ಮುಹೂರ್ತ ಸಮಯಕ್ಕೆ ವಧು ನಾಪತ್ತೆ! ಚಿಕ್ಕಬಳ್ಳಾಪುರ ಕಲ್ಯಾಣ ಮಂಟಪದಲ್ಲಿ ಮುರಿದು ಬಿತ್ತು ಮದುವೆ

ನಿನ್ನೆ ರಾತ್ರಿ ನಡೆದ ಅರತಕ್ಷತೆಯಲ್ಲಿ ಬಾಗಿಯಾಗಿದ್ದ 22 ವರ್ಷದ ವಧು ಇಂದು ನಾಪತ್ತೆಯಾಗಿದ್ದಾಳೆ. ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿರುವ ಅನುಮಾನ ಇದೆ. ಗೌರಿಬಿದನೂರಿನ ಕರೇಕಲ್ಲಹಳ್ಳಿ ನಿವಾಸಿಯಾಗಿರುವ ಸುರೇಶ್ ಜೊತೆ ಮದುವೆ ನಿಗದಿಯಾಗಿತ್ತು.

ಮುಹೂರ್ತ ಸಮಯಕ್ಕೆ ವಧು ನಾಪತ್ತೆ! ಚಿಕ್ಕಬಳ್ಳಾಪುರ ಕಲ್ಯಾಣ ಮಂಟಪದಲ್ಲಿ ಮುರಿದು ಬಿತ್ತು ಮದುವೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: sandhya thejappa

May 25, 2022 | 5:24 PM

ಚಿಕ್ಕಬಳ್ಳಾಪುರ: ಇತ್ತೀಚೆಗೆ ಮದುವೆ (Marriage) ಕಲ್ಯಾಣ ಮಂಟಪದಲ್ಲೇ ಮುರಿದು ಬೀಳುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಮೂರು ದಿನಗಳ ಹಿಂದೆ ಅಂದರೆ ಇದೇ ತಿಂಗಳು 22ಕ್ಕೆ ಮೈಸೂರಿನಲ್ಲೂ (Mysuru) ತಾಳಿ ಕಟ್ಟುವ ವೇಳೆಗೆ ವಧು ತಲೆ ಸುತ್ತುತ್ತಿರುವಂತೆ ಕೆಳಗೆ ಬಿದ್ದು ಹೈಡ್ರಾಮ ಮಾಡಿದ್ದಳು. ಇದೇ ರೀತಿ ಜಿಲ್ಲೆಯಲ್ಲೂ ಇಂದು (ಮೇ 25) ಮದುವೆ ಮುಹೂರ್ತ ಸಮಯಕ್ಕೆ ವಧು ನಾಪತ್ತೆಯಾಗಿದ್ದು, ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟಪಲ್ಲಿ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.

ನಿನ್ನೆ ರಾತ್ರಿ ನಡೆದ ಅರತಕ್ಷತೆಯಲ್ಲಿ ಬಾಗಿಯಾಗಿದ್ದ 22 ವರ್ಷದ ವಧು ಇಂದು ನಾಪತ್ತೆಯಾಗಿದ್ದಾಳೆ. ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿರುವ ಅನುಮಾನ ಇದೆ. ಗೌರಿಬಿದನೂರಿನ ಕರೇಕಲ್ಲಹಳ್ಳಿ ನಿವಾಸಿಯಾಗಿರುವ ಸುರೇಶ್ ಜೊತೆ ಮದುವೆ ನಿಗದಿಯಾಗಿತ್ತು. ವಧು ಗೌರಿಬಿದನೂರಿನ ನಾಗಿರೆಡ್ಡ ಬಡಾವಣೆಯ ನಿವಾಸಿ. ಇಂದು ಬೆಳಿಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಬೇಕಿತ್ತು. ಆದರೆ ಹುಡುಗಿ ನಾಪತ್ತೆಯಾಗಿರುವ ಕಾರಣ ಮದುವೆ ಅರ್ಧಕ್ಕೆ ನಿಂತು ಹೋಗಿದೆ.

ಪ್ರಿಯಕರ ಪ್ರವೀಣ್ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ಸುರೇಶ್ ಸಂಬಂಧಿಕರು ಗೌರಿಬಿದನೂರು ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದಾರೆ. ತಮಗೆ ಅನ್ಯಾಯ ಆಗಿದೆ. ಮದುವೆಗೆ ಖರ್ಚು ಮಾಡಿrರುವ ದುಡ್ಡು ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ವಧು ಹಾಗೂ ಪ್ರಿಯಕರ ಪ್ರವೀಣ್, ತಮ್ಮ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಶಾಲೆಗೆ ಹೋಗಬೇಕಾದರೆ ತೆಪ್ಪಗಳೇ ವಾಹನ, “ರಾಜ್ಯದಿಂದ ಕೈಬಿಡಿ, ನಾವು ತೆಲಂಗಾಣಕ್ಕೆ ಸೇರಿಕೊಳ್ತಿವಿ”: ಜನಾಕ್ರೋಶ

ಮೈಸೂರಿನಲ್ಲೂ ಮುರಿದು ಬಿದ್ದಿದ್ದ ಮ್ಯಾರೇಜ್: ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್.ಡಿ.ಕೋಟೆಯ ಯುವಕನ ಜತೆ ಮದುವೆ ನಡೆಯಬೇಕಿತ್ತು. ಆದ್ರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ. ಸುಣ್ಣದಕೇರಿಯಲ್ಲಿ ನೆರೆಮನೆ ಯುವಕನನ್ನು ಸಿಂಚನ ಪ್ರೀತಿಸುತ್ತಿದ್ದಳು. ಸಿಂಚನ ಪ್ರಿಯಕರ ತನ್ನ ಪ್ರೇಯಸಿಯನ್ನು ನೀನು ಮದುವೆಯಾಗಬೇಡ ಎಂದು ವರನಿಗೆ ಮೆಸೇಜ್ ಮಾಡಿದ್ದ. ಈ ವೇಳೆ ವರನ ಪೋಷಕರು ವಧುವಿನ ಪೋಷಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದೇವೆಂದು ವಾಗ್ದಾಳಿ ನಡೆಸಿದ್ದರು. ಖರ್ಚು ಮಾಡಿದ್ದ ಹಣ ಕೊಡುವಂತೆ ವರನ ಪೋಷಕರು ಆಗ್ರಹಿಸಿದ್ದರು.

ಇದನ್ನೂ ಓದಿ

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada