷ್ಟೇ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ (Kukke Subrahmanya Temple) ಭೇಟಿ ನೀಡಿದ್ದು, ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆ ನೆರವೇರಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ದಂಪತಿ ಇಂದು (ಅಕ್ಟೋಬರ್ 16) ನಂಜನಗೂಡಿಗೆ ಭೇಟಿ ನೀಡಿ ನಂಜುಡೇಶ್ವರನಿಗೆ (njundeshwara) ತುಲಾಭಾರಕ್ಕೆ ಪೂಜೆ ನೆರವೇರಿಸಿದ್ದಾರೆ. ಮೊದಲಿಗೆ ಹೆಚ್ಡಿ ಕುಮಾರಸ್ವಾಮಿ ಅವತು ತಮ್ಮ ಕುಟುಂಬ ಸಮೇತವಾಗಿ ತುಲಾಭಾರಕ್ಕೆ ವಿಶೇಷ ಪೂಜೆ ಮಾಡಿದರು. ಬಳಿಕ ಅನಿತಾ ಕುಮಾರಸ್ವಾಮಿ ಅವರು ಬೆಲ್ಲದ ತುಲಾಭಾರ ಮಾಡಿಸಿದರು. ಪತ್ನಿ ನಂತರ ಕುಮಾರಸ್ವಾಮಿ ಅವರೂ ಸಹ ತುಲಾಭಾರ ಸೇವೆ ಸಲ್ಲಿಸಿದರು.
ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ನನ್ನ ಆರೋಗ್ಯ ಸಮಸ್ಯೆಯಿಂದ ಭಗವಂತ ಪಾರು ಮಾಡಿದ್ದಾನೆ. ನಾನು ಅನಾರೋಗ್ಯ ಸಮಸ್ಯೆಗೆ ಒಳಗಾದಾಗ ನನ್ನ ಕುಟುಂಬ ಸದಸ್ಯರೊಬ್ಬರು ನರಸಿಂಹಸ್ವಾಮಿ ನಂಜುಂಡೇಶ್ವರನಿಗೆ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿದ್ದೇವೆ. ನಾಡಿಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
ಲೈಟ್ ಆಗಿ ಪಾರ್ಶ್ವವಾಯುಗೆ ತುತ್ತಾಗಿದ್ದ ಕುಮಾರಸ್ವಾಮಿ ಅವರು ಮೂರ್ನಾಲ್ಕು ದಿನಗಳ ವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಮಾತನಾಡಿ, ನನಗೆ ಪುನರ್ಜನ್ಮ ಸಿಕ್ಕಿದೆ. ದೇವರು, ವೈದ್ಯರು, ತಂದೆ ತಾಯಿಗಳ ಆಶೀರ್ವಾದವೇ ಇದಕ್ಕೆ ಕಾರಣ. ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ನನಗೆ ಪುನರ್ಜನ್ಮ ಸಿಕ್ಕಿದೆ ಎಂದು ಹೇಳಿದ್ದರು.
ದೇವೇಗೌಡ ಅವರ ಕುಟುಂಬ ನಂಜನಗೂಡಿನ ನಂಜುಂಡೇಶ್ವರನ ಮೇಲೆ ಬಹಳ ಭಕ್ತಿ ಇಟ್ಟುಕೊಂಡಿದೆ. ಇದರಕ್ಕೆ ಪೂರಕವೆಂಬಂತೆ ದೇವೇಗೌಡ ಅವರು ಈ ಹಿಂದೆ ಅಂದರೆ 2022 ಡಿಸೆಂಬರ್ನಲ್ಲಿ ಶ್ರೀಕಂಠೇಶ್ವರ ಸ್ವಾಮಿ ರುದ್ರಾಭಿಷೇಕ, ತುಲಾಭಾರ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.