ಈಡೇರದ ಸರ್ಕಾರಿ ಭರವಸೆ: ನೊಂದು ತಾವೇ ವೆಚ್ಚ ಭರಿಸಿ ಗ್ರಂಥಾಲಯ ಉದ್ಘಾಟನೆ ಮಾಡಿ ಕನ್ನಡ ಪ್ರೇಮ ಹೆಚ್ಚಿಸಿದ ಸೈಯದ್ ಇಸಾಕ್

| Updated By: ಆಯೇಷಾ ಬಾನು

Updated on: Jan 27, 2022 | 9:39 AM

ದೇಶ ಸುತ್ತಿನೋಡು ಕೋಶ ಓದಿ ನೋಡು ಎಂಬ ಮಾತಿನಂತೆ, ಜನರ ಜ್ಞಾನ ಹೆಚ್ಚಿಸಲು ಗ್ರಂಥಾಲಯ ತಲೆ ಎತ್ತಿದೆ. ಮೈಸೂರಿನ ರಾಜೀವ್ ನಗರದ 2ನೇ ಹಂತದಲ್ಲಿ, ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ನಿನ್ನೆ(ಜ.26) ಉದ್ಘಾಟನೆಯಾಯ್ತು.

ಈಡೇರದ ಸರ್ಕಾರಿ ಭರವಸೆ: ನೊಂದು ತಾವೇ ವೆಚ್ಚ ಭರಿಸಿ ಗ್ರಂಥಾಲಯ ಉದ್ಘಾಟನೆ ಮಾಡಿ ಕನ್ನಡ ಪ್ರೇಮ ಹೆಚ್ಚಿಸಿದ ಸೈಯದ್ ಇಸಾಕ್
ಈಡೇರದ ಸರ್ಕಾರಿ ಭರವಸೆ: ನೊಂದು ತಾವೇ ವೆಚ್ಚ ಭರಿಸಿ ಗ್ರಂಥಾಲಯ ಉದ್ಘಾಟನೆ ಮಾಡಿ ಕನ್ನಡ ಪ್ರೇಮ ಹೆಚ್ಚಿಸಿದ ಸೈಯದ್ ಇಸಾಕ್
Follow us on

ಮೈಸೂರು: ಸರ್ಕಾರದ ಭರವಸೆಗಳೇ ಹಾಗೇ. ಯಾವ ವಿಷ್ಯದಲ್ಲೂ ಕೂಡ ಭರವಸೆ, ಭರವಸೆಯಾಗೇ ಉಳಿಯುತ್ತವೆ. ಯಾಕಂದ್ರೆ, ಅಪ್ಪಟ್ಟ ಕನ್ನಡ ಪ್ರೇಮಿಯ ಸಾರ್ವಜನಿಕ ಗ್ರಂಥಾಲಯವೊಂದು, ಕ್ರಿಮಿಗಳ ಬೆಂಕಿಗೆ ಭಸ್ಮವಾಗಿತ್ತು. ಇದ್ರಿಂದ ನೊಂದಿದ್ದ ಅವ್ರು ಕಣ್ಣೀರಾಕಿದ್ರು. ಕೊನೆಗೆ ಅವ್ರ ಸಹಾಯಕ್ಕೆ ನಿಲ್ಲುವ ಮಾತನಾಡಿದ್ದ ಸರ್ಕಾರ, ಕೈಜೋಡಿಸಿರಲಿಲ್ಲ. ಆದ್ರೆ, ಛಲಬಿಡದ ಅವ್ರು, ತಮ್ಮ ಕಾರ್ಯ ನೆನಸು ಮಾಡಿದ್ದಾರೆ.

ದೇಶ ಸುತ್ತಿನೋಡು ಕೋಶ ಓದಿ ನೋಡು ಎಂಬ ಮಾತಿನಂತೆ, ಜನರ ಜ್ಞಾನ ಹೆಚ್ಚಿಸಲು ಗ್ರಂಥಾಲಯ ತಲೆ ಎತ್ತಿದೆ. ಮೈಸೂರಿನ ರಾಜೀವ್ ನಗರದ 2ನೇ ಹಂತದಲ್ಲಿ, ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ನಿನ್ನೆ(ಜ.26) ಉದ್ಘಾಟನೆಯಾಯ್ತು. ಅಂದಹಾಗೆ, ಕಳೆದ ವರ್ಷ ಏಪ್ರಿಲ್‌ನಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ಇಸಾಕ್ ಅವ್ರ ಲೈಬ್ರರಿಗೆ ಬೆಂಕಿ ಇಟ್ಟಿದ್ರು. ಈ ವೇಳೆ ಮಗುವಿನಂತೆ ಬಿಕ್ಕುತ್ತಿದ್ದ ಇಸಾಕ್ಗೆ ಸರ್ಕಾರದ ವತಿಯಿಂದಲೇ ಲೈಬ್ರರಿ ಕಟ್ಟಿಸಿಕೊಡುವ ಭರವಸೆ ಸಿಕ್ಕಿತ್ತು. ಆದ್ರೆ ಭರವಸೆ ಭರವಸೆಯಾಗಿಯೇ ಉಳಿಯಿತು.

ಸರ್ಕಾರದ ಪೊಳ್ಳು ಭರವಸೆಯಿಂದ ಉಪಯೋಗವಾಗದೆ ನೊಂದಿದ್ದ ಇಸಾಕ್, ಗ್ರಂಥಾಲಯ ನಿರ್ಮಾಣಕ್ಕೆ ಹಲವರ ಬಳಿ ಮನವಿ ಮಾಡಿದ್ರು. ಅದ್ರಂತೆ, ಶಾಸಕ ಜಮೀರ್ ಅಹ್ಮದ್, ಸಂಸದ ಪ್ರತಾಪ್‌ ಸಿಂಹ, ಎಸ್.ಟಿ. ಸೋಮಶೇಖರ್, ಸುತ್ತೂರು ಶ್ರೀ ಸೇರಿದಂತೆ ಅನೇಕರು ನೆರವು ನೀಡಿದ್ರು. ಈ ಹಣವನ್ನ ಬ್ಯಾಂಕ್ ಖಾತೆಯಲ್ಲಿಟ್ಟ ಇಸಾಕ್, ಸರ್ಕಾರ ಕೊಟ್ಟಿದ್ದ ಭರವಸೆಗಾಗಿ ಕಾಯುತ್ತಿದ್ರು. ಆದ್ರೆ ಅಧಿಕಾರಿಗಳು ಇಂದು ನಾಳೆ ಎಂದು ಹೇಳಿ ಹೇಳಿ 9 ತಿಂಗಳೇ ಕಳೆದೇ ಹೋಯ್ತು. ಹೀಗಾಗಿ ಕೊನೆಗೆ, ಇದ್ದ ಮೂರುವರೆ ಲಕ್ಷದಲ್ಲಿ ತಾವೇ ಗ್ರಂಥಾಲಯ ರೆಡಿ ಮಾಡಿಸಿ ಉದ್ಘಾಟನೆ ಮಾಡಿದ್ರು. ಅಷ್ಟೇ ಅಲ್ಲ ಸರ್ಕಾರದ ನಡೆಗೆ ಬೇಸರ ವ್ಯಕ್ಯಪಡಿಸಿದ್ದಾರೆ.

ಇನ್ನು ಗ್ರಂಥಾಲಯವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದ್ರು. ಸೈಯದ್ ಇಸಾಕ್ ಅವರ ಕಾರ್ಯವೈಖರಿಗೆ ಸುತ್ತೂರು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಂಸದ ಪ್ರತಾಪ್ ಸಿಂಹ ಕೂಡ ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಇಸಾಕ್ರ ಕನ್ನಡ ಪ್ರೇಮಕ್ಕೆ ಅಭಿನಂದನೆ ಸಲ್ಲಿಸಿದ್ರು. ಒಟ್ಟಾರೆ, ಗ್ರಂಥಾಲಯದ ಮೂಲಕ ಕನ್ನಡವನ್ನ ಸೈಯದ್ ಇಸಾಕ್ ಉಳಿಸಿ ಬೆಳಸುತ್ತಿದ್ದಾರೆ. ಆದ್ರೆ, ಇಂತಹ ಅಪ್ಪಟ್ಟ ಕನ್ನಡ ಪ್ರೇಮಿಗಳ ಜತೆಯಲ್ಲೂ, ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯದಿಂದ ನಡೆದುಕೊಳ್ಳೋದು ದುರಂತ.

ವರದಿ: ರಾಮ್, ಟಿವಿ9 ಮೈಸೂರು

ಇಸಾಕ್ ಅವರ ಗ್ರಂಥಾಲಯ

ಇದನ್ನೂ ಓದಿ: ವಿಧಾನಸಭಾ ಚುನಾವಣೆ ಟಿಕೆಟ್​ಗಾಗಿ ಜೆಡಿಎಸ್​ನಲ್ಲಿ ಈಗಲೇ ಶುರುವಾಯ್ತು ಫೈಟ್!

ಮೈಸೂರಿನಲ್ಲಿ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

Published On - 9:31 am, Thu, 27 January 22