ಮೈಸೂರು: ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ(Rain). ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಸಿಲು ಮಳೆಯಾಗುತ್ತಿದೆ. ಸೂರ್ಯನ(Son) ತಾಪಕ್ಕೆ ಮಳೆರಾಯ ತಂಪೆರದಂತೆ ಆಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಮೈಸೂರು ನಗರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ದಿವಾನ್ಸ್ ರಸ್ತೆಯ ವಿದ್ಯುತ್ ಟ್ರಾನ್ಸಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿರುವುದೇ ಇದಕ್ಕೆ ಕಾರಣ. ಮಳೆಯಿಂದಾಗಿ ವಿದ್ಯುತ್ ಟ್ರಾನ್ಸಫಾರ್ಮರ್‌ನಲ್ಲಿ ಬೆಂಕಿ(Fire) ಕಾಣಿಸಿಕೊಂಡಿದ್ದು, ಚೆಸ್ಕಾಂಗೆ ಮಾಹಿತಿ ನೀಡಿದರು ಸಿಬ್ಬಂದಿಗಳು ಬಂದಿಲ್ಲ. ಹೀಗಾಗಿ ಸುತ್ತ ಮುತ್ತಲಿನ ಜನರು ಆತಂಕದಲ್ಲಿದ್ದಾರೆ.
ಬೆಂಗಳೂರು, ಬೆಳಗಾವಿಯಲ್ಲು ಮಳೆ
ಇಂದು ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗಿದೆ. ಇನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಬಿಸಿಲಿನ ಬೆಗೆಗೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಕಳೆದ ಒಂದು ಗಂಟೆಯಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಮರಗಳು ಧರೆಗುರುಳಿದಿದೆ. ಚಿಕ್ಕೋಡಿ ಅಥಣಿ ರಸ್ತೆ ಮೇಲೆ ಮರ ಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಚಿಕ್ಕೋಡಿ ತಾಲೂಕಿನ ನಾಗರಮನ್ನೊಳ್ಳಿ ಗ್ರಾಮದ ತೋಟದ ಮನೆ ಸೀಟ್ ಬಿರುಗಾಳಿ ಸಹಿತ ಮಳೆಯಿಂದ ಹಾರಿ ಹೋಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಅಕಾಲಿಕ ಮಳೆ
ಕೊಪ್ಪಳ ಜಿಲ್ಲೆ ಕನಕಗಿರಿ ಹಾಗೂ ತಾವರಗೇರಾದಲ್ಲಿ ಅಕಾಲಿಕ ಮಳೆಯಾಗಿದೆ. ತಾವರಗೇರಾದಲ್ಲಿ ಬಿರುಗಾಳಿ ಸಹಿತ ಮಳೆಗೆ ಜನರು ಕಂಗಾಲಾಗಿದ್ದಾರೆ. ಮಳೆಗೆ ಕೊಪ್ಪಳದಲ್ಲಿ ಬಿರುಗಾಳಿಗೆ ಪ್ಲೆಕ್ಸ್ ಕಿತ್ತುಹೋಗಿದೆ. ಬಿರುಗಾಳಿಗೆ ನಗರವೆಲ್ಲ ದೂಳುಮಯವಾಗಿದ್ದು, ಕಿತ್ತು ಹೋರ ಬಸ್ ನಿಲ್ದಾಣದ ಬಳಿ ಹಾಕಿದ ಪ್ಲೆಕ್ಸ್ಗಳು ನೆಲಕ್ಕೆ ಬಿದ್ದಿವೆ.
ಸಿಡಿಲು ಬಡಿದು ಕುರಿಗಾಹಿ ಸಾವು
ಸಿಡಿಲು ಬಡಿದು ಕುರಿಗಾಹಿ ಸಾವನ್ನಪ್ಪಿದ ಘಟನೆ ಕೊಪ್ಪಳದ ಗಾಣದಾಳ ಗ್ರಾಮದಲ್ಲಿ ನಡೆದಿದೆ. ಸುನೀಲ್ ಬಸರಿಹಾಳ(21) ಮೃತ ಕುರಿಗಾಹಿ. ಸಿಡಿಲಿಗೆ ಕುರಿಗಾಹಿ ಜೊತೆಗೆ 13 ಕುರಿಗಳು ಕೂಡ ಸಾವನ್ನಪ್ಪಿದೆ. ಕುರಿ ಮೇಯಿಸಲು ಹೋಗಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಂದಾಯ, ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ರಾಯಚೂರು: ಬಿಸಿಲ ಬೇಗೆಗೆ ಬೆಂದಿದ್ದ ರಾಯಚೂರಿಗೆ ತಂಪೆರೆದ ವರುಣ
ಬಿಸಿಲ ಬೇಗೆಗೆ ಬೆಂದಿದ್ದ ರಾಯಚೂರಿಗೆ ವರುಣ ತಂಪೆರೆದಿದ್ದಾನೆ. ರಾಯಚೂರು ಜಿಲ್ಲೆಯ ಹಲವೆಡೆ ಮಳೆರಾಯನ ಅರ್ಭಟ ಇಂದು ಜೋರಾಗಿತ್ತು. ಬಿರುಗಾಳಿ, ಗುಡುಗು ಸಹೀತ ಮಳೆಯಾಗಿದ್ದು, ಅಕಾಲಿಕ ಮಳೆಗೆ ಜನರು ಸಖತ್ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ:
Cyclone Asani: ಅಸಾನಿ ಚಂಡಮಾರುತದ ಅಬ್ಬರದಿಂದ ಸೋಮವಾರದವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ
Karnataka Rain Today: ಬೆಂಗಳೂರು, ಕೊಡಗು, ಕರಾವಳಿ ಸೇರಿ ಹಲವೆಡೆ ಇಂದು ಗುಡುಗು ಸಹಿತ ಮಳೆ
Published On - 9:05 pm, Sat, 19 March 22