ಕಣ್ಣಾಮುಚ್ಚಾಲೆ ಆಡ್ತಿದ್ದ ನರಹಂತಕ ಹುಲಿ ಬಲೆಗೆ ಬಿತ್ತಾ ಅಥವಾ ಇನ್ನೂ ಒಂದು ಇದೆಯಾ? ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದೇನು?
ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಇದು ಒಂದು ರೀತಿ ತಾತ್ಕಾಲಿಕ ಬ್ರೇಕ್ ಹಾಕಿದಂತಾಗಿದೆ. ಅರಣ್ಯ ಇಲಾಖೆ ಕಾರ್ಯಚರಣೆಯಲ್ಲಿ ಹುಲಿ ಸೆರೆಯಾಗಿದೆ. ಆದ್ರೆ ಒಂದು ಕಡೆ ಸೆರೆಯಾಗಿರೋದು ಮನುಷ್ಯರ ಮೇಲೆ ದಾಳಿ ಮಾಡಿದ್ದ ಹುಲಿಯಾ ? ಅಥವಾ ಬೇರೇನಾ ಅನ್ನೋ ಅನುಮಾನವಿದೆ. ಮತ್ತೊಂದು ಕಡೆ ಚಿರತೆಯ ಬಿಂದಾಸ್ ಓಡಾಟ ಜನರ ನಿದ್ದೆಗೆಡಿಸಿದೆ.
ಮೈಸೂರು ಜಿಲ್ಲೆಯಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ನಂಜನಗೂಡು ಭಾಗದ ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಸೆರೆ ಸಿಕ್ಕಿದೆ. ಎರಡು ಬಾರಿ ಮನುಷ್ಯರ ಮೇಲೆ ದಾಳಿ ಮಾಡಿ ರೈತ ಮಹಿಳೆಯನ್ನ ಕೊಂದಿದ್ದ ಹುಲಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಲಾಕ್ ಆಗಿದೆ. ಮತ್ತೊಂದು ಕಡೆ ಚಿರತೆ ಬಿಂದಾಸ್ ಓಡಾಟ ಜನರ ಆತಂಕಕ್ಕೆ ಕಾರಣವಾಗಿದೆ. ನಂಜನಗೂಡು ತಾಲೂಕಿನ ಬಂಡಿಪುರ ಕಾಡಂಚಿನ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸುಮಾರು 10 ವರ್ಷದ ಗಂಡು ಹುಲಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಬಂಧಿಯಾಗಿದೆ. ಸೆರೆ ಹಿಡಿಯಲಾಗಿರುವ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ ಸೆರೆ ಸಿಕ್ಕಿರುವ ಹುಲಿ ಆರೋಗ್ಯವಾಗಿದೆ.
ಸೆರೆಯಾಗಿರುವ ಹುಲಿ ಕಳೆದ ಶುಕ್ರವಾರ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರೈತ ಮಹಿಳೆ ರತ್ನಮ್ಮರನ್ನು ಬಲಿ ಪಡೆದುಕೊಂಡಿತ್ತು. ರತ್ನಮ್ಮ ಕಾಡಂಚಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಮೇಲೆಗರಿದ ಹುಲಿ ಆಕೆಯನ್ನು ಕೊಂದು ಕಾಡಿಗೆ ಮೃತದೇಹವನ್ನು ಎಳೆದೋಯ್ದಿತ್ತು. ಇದಕ್ಕೂ ಮುನ್ನ ಒಂದು ತಿಂಗಳ ಹಿಂದೆ ಇದೇ ವ್ಯಾಪ್ತಿಯ ಮಹದೇವ ನಗರದ ಹೊರವಲಯದಲ್ಲಿ ದನಗಾಯಿ ವೀರಭದ್ರ ಬೋವಿ ಮೇಲೆ ದಾಳಿ ಮಾಡಿತ್ತು. ಘಟನೆಯಲ್ಲಿ ವೀರಭದ್ರ ಬೋವಿ ಗಾಯಗೊಂಡಿದ್ದರು.
ಹುಲಿ ದಾಳಿ ಹೆಚ್ಚಾದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ರತ್ನಮ್ಮ ಪ್ರಕರಣದ ನಂತರ ಅಲರ್ಟ್ ಆದ ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕುಗೊಳಿಸಿತ್ತು. ಡ್ರೋನ್ ಕ್ಯಾಮೆರಾ, ಟ್ರ್ಯಾಪ್ ಕ್ಯಾಮೆರಾ ಹಾಗೂ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿತ್ತು. ನೂರಾರು ಸಿಬ್ಬಂದಿ ಹಗಕು ರಾತ್ರಿ ಹುಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಿನ್ನೆ ಹೆಡಿಯಾಲ ಬಾರ್ಡರ್ ವ್ಯಾಪ್ತಿಯ ಕಲ್ಲಾರೆಕಂಡಿ ಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮರಾ ದಲ್ಲಿ ಹುಲಿ ಪೋಟೋ ಸೆರೆಯಾಗಿತ್ತು. ದನದ ಮಾಂಸ ತಿಂದು ಹೋಗಿತ್ತು. ಬಳಿಕ ಅದೇ ಜಾಗದಲ್ಲಿ ಬೋನ್ ಇರಿದಲಾಗಿತ್ತು. ಇಂದು ಮುಂಜಾನೆ ಅದೇ ಜಾಗಕ್ಕೆ ಹುಲಿ ಬಂದಿದೆ. ತಕ್ಷಣ ಅಲರ್ಟ್ ಆದ ಸಿಬ್ಬಂದಿ ಅರವಳಿಕೆ ಚುಚ್ಚು ಮದ್ದು ಹುಲಿ ನೀಡಿ ಹುಲಿಯನ್ನ ಸರೆ ಹಿಡಿದಿದ್ದಾರೆ.
Also Read: ಚಿತ್ರದುರ್ಗದಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಇರುವ ಪ್ರೌಢ ಶಾಲೆ, ಪಿಯು ಕಾಲೇಜು ನಿರ್ಲಕ್ಷ್ಯಕ್ಕೆ ಗುರಿ
ಹುಲಿ ಸೆರೆ ಸಿಕ್ಕಿದ್ದರು ಜನರ ಆತಂಕ ದೂರವಾಗಿಲ್ಲ. ಕಾರಣ ಕ್ಯಾಮೆರಾದಲ್ಲಿ ಎರಡು ಹುಲಿಗಳು ಪತ್ತೆಯಾಗಿದ್ದವು. ಜೊತೆಗೆ ನೆನ್ನೆ ರಾತ್ರಿ ನಂಜನಗೂಡಿನ ಗ್ರಾಮದಲ್ಲಿ ಚಿರತೆಯೊಂದು ಬಿಂದಾಸ್ ಆಗಿ ಓಡಾಡುತ್ತಿರುವುದು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸಮೀಪದ ಗೌಡರ ಹುಂಡಿ ಗ್ರಾಮದ ಜಮೀನುಗಳ ಮಧ್ಯೆ ಚಿರತೆ ಬಿಂದಾಸ್ ಆಗಿ ಸಾಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಗ್ರಾಮದ ಮುಖ್ಯರಸ್ತೆಯ ಸಮೀಪದ ಜಮೀನಿನ ಕಾಲುದಾರಿಯಲ್ಲಿ ರಾತ್ರಿ ಸುಮಾರು 8.30 ರಲ್ಲಿ ಚಿರತೆ ಕಾಣಿಸಿಕೊಂಡಿದೆ. ಶೃಂಗಾರ್ ಎಂಬುವರ ಜಮೀನಿನ ಚಿರತೆ ಓಡಾಟವನ್ನು ರೈತರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ