AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರ ಅಭಿವೃದ್ಧಿಗೆ ಜಮೀರ್ ಅಹ್ಮದ್ ಕೊಡುಗೆ ಏನು? ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ

ಬಿ.ಎಂ.ಫಾರೂಕ್ರನ್ನ ಚುನಾವಣೆಗೆ ನಿಲ್ಲಿಸಿ ಕತ್ತು ಕೊಯ್ದಿದ್ಯಾರು? ಬಿ.ಎಂ.ಫಾರೂಕ್ ವಿರುದ್ಧ ರಾಮಸ್ವಾಮಿಗೆ ಮತ ಹಾಕಿದ್ಯಾರು? ಇವರಿಂದ ಮುಸಲ್ಮಾನರು ಉದ್ಧಾರ ಆಗಿದ್ದಾರಾ? ಎಂದು ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮುಸ್ಲಿಮರ ಅಭಿವೃದ್ಧಿಗೆ ಜಮೀರ್ ಅಹ್ಮದ್ ಕೊಡುಗೆ ಏನು? ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್
TV9 Web
| Edited By: |

Updated on:Oct 25, 2021 | 11:53 AM

Share

ಮೈಸೂರು: ಬ್ರದರ್ ಬ್ರದರ್ ಎಂದು ಮುಸಲ್ಮಾನರ ಕತ್ತು ಕೋಯ್ತಾರೆ ಎಂಬ ಶಾಸಕ ಜಮೀರ್ ಅಹ್ಮದ್ ಆರೋಪಕ್ಕೆ ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಬಿ.ಎಂ.ಫಾರೂಕ್ರನ್ನ ಚುನಾವಣೆಗೆ ನಿಲ್ಲಿಸಿ ಕತ್ತು ಕೊಯ್ದಿದ್ಯಾರು? ಬಿ.ಎಂ.ಫಾರೂಕ್ ವಿರುದ್ಧ ರಾಮಸ್ವಾಮಿಗೆ ಮತ ಹಾಕಿದ್ಯಾರು? ಇವರಿಂದ ಮುಸಲ್ಮಾನರು ಉದ್ಧಾರ ಆಗಿದ್ದಾರಾ? ಎಂದು ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಹೋಗಲಿ ರಾಮಸ್ವಾಮಿಯವರನ್ನಾದ್ರೂ ಉಳಿಸಿಕೊಂಡಿದ್ದಾರಾ? ಇವರಿಂದ ನಾವು ಕಲಿಯುವುದು ಏನೇನೂ ಇಲ್ಲ. ಇವರೆಲ್ಲಾ ಚುನಾವಣೆ ಉದ್ದಕ್ಕೂ ಹೀಗೆ ಮಾತನಾಡುತ್ತಿರಲಿ. ನನಗೆ ಒಳ್ಳೆಯದು, ನಾನೂ ಅದನ್ನೇ ಆಶಿಸುತ್ತೇನೆ ಎಂದು ಮೈಸೂರಿನಲ್ಲಿ ಟೀಕಿಸಿದ್ದಾರೆ.

ಸಿದ್ದರಾಮಯ್ಯರಿಂದ ಪ್ರತಿ ಸಭೆಯಲ್ಲಿ ನನ್ನ ವಿರುದ್ಧ ಆರೋಪವಾಗಿದೆ ಇನ್ನು ಸಿದ್ದರಾಮಯ್ಯ & ಟೀಂ ಸಿಂದಗಿಯಲ್ಲಿ ಕುಳಿತದ್ದೇ ಜೆಡಿಎಸ್ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಲು ಎಂದು ಮೈಸೂರಿನಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಸಿಂದಗಿಯಲ್ಲಿ ಸ್ಪರ್ಧೆ ಇರುವುದೇ ಜೆಡಿಎಸ್, ಬಿಜೆಪಿ ಮಧ್ಯೆ. ಆದ್ರೂ ಕಾಂಗ್ರೆಸ್‌ನವರು ಯಾಕೆ ಅಲ್ಲಿ ಬೀಡುಬಿಟ್ಟಿದ್ದಾರೆ. ಅವರ ಉದ್ದೇಶ ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸುವುದು ಎಂದಿದ್ದಾರೆ.

ಸಿದ್ದರಾಮಯ್ಯರಿಂದ ಪ್ರತಿ ಸಭೆಯಲ್ಲಿ ನನ್ನ ವಿರುದ್ಧ ಆರೋಪವಾಗಿದೆ. ಹೊಲ ಉಳುಮೆ ಮಾಡಿದ್ದಾನಾ? ಎಂದು ಆರೋಪ ಮಾಡ್ತಾರೆ. ನಿಜವಾದ ರೈತ ನಾನು, ಕುರಿಮಂದೆ ಮಧ್ಯೆ ಊಟ ಮಾಡಿ‌ದ್ದೇನೆ. ಕೃಷಿಕನೋ ಅಲ್ಲವೋ ಅಂತ ಬಿಡದಿ ತೋಟಕ್ಕೆ ಬಂದು ನೋಡಲಿ. ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ. ಅವರದ್ದು ಫಾರ್ಮ್‌ಹೌಸ್ ಇದ್ಯಲ್ಲ, ಅಲ್ಲಿ ಏನು ಬಿತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಲ್ಪನೆ ವಿಪರೀತ, ಅದಕ್ಕೆ ಯಾವುದೇ ಆಧಾರವಿಲ್ಲ; ಜಮೀರ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Published On - 11:47 am, Mon, 25 October 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್