ಹುಬ್ಬಳ್ಳಿ: ಇರುವೆಗಳ ಕಾಟಕ್ಕೆ ಮಗು ಆಕ್ರಂದನ, ಆಚೆ ಬಂದು ನೋಡಿದರೆ ಕಬ್ಬಿನ ಗದ್ದೆಯಲ್ಲಿ ಗಂಡು ಶಿಶು ಪತ್ತೆ

| Updated By: ಆಯೇಷಾ ಬಾನು

Updated on: Oct 04, 2023 | 11:16 AM

ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿತ್ತು. ಆಗ ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶು ರಕ್ಷಿಸಿ ಆರೈಕೆ ಮಾಡಿದ್ದಾರೆ. ನಂತರ ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಶಿಶುವನ್ನು ರವಾನಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ಇರುವೆಗಳ ಕಾಟಕ್ಕೆ ಮಗು ಆಕ್ರಂದನ, ಆಚೆ ಬಂದು ನೋಡಿದರೆ ಕಬ್ಬಿನ ಗದ್ದೆಯಲ್ಲಿ ಗಂಡು ಶಿಶು ಪತ್ತೆ
ಗಂಡು ಶಿಶು
Follow us on

ಹುಬ್ಬಳ್ಳಿ, ಅ.04: ಕಬ್ಬಿನ ಗದ್ದೆಯಲ್ಲಿ ನವಜಾತ ಶಿಶು (Newborn Baby) ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ (Sugarcane Field) ನವಜಾತ ಶಿಶು ಪತ್ತೆಯಾಗಿದೆ. ಕಬ್ಬಿನ ಗದ್ದೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿ ತಾಯಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಶಿಶು ಅಳುತ್ತಿದ್ದ ಸದ್ದು ಕೇಳಿದ ಗದ್ದೆಯ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಗದ್ದೆಯಲ್ಲಿ ಸಿಕ್ಕ ಗಂಡು ಮಗು ಅಂದಾಜು ಮೂರು ಕೆಜಿ ತೂಕವಿದೆ.

ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿತ್ತು. ಆಗ ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶು ರಕ್ಷಿಸಿ ಆರೈಕೆ ಮಾಡಿದ್ದಾರೆ. ನಂತರ ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಶಿಶುವನ್ನು ರವಾನಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗುವಿಗೆ ಯಾವ ಎಣ್ಣೆಯಿಂದ ಮಸಾಜ್​​ ಮಾಡುವುದು ಉತ್ತಮ? ತಜ್ಞರು ಹೇಳುವುದೇನು?

ಮೈಸೂರಿನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿ ಇಸ್ಪೀಟ್ ವಿಚಾರಕ್ಕೆ ಗಲಾಟೆ ನಡೆದಿದ್ದು ನಟರಾಜ್(45) ಎಂಬ ವ್ಯಕ್ತಿಯ ಶವ  ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಗಲಾಟೆ ಹಿನ್ನೆಲೆ ಜೊತೆಗಿದ್ದವರು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮುಂಡಿ ಬೆಟ್ಟದ ಬಳಿ ಅಪರೂಪದ ಕಾಡು ಬೆಕ್ಕು ಸಾವು

ಮೈಸೂರು ಜಿಲ್ಲೆ ಚಾಮುಂಡಿ ಬೆಟ್ಟದ ಬಳಿಯಿರುವ ಲಲಿತಾದ್ರಿಪುರ & ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ಬಳಿ ಅಪರೂಪದ ಕಾಡು ಬೆಕ್ಕು ಮೃತಪಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಾಡು ಬೇಕು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:16 am, Wed, 4 October 23