ತಾಳಿ ಕಟ್ಟುವಾಗ ಕುಸಿದು ಬಿದ್ದಂತೆ ನಟಿಸಿದ ವಧು; ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ; ಠಾಣೆ ಮೆಟ್ಟಿಲೇರಿದ ಪ್ರಕರಣ

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್.ಡಿ.ಕೋಟೆಯ ಯುವಕನ ಜತೆ ಮದುವೆ ನಡೆಯಬೇಕಿತ್ತು. ಆದ್ರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ.

ತಾಳಿ ಕಟ್ಟುವಾಗ ಕುಸಿದು ಬಿದ್ದಂತೆ ನಟಿಸಿದ ವಧು; ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ; ಠಾಣೆ ಮೆಟ್ಟಿಲೇರಿದ ಪ್ರಕರಣ
ತಾಳಿ ಕಟ್ಟುವಾಗ ಕುಸಿದು ಬಿದ್ದಂತೆ ನಟಿಸಿದ ವಧು; ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ; ಠಾಣೆ ಮೆಟ್ಟಿಲೇರಿದ ಪ್ರಕರಣ
Follow us
| Updated By: ಆಯೇಷಾ ಬಾನು

Updated on:May 22, 2022 | 4:14 PM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊನೆ ಕ್ಷಣದಲ್ಲಿ ಮದುವೆ ಮುರಿದುಬಿದ್ದ ಘಟನೆ ನಡೆದಿದೆ. ತಾಳಿ ಕಟ್ಟುವ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ಕುಸಿದು ಬಿದ್ದಂತೆ ವಧು ನಾಟಕವಾಡಿದ್ದು ಪ್ರಿಯಕರನನ್ನು ಮದುವೆಯಾಗುವುದಾಗಿ ಹೈಡ್ರಾಮಾ ಮಾಡಿದ್ದಾಳೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್.ಡಿ.ಕೋಟೆಯ ಯುವಕನ ಜತೆ ಮದುವೆ ನಡೆಯಬೇಕಿತ್ತು. ಆದ್ರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ. ಸುಣ್ಣದಕೇರಿಯಲ್ಲಿ ನೆರೆಮನೆ ಯುವಕನನ್ನು ಸಿಂಚನ ಪ್ರೀತಿಸುತ್ತಿದ್ದಳು. ಸಿಂಚನ ಪ್ರಿಯಕರ ತನ್ನ ಪ್ರೇಯಸಿಯನ್ನು ನೀನು ಮದುವೆಯಾಗಬೇಡ ಎಂದು ವರನಿಗೆ ಮೆಸೇಜ್ ಮಾಡಿದ್ದ. ಈ ವೇಳೆ ವರನ ಪೋಷಕರು ವಧುವಿನ ಪೋಷಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದೇವೆಂದು ವಾಗ್ದಾಳಿ ನಡೆಸಿದ್ದರು. ಖರ್ಚು ಮಾಡಿದ್ದ ಹಣ ಕೊಡುವಂತೆ ವರನ ಪೋಷಕರು ಆಗ್ರಹಿಸಿದ್ದು ಮದುವೆ ನಿಲ್ಲಿಸಿ ವಧು, ವರನ ಪೋಷಕರು ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೆ.ಆರ್​.ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಠಾಣೆ ಮೆಟ್ಟಿಲೇರಿದ್ದ ಪೋಷಕರು ಪರಸ್ಪರ ದೂರು ದಾಖಲಿಸದೆ ಠಾಣೆಯಿಂದ ತೆರಳಿದ್ದಾರೆ. ಕೆ.ಆರ್​.ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ಮಾತುಕತೆ ಮೂಲಕ ಪೋಷಕರು ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಯುವತಿ ಪೋಷಕರು ಚಿನ್ನ, ಬೆಳ್ಳಿ ಆಭರಣಗಳ ಖರ್ಚು ನೀಡಿದ್ದಾರೆ. ಖರ್ಚಿನ ಹಣ ಪಡೆದು ಹುಡುಗನ ಮನೆಯವರು ತೆರಳಿದ್ದಾರೆ. ಪೊಲೀಸ್ ಠಾಣೆಯಲ್ಲೇ ವಧುವಿನ‌ ಪೋಷಕರು ನಷ್ಟ ಭರಿಸಿಕೊಟ್ಟಿದ್ದಾರೆ. ಸದ್ಯ ಪೋಷಕರ ಜೊತೆ ಯುವತಿ ಆಟೋದಲ್ಲಿ ಮನೆಗೆ ವಾಪಸಾಗಿದ್ದಾಳೆ.

Published On - 3:57 pm, Sun, 22 May 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ