ಮೈಸೂರಿನ ಹುಣಸೂರು ಬಿಜೆಪಿ ಅಭ್ಯರ್ಥಿಗೆ ಪಿತೃ ವಿಯೋಗ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ತಂದೆ ನಿಧನರಾಗಿದ್ದಾರೆ. ಇಂದು (ಏಪ್ರಿಲ್ 25) ಮಧ್ಯಾಹ್ನ 12 ಗಂಟೆಗೆ ದೇವಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅಣ್ಣೇಗೌಡ, ಸೋಮಶೇಖರ್ ಅವರ ತಂದೆ
ಮೈಸೂರು: ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ತಂದೆ ವಿಧಿವಶರಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣೇಗೌಡ (70) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು (ಏಪ್ರಿಲ್ 25) ಮಧ್ಯಾಹ್ನ 12 ಗಂಟೆಗೆ ದೇವಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ದೇವರಹಳ್ಳಿ ಸೋಮಶೇಖರ್, ಈ ಬಾರಿ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದರ ಮಧ್ಯ ತಂದೆ ನಿಧನ ಅವರಿಗೆ ಆಘಾತವಾಗಿದೆ.