ಸಂದಿಗ್ಧತೆಯಿಂದ ಪಾರು ಮಾಡಲು ಪೊಲೀಸರಿಗೆ ಶಕ್ತಿ ಕೊಡುವಂತೆ ಪ್ರಾರ್ಥಿಸಿದ್ದೇನೆ – ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಗೃಹ ಸಚಿವ ಜ್ಞಾನೇಂದ್ರ
ನಾಡದೇವತೆ ಚಾಮುಂಡಿಯನ್ನು ಪ್ರಾರ್ಥಿಸಿ ಬಂದಿರುವ ಸಂದಿಗ್ಧತೆಯನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿಯನ್ನು ಪೊಲೀಸರಿಗೆ ನೀಡೆಂದು ಬೇಡಿಕೊಂಡಿರುವೆ. ಅಂತೆಯೇ, ಎಲ್ಲರ ಮನಸ್ಸಿಗೂ ಒಳ್ಳೆಯ ಭಾವನೆ ಕೊಡು ಎಂದು ಕೇಳಿಕೊಂಡಿದ್ದೇನೆ ಎನ್ನುವುದಾಗಿ ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದನ್ನು ಒಪ್ಪಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತ್ಯುತ್ತರಿಸಿರುವ ಆರಗ ಜ್ಞಾನೇಂದ್ರ, ಅವರು ಸಿಎಂ ಅವರಿಗೆ ಅದನ್ನು ಹೇಳುವ ಅಧಿಕಾರ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಪ್ರಕರಣದ ತನಿಖೆ ಚುರುಕಾಗಿದೆ. ಯಾವ ಹಂತದಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುವುದಿಲ್ಲ. ಖಂಡಿತವಾಗಲೂ ಈ ಪ್ರಕರಣವನ್ನು ಬೇಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂದಿರುವ ಸಂದಿಗ್ಧತೆಯನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿಯನ್ನು ಪೊಲೀಸರಿಗೆ ನೀಡಲಿ ಎಂದು ಚಾಮುಂಡಿಯನ್ನು ಪ್ರಾರ್ಥಿಸಿದ್ದೇನೆ. ಇನ್ನೂ ಆರೋಪಿ ಗಳು ಪತ್ತೆಯಾಗಿಲ್ಲ. ಆರೋಪಿಗಳ ಪತ್ತೆಗೆ ಸ್ವಲ ಸಮಯ ಬೇಕಿದೆ. ಸಂತ್ರಸ್ತೆ ತಮ್ಮ ಹೇಳಿಕೆಯನ್ನು ಪೊಲೀಸರಿಗೆ ತಿಳಿಸಿಲ್ಲ. ವಿಚಾರಣೆಗೆ ತೊಂದರೆ ಆಗುವ ದೃಷ್ಟಿಯಿಂದ ನಾನು ಹೆಚ್ಚಿನ ವಿವರ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾಡದೇವತೆ ಚಾಮುಂಡಿಯನ್ನು ಪ್ರಾರ್ಥಿಸಿ ಬಂದಿರುವ ಸಂದಿಗ್ಧತೆಯನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿಯನ್ನು ಪೊಲೀಸರಿಗೆ ನೀಡೆಂದು ಬೇಡಿಕೊಂಡಿರುವೆ. ಅಂತೆಯೇ, ಎಲ್ಲರ ಮನಸ್ಸಿಗೂ ಒಳ್ಳೆಯ ಭಾವನೆ ಕೊಡು ಎಂದು ಕೇಳಿಕೊಂಡಿದ್ದೇನೆ ಎನ್ನುವುದಾಗಿ ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಗ್ಯಾಂಗ್‌ರೇಪ್‌ನ ಆರೋಪಿಗಳ ಗುರುತು ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿದ್ದು, ಯುವತಿಯ ಜತೆಗಿದ್ದ ಯುವಕನಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆಯ ಜತೆಗಿದ್ದ ಯುವಕ ಕೂಡಾ ಸ್ಪಷ್ಟ ಮಾಹಿತಿ ನೀಡುವಲ್ಲಿ ವಿಫಲವಾಗುತ್ತಿದ್ದು, ಪ್ರಕರಣದ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿ ಸಿಗದ ಹಿನ್ನೆಲೆ ಆರೋಪಿಗಳ ಗುರುತು ಪತ್ತೆಯೇ ದೊಡ್ಡ ಸಮಸ್ಯೆಯಾಗುತ್ತಿದೆ. ಆರೋಪಿಗಳ ಚಹರೆ, ಅವರು ಮಾತನಾಡುತ್ತಿದ್ದ ಭಾಷೆ, ಯಾವ ವಾಹನದಲ್ಲಿ ಬಂದಿದ್ದರೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಸದ್ಯ ಯುವಕನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿಲ್ಲ.
ಇನ್ನೊಂದೆಡೆ, ಆಗಸ್ಟ್ 23ರಂದು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಚಿನ್ನಾಭರಣ ಮಳಿಗೆಗೆ ನುಗ್ಗಿ ದರೋಡೆ ಮಾಡಿ, ಶೂಟೌಟ್ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಅಂಗಡಿ ಇಂಟಿರಿಯರ್ ಕೆಲಸ ಮಾಡಿದವರಿಂದಲೇ ಕೃತ್ಯ ನಡೆದಿದೆ ಎನ್ನಲಾಗಿದ್ದು, ಟಿವಿ9ಗೆ ಮೈಸೂರು ನಗರ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಂತಹ ಘಟನೆ ಮುಂದೆಂದೂ ನಡೆಯಬಾರದು: ಎಡಿಜಿಪಿ ಪ್ರತಾಪ್ ರೆಡ್ಡಿ
ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತಷ್ಟು ಮಾಹಿತಿ ಬೆಳಕಿಗೆ; ಶುಕ್ರವಾರ ಆರಗ ಜ್ಞಾನೇಂದ್ರ ಸಭೆ
(Karnataka Home Minister Araga Jnanendra reaction on Mysuru Gang Rape case after visiting Chamundi Hill)