ಮೈಸೂರು: ಮದುವೆ ಮನೆಯಲ್ಲೂ ಕ್ರಿಕೆಟ್ ಕ್ರೇಜ್; ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಅವಕಾಶ!

Mysuru News: ಮೈಸೂರಿನ ಅಜಯ್ ಶಾಸ್ತ್ರಿ ಹಾಗೂ ವರಲಕ್ಷ್ಮಿ ಅವರ ವಿವಾಹ ಮಹೋತ್ಸವದಲ್ಲಿ ಕ್ರಿಕೆಟ್ ಅಭಿಮಾನವೂ ಕಂಡುಬಂದಿದೆ. ವಿವಾಹಕ್ಕೆ ಬಂದವರು ಮ್ಯಾಚ್ ಮಿಸ್ ಮಾಡಿಕೊಳ್ಳಬಾರದು ಎಂದು ಎಲ್​ಇಡಿ‌ ಸ್ಕ್ರೀನ್ ಮೂಲಕ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಮೈಸೂರು: ಮದುವೆ ಮನೆಯಲ್ಲೂ ಕ್ರಿಕೆಟ್ ಕ್ರೇಜ್; ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಅವಕಾಶ!
ಭಾರತ- ಪಾಕಿಸ್ತಾನ ಕ್ರಿಕೆಟ್

ಮೈಸೂರು: ಮದುವೆ ಮನೆಯಲ್ಲಿ ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಕ್ರೇಜ್ ಕಂಡುಬಂದಿದೆ. ಮದುವೆ ಮನೆಯಲ್ಲಿ ಎಲ್​ಇಡಿ ಸ್ಕ್ರೀನ್ ಮೂಲಕ ಮ್ಯಾಚ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಮದುವೆಗೆ ಬಂದ ಆತಿಥಿಗಳಿಗೆ ಮ್ಯಾಚ್ ನೋಡಲು ಮದುಮಕ್ಕಳು ಅವಕಾಶ ಮಾಡಿಕೊಟ್ಟಿದ್ದಾರೆ. ಮೈಸೂರಿನ ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆಯಲ್ಲಿ ಕ್ರಿಕೆಟ್ ಕ್ರೇಜ್ ಜೋರಾಗಿದೆ. ಮೈಸೂರಿನ ಅಜಯ್ ಶಾಸ್ತ್ರಿ ಹಾಗೂ ವರಲಕ್ಷ್ಮಿ ಅವರ ವಿವಾಹ ಮಹೋತ್ಸವದಲ್ಲಿ ಕ್ರಿಕೆಟ್ ಅಭಿಮಾನವೂ ಕಂಡುಬಂದಿದೆ. ವಿವಾಹಕ್ಕೆ ಬಂದವರು ಮ್ಯಾಚ್ ಮಿಸ್ ಮಾಡಿಕೊಳ್ಳಬಾರದು ಎಂದು ಎಲ್​ಇಡಿ‌ ಸ್ಕ್ರೀನ್ ಮೂಲಕ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಕೋರಮಂಗಲ: ಪಬ್​ನಲ್ಲಿ ಮ್ಯಾಚ್ ನೋಡಲು ಅವಕಾಶ
ಇಂಡಿಯಾ ಪಾಕ್ ಮ್ಯಾಚ್ ಹಿನ್ನೆಲೆಯಲ್ಲಿ ಕೋರಮಂಗಲದ ಪಬ್​ನಲ್ಲಿ ಮ್ಯಾಚ್ ನೋಡಲು ದೊಡ್ಡ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ಪಂದ್ಯವನ್ನು ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಕುಟುಂಬ ಸಮೇತರಾಗಿ ಬಂದು ಮಾಚ್ ನೋಡುತ್ತಿದ್ದಾರೆ. ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ. ಗೆದ್ದು ಬಾ ಭಾರತ ಎಂದು ವಿಷ್ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಗೆಲ್ಲಲು 152 ರನ್ ಗುರಿ
ಪಾಕಿಸ್ತಾನಕ್ಕೆ ಗೆಲ್ಲಲು ಭಾರತ ತಂಡ 152 ರನ್ ಗುರಿ ನೀಡಿದೆ. ವಿಶ್ವಕಪ್ ಟಿ-20 ಪಂದ್ಯದಲ್ಲಿ ಭಾರತ-ಪಾಕ್​ ಹಣಾಹಣಿ ನಡೆಯುತ್ತಿದೆ. 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 151 ರನ್‌ ಗಳಿಸಿದೆ. ಭಾರತ ತಂಡದ ಪರ ರೋಹಿತ್ 0, ರಾಹುಲ್‌ 3 ರನ್‌, ಸೂರ್ಯಕುಮಾರ್‌ ಯಾದವ್‌ 11, ರಿಷಭ್‌ 39 ರನ್‌, ರವೀಂದ್ರ ಜಡೇಜಾ 13, ವಿರಾಟ್ ಕೊಹ್ಲಿ 57 ರನ್‌ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ 11 ಹಾಗೂ ಭುವನೇಶ್ವರ್‌ ಔಟಾಗದೆ 5 ರನ್‌ ದಾಖಲಿಸಿದ್ದಾರೆ. ಪಾಕಿಸ್ತಾನ ತಂಡದ ಪರ ಶಾಹೀನ್ ಅಫ್ರಿದಿಗೆ 3 ವಿಕೆಟ್‌ ಲಭಿಸಿದೆ. ಹಸನ್‌ಗೆ 2, ಶದಾಬ್‌, ಹ್ಯಾರಿಸ್‌ ರೌಫ್‌ಗೆ ತಲಾ 1 ವಿಕೆಟ್‌ ಲಭ್ಯವಾಗಿದೆ.

ಇದನ್ನೂ ಓದಿ: IND vs PAK LIVE Score, T20 World Cup 2021: ಪಾಕ್ ಗೆಲುವಿಗೆ 151 ರನ್ ಟಾರ್ಗೆಟ್; 100 ರನ್ ಪೂರ್ಣ

ಇದನ್ನೂ ಓದಿ: India vs Pakistan: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

Click on your DTH Provider to Add TV9 Kannada