ಪಕ್ಷದಲ್ಲಿರುವ ಹಿತ ಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ; ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಜೆಡಿಎಸ್​ನ (JDS) ಹಿತಶತ್ರುಗಳಿಂದ ಕಾಂಗ್ರೆಸ್​ನವರಿಗೆ ಲಾಭವಾಗುವುದಿಲ್ಲ. ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಅಂತಾ ಕೇಳಿದ್ದಾರೆ.

ಪಕ್ಷದಲ್ಲಿರುವ ಹಿತ ಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ; ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: sandhya thejappa

Updated on:May 25, 2022 | 12:21 PM

ಮೈಸೂರು: ಜಿಲ್ಲೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮಾಧ್ಯಮದೊಂದಿಗೆ ಮಾತನಾಡಿದರು. ಈ ವೇಳೆ ಪಕ್ಷದಲ್ಲಿರುವ ಹಿತ ಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ ಎಂದು ಹೇಳಿದರು. ನಂತರ ಮಾತನಾಡಿದ ಅವರು, ಜೆಡಿಎಸ್​ನ (JDS) ಹಿತಶತ್ರುಗಳಿಂದ ಕಾಂಗ್ರೆಸ್​ನವರಿಗೆ ಲಾಭವಾಗುವುದಿಲ್ಲ. ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಅಂತಾ ಕೇಳಿದ್ದಾರೆ. ಮೊದಲು ತಮ್ಮ ಕೊಡುಗೆ ಏನೆಂದು ಸಿದ್ದರಾಮಯ್ಯ ಹೇಳಲಿ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಅದು ಕಾಂಗ್ರೆಸ್ ಕೊಡುಗೆ. 200 ಕುಟುಂಬಗಳನ್ನು ಅನಾಥವಾಗಿ ಮಾಡಿದ್ದು ನಿಮ್ಮ ಕೊಡುಗೆ. ನಮ್ಮ ಕೊಡುಗೆ ಏನು ಎಂಬುದು ಮಂಡ್ಯದ ಜನರಿಗೆ ಗೊತ್ತಿದೆ. ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದೆ, ಅಷ್ಟರಲ್ಲೇ ಸರ್ಕಾರ ತೆಗೆದ್ರಿ ಎಂದು ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಗ್ಗೆ ಜೆಡಿಎಸ್ ನಿಲುವು ವಿಚಾರಕ್ಕೆ ಸಂಬಂಧಿಸಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ದೇವರು ಕನಸಿನಲ್ಲಿ ಬಂದು ತನ್ನ ಮೂಲ ಸ್ಥಾನವನ್ನು ಹೇಳಿದ್ನಾ? ಅಲ್ಲದೇ ಅದನ್ನ ಸರಿಪಡಿಸಿ ಅಂತಾ ದೇವರು ಏನಾದ್ರೂ ಕೇಳಿತ್ತಾ? ಇದನ್ನ ನೋಡಿದ್ರೆ ಮತ್ತೊಂದು ವಿವಾದ ಶುರುವಾಗುವ ಲಕ್ಷಣ ಇದೆ. ಹಲವು ಹಿಂದೂ ದೇವಾಲಯಗಳಿಗೆ ಟಿಪ್ಪು ಭೂಮಿ ದಾನ ಮಾಡಿದ್ದ. ಆ ಸಮಾಜಕ್ಕೆ ಕನಸ್ಸಿನಲ್ಲಿ ಬರುತ್ತೆ, ಅವರಿಗೆ ಭೂಮಿ ಬಿಟ್ಟುಕೊಡ್ತಿರಾ? ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರುವ ಉದಾಹರಣೆ ಇದೆ. ಮುಸಲ್ಮಾನರು ಬಂದು ಕೇಳಿದ್ರೆ ದೇವಸ್ಥಾನದವನ್ನು ಬಿಟ್ಟುಕೊಡ್ತಿರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅರಮನೆಯಂತಹ ಗುಡಿಸಲು ಬಿದ್ದೋಯ್ತು, ಬೆಳ್ಳನಿಗೊಂದು ‘ಸೂರು’ ಕೊಡಿಸುವಿರಾ?

ಇದನ್ನೂ ಓದಿ
Image
Stress: ಮಾನಸಿಕ ಒತ್ತಡವನ್ನು ದೂರ ಮಾಡುವ ಈ ಆಸನಗಳ ಬಗ್ಗೆ ತಿಳಿಯಿರಿ
Image
ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಬರಹ ಬದಲಿಸಲು ಆಗುವುದಿಲ್ಲ: ಬಿಸಿ ನಾಗೇಶ್
Image
ಅರಮನೆಯಂತಹ ಗುಡಿಸಲು ಬಿದ್ದೋಯ್ತು, ಬೆಳ್ಳನಿಗೊಂದು ‘ಸೂರು’ ಕೊಡಿಸುವಿರಾ?
Image
ಮುಹೂರ್ತ ಸಮಯಕ್ಕೆ ವಧು ನಾಪತ್ತೆ! ಚಿಕ್ಕಬಳ್ಳಾಪುರ ಕಲ್ಯಾಣ ಮಂಟಪದಲ್ಲಿ ಮುರಿದು ಬಿತ್ತು ಮದುವೆ

ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಹೆಚ್​ಡಿಕೆ, ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣ ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಬರಲ್ಲ. ಆದರೆ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಗುಂಪುಗಾರಿಕೆ ಮತ್ತಷ್ಟು ಹೆಚ್ಚಾಗಲು ಅವಕಾಶವಾಗಬಹುದು ಎಂದರು.

ತಾಂಬೂಲ ಪ್ರಶ್ನೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ: ತಾಂಬೂಲ ಪ್ರಶ್ನೆಗಿಂತ ಕೇಶವಕೃಪಾದಲ್ಲೇ ಎಲ್ಲವೂ ತೀರ್ಮಾನ ಮಾಡಲಾಗುತ್ತದೆ. ಅಲ್ಲಿಂದ ಬರುವ ಸಂದೇಶಗಳನ್ನ ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಉತ್ತಮ ಭವಿಷ್ಯ ಇಲ್ಲ. ಇನ್ನೂ ಒಂದು ವರ್ಷ ಇಂತಹ ಬೆಳವಣಿಗೆಗಳು ನಡೆಯುತ್ತಿರುತ್ತವೆ‌. ಶಾಂತಿ ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಹೇಳಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Wed, 25 May 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ