Jayachamarajendra Wodeyar Statue: ಮೈಸೂರು ಮಹಾರಾಜರ ಕೊಡುಗೆ ಸ್ಮರಿಸಲು ಚಾಮುಂಡಿಬೆಟ್ಟದ ಗ್ರಾಮಸ್ಥರಿಂದ ಪುತ್ಥಳಿ ನಿರ್ಮಾಣ

ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ಅರಸರ ಪುತ್ಥಳಿ ಅನಾವರಣವಾಗಿದ್ದು ಪ್ರತಿಮೆ ಮೂರುವರೆ ಅಡಿ ಎತ್ತರ, ಮೂರು ಅಡಿ ಅಗಲವಿದೆ. ಚಾಮುಂಡಿ ಬೆಟ್ಟಕ್ಕೆ ಮಹಾರಾಜರ ಕೊಡುಗೆ ಸ್ಮರಿಸಲು ಚಾಮುಂಡಿಬೆಟ್ಟದ ಗ್ರಾಮಸ್ಥರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.

Jayachamarajendra Wodeyar Statue: ಮೈಸೂರು ಮಹಾರಾಜರ ಕೊಡುಗೆ ಸ್ಮರಿಸಲು ಚಾಮುಂಡಿಬೆಟ್ಟದ ಗ್ರಾಮಸ್ಥರಿಂದ ಪುತ್ಥಳಿ ನಿರ್ಮಾಣ
ಮೈಸೂರು ಮಹಾರಾಜರ ಕೊಡುಗೆ ಸ್ಮರಿಸಲು ಚಾಮುಂಡಿಬೆಟ್ಟದ ಗ್ರಾಮಸ್ಥರಿಂದ ಪುತ್ಥಳಿ ನಿರ್ಮಾಣ
Updated By: ಆಯೇಷಾ ಬಾನು

Updated on: Apr 22, 2022 | 12:56 PM

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಮಹಾರಾಜರ ಕೊಡುಗೆ ಸ್ಮರಿಸಲು ಚಾಮುಂಡಿಬೆಟ್ಟದ ಗ್ರಾಮಸ್ಥರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರತಿಮೆಯನ್ನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅನಾವರಣಗೊಳಿಸಿದ್ದಾರೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಟಿ.ದೇವೇಗೌಡ ಸೇರಿ ಮತ್ತಿತರರು ಭಾಗಿಯಾಗಿದ್ದಾರೆ.

ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ಅರಸರ ಪುತ್ಥಳಿ ಅನಾವರಣವಾಗಿದ್ದು ಪ್ರತಿಮೆ ಮೂರುವರೆ ಅಡಿ ಎತ್ತರ, ಮೂರು ಅಡಿ ಅಗಲವಿದೆ. ಇನ್ನು ಇದೇ ವೇಳೆ ದೇವರಾಜ ಮಾರುಕಟ್ಟೆ ನೆಲಸಮಕ್ಕೆ ಪಾರಂಪರಿಕ ಸಮಿತಿ ಒಪ್ಪಿಗೆ ವಿಚಾರ‌ಕ್ಕೆ ಸಂಬಂಧಿಸಿ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ದೇವರಾಜ ಮಾರುಕಟ್ಟೆಯನ್ನ ನೆಲಸಮ ಮಾಡುವುದು ಸಮಂಜಸವಲ್ಲ. ಅದನ್ನ ಉಳಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ತಿಳಿಸಿದ್ದಾರೆ.

ಪಾರಂಪರಿಕ ಸಮಿತಿಯಲ್ಲಿ ಎರಡು ಅಭಿಪ್ರಾಯ ವ್ಯಕ್ತವಾಗಿದೆ. ಪಾರಂಪರಿಕ ಸಮಿತಿಯಲ್ಲಿ ಸರಿಯಾದ ತಜ್ಞರನ್ನ ನೇಮಿಸಿ ಪರಿಶೀಲಿಸಿದರೆ ಮಾರುಕಟ್ಟೆಯನ್ನ ಪುನಶ್ಚೇತನಗೊಳಿಸಬಹುದು. ಜನರ ಭಾವನೆಗೆ ಧಕ್ಕೆ ತರುವ ಕೆಲಸವಾಗಬಾರದು. ಸರ್ಕಾರ ಆ ಕೆಲಸವನ್ನು ಮಾಡುತ್ತೆ ಅನ್ನುವ ಭರವಸೆ ಇದೆ. ರಾಜೇಂದ್ರ ವಿಲಾಸ ಪ್ಯಾಲೇಸ್ ಕೂಡಾ ಶಿಥಿಲಾವಸ್ಥೆ ತಲುಪಿತ್ತು. ಅದನ್ನ ನಾವು ಪುನಶ್ಚೇತನ ಮಾಡಿದ್ದೇವೆ. ಪ್ರಯತ್ನ ಮಾಡಿದರೆ ಯಾವುದು ಆಗಲ್ಲ ಅನ್ನೊಹಾಗಿಲ್ಲ. ಪ್ರಯತ್ನ ಮಾಡಿದರೆ ದೇವರಾಜ ಮಾರುಕಟ್ಟೆ ಉಳಿಸಿಕೊಳ್ಳಬಹುದು. ಸರ್ಕಾರ ಸಹಕಾರ ನೀಡುವ ಭರವಸೆ ನೀಡಿದರೆ ನಾವೇ ಪುನಶ್ಚೇತನಗೊಳಿಸುತ್ತೇವೆ. ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಲರಿಗೂ ಒಂದು ಎಮೋಷನ್ ಇದೆ. ಎಲ್ಲರ ಅಭಿಪ್ರಾಯಗಳ ಸಂಗ್ರಹಿಸಿ ಮುಂದುವರಿಯ ಬೇಕು. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಬಾರದು. ಜನತೆಯ ಅಭಿಪ್ರಾಯ ತೆಗೆದುಕೊಂಡರೆ ಈ ರೀತಿಯ ಪ್ರತಿಭಟನೆಗಳು ಆಗಲ್ಲ ಎಂದು ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಚಾಮುಂಡಿ ಬೆಟ್ಟದ ವಿವಿಧ ದೇವಾಲಯಗಳ ನಿರ್ಮಾಣ, ದೇವಿಕೆರೆ, ನಂದಿವಿಗ್ರಹ, ಸಾವಿರ ಮೆಟ್ಟಿಲುಗಳ ನಿರ್ಮಾಣ, ರಾಜೇಂದ್ರ ವಿಲಾಸ ಅರಮನೆ ಒಳಗೊಂಡಂತೆ ಬೆಟ್ಟವನ್ನು ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿಪಡಿಸಿ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಮಹಾರಾಜರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಮೈಸೂರು ಮಹಾರಾಜರ ಸ್ಮರಣೆಗಾಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಪುತ್ಥಳಿಯನ್ನು ಚಾಮುಂಡಿಬೆಟ್ಟದ ಪ್ರವೇಶದ್ವಾರದ ಬಳಿ ನಿರ್ಮಿಸಲಾಗಿದೆ.

ಇದನ್ನೂ ಓದಿ: SBI Customer Alert: ಕೆವೈಸಿ ನೆಪದಲ್ಲಿ ಆನ್​ಲೈನ್ ವಂಚನೆ; ದೇಶದ ಅತಿದೊಡ್ಡ ಬ್ಯಾಂಕ್​ನಿಂದ 2 ಫೋನ್​ ನಂಬರ್ ನೀಡಿ ಗ್ರಾಹಕರಿಗೆ ಎಚ್ಚರಿಕೆ

Published On - 12:55 pm, Fri, 22 April 22