ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್

ಮೈಸೂರು ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ಮಳೆ ಹಾನಿಗೆ ಪರಿಹಾರವಾಗಿ ತಲಾ ₹ 8 ಲಕ್ಷ ಅನುದಾನ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಘೋಷಿಸಿದ್ದಾರೆ.

ಮೈಸೂರು: ಮಳೆ ಹಾನಿಗೆ ಪರಿಹಾರವಾಗಿ ನಗರ ಪಾಲಿಕೆಯ ಪ್ರತಿ ವಾರ್ಡ್​ಗೆ ತಲಾ ₹ 8 ಲಕ್ಷ ಅನುದಾನ; ಎಸ್.ಟಿ ಸೋಮಶೇಖರ್
ಸಚಿವ ಎಸ್.ಟಿ. ಸೋಮಶೇಖರ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Nov 05, 2021 | 2:26 PM

ಮೈಸೂರು: ನಗರದಲ್ಲಿ ಮಳೆ ಹಾನಿ ಹಾಗೂ ರಸ್ತೆ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಿಗೆ 8 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ S.T.ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೆಆರ್‌ಎಸ್‌ಗೆ ಬಾಗಿನ ಬಿಡುವ ವೇಳೆ ಸಿಎಂ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಅವರು ನುಡಿದಿದ್ದಾರೆ. ಚಾಮುಂಡಿ ಬೆಟ್ಟದ ನಂದಿ ರಸ್ತೆಯಲ್ಲಿ ರಸ್ತೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಶೀಘ್ರದಲ್ಲೇ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲಿಸುತ್ತಾರೆ. ರಸ್ತೆ ದುರಸ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಮಳೆ ನಿಲ್ಲುವವರೆಗೂ ಕಾಮಗಾರಿ‌ ಮಾಡುವುದಕ್ಕೆ ಕಷ್ಟ. ಆದರೆ ಕಾಮಗಾರಿಗೆ ಬೇಕಾದ ತಯಾರಿ‌ ಮಾಡಿಕೊಳ್ಳುತ್ತೇವೆ ಎಂದು ಸೋಮಶೇಖರ್ ಹೇಳಿದ್ಧಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಇಂದು ಕೂಡ ಭಾರಿ ಮಳೆ ಬಂದರೆ ಅನಾಹುತವಾಗಲಿದೆ: ಎಸ್​.ಟಿ ಸೋಮಶೇಖರ್ ನಿನ್ನೆ ಬಿದ್ದ ಭಾರಿ ಮಳೆಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ದೊಡ್ಡ ಅನಾಹುತ ಸದ್ಯಕ್ಕೆ ಆಗಿಲ್ಲ. ಆದರೆ ಇವತ್ತು ಅದೇ ಪ್ರಮಾಣದಲ್ಲಿ ಮಳೆ ಬಂದರೆ ದೊಡ್ಡ ಮಟ್ಟದಲ್ಲಿ ಅನುಹುತ‌ ಆಗುತ್ತದೆ. ಜನರಿಗೆ ಆದಷ್ಟು ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ಕ್ರಮ‌ ಕೈಗೊಳ್ಳುತ್ತೆವೆ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ  ನೀಡಿದ್ದಾರೆ.

ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುತ್ತೇವೆ: ಎಸ್.ಟಿ ಸೋಮಶೇಖರ್ ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಬಿಜೆಪಿಗೆ ಸೋಲಾದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಚಿವರು, ಸೋತಿದ್ದೇವೆ ಎಂದು ನಾವು ಕಾಂಗ್ರೆಸ್‌ನವರಂತೆ ನಾವು ಮನೆಯಲ್ಲಿ ಕುಳಿತುಕೊಳ್ಳಲ್ಲ. ಬಿಜೆಪಿ ಸೋಲಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್‌ನವರು ಬಿಜೆಪಿ ಗೆದ್ದಿರುವ ಲೀಡ್ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಬಿಜೆಪಿ ಸೋತ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. ತೈಲ ಬೆಲೆ ಇಳಿಕೆಗೂ, ಬಿಜೆಪು ಸೋಲಿಗೂ ಕಾಂಗ್ರೆಸ್ ಸಂಬಂಧ ಕಲ್ಪಿಸಿದ ಕುರಿತಂತೆ ಮಾತನಾಡಿದ ಅವರು, ಬೈಎಲೆಕ್ಷನ್ ರಿಸಲ್ಟ್‌ಗೂ ತೈಲ ಬೆಲೆ ಇಳಿಕೆಗೆ ಸಂಬಂಧವಿಲ್ಲ. ತೈಲ ಬೆಲೆ ಇಳಿಕೆ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯ ಮಾಡುತ್ತಾರೆ. ಅವರಿಂದ ಮತ್ತೇನೂ ನಿರೀಕ್ಷೆ ಮಾಡಲು ಆಗಲ್ಲ. ವಿರೋಧ ಪಕ್ಷದವರು ಮಾಡಿದಂತೆ ಅವರು ವಿರೋಧಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ‌.ಸೋಮಶೇಖರ್ ಹೇಳಿಕೆ ನೀಡಿದ್ಧಾರೆ.

ಇದನ್ನೂ ಓದಿ:

5 Years Of Demonetisation: ನೋಟು ನಿಷೇಧದ 5 ವರ್ಷಗಳ ನಂತರವೂ ಸಾರ್ವಜನಿಕರ ಮಧ್ಯೆ ನಗದು ವಹಿವಾಟಿಗೇ ಆದ್ಯತೆ

Night Curfew: ನೈಟ್ ಕರ್ಫ್ಯೂ ಹಿಂಪಡೆದು ಆದೇಶ ಹೊರಡಿಸಿದ ಸರ್ಕಾರ

Published On - 2:21 pm, Fri, 5 November 21

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್