ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಶಾಕ್​​: ಯಡಿಯೂರಪ್ಪ ಆಪ್ತ ಹೆಚ್​​ವಿ ರಾಜೀವ್​ ಕಾಂಗ್ರೆಸ್​ಗೆ

| Updated By: ವಿವೇಕ ಬಿರಾದಾರ

Updated on: Mar 24, 2024 | 12:10 PM

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹಾಗೂ ಶಾಸಕ ಎಸ್​ಟಿ ಸೋಮಶೇಖರ್​ ಆಪ್ತ, ಬಿಜೆಪಿ ಮುಖಂಡ ಹೆಚ್​.ವಿ ರಾಜೀವ್ ಮಾರ್ಚ್​ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​​ ಪಕ್ಷ ಸೇರಲಿದ್ದಾರೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್​.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಶಾಕ್​​: ಯಡಿಯೂರಪ್ಪ ಆಪ್ತ ಹೆಚ್​​ವಿ ರಾಜೀವ್​ ಕಾಂಗ್ರೆಸ್​ಗೆ
ಹೆಚ್​ವಿ ರಾಜೀವ್​ ಕಾಂಗ್ರೆಸ್​ ಸೇರ್ಪಡೆ
Follow us on

ಮೈಸೂರು, ಮಾರ್ಚ್​ 24: ಲೋಕಸಭೆ ಚುನಾವಣೆ (Lok Sabha Election) ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಹಳೆ-ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್​ (Congress) ಬಿಜೆಪಿಯ (BJP) ಪ್ರಭಲನಾಯಕನಿಗೆ ಗಾಳ ಹಾಕಿದೆ. ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ ರಾಜೀವ್​​ ಮಾರ್ಚ್​ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​​ ಪಕ್ಷ ಸೇರಲಿದ್ದಾರೆ. ಹೆಚ್​.ವಿ ರಾಜೀವ್ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹಾಗೂ ಶಾಸಕ ಎಸ್​ಟಿ ಸೋಮಶೇಖರ್​ ಆಪ್ತರಾಗಿದ್ದಾರೆ.

ಹೆಚ್​.ವಿ ರಾಜೀವ್​ ಕೆ.ಆರ್​ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರು ಕೆಲವು ದಿನಗಳಿಂದ ತಮ್ಮ ಮೂಲ ಪಕ್ಷ ಚಟುವಟಿಕೆಗಳಿಂದ ದೂರ ಉಳಿದಿದ್ದು, ಕಾಂಗ್ರೆಸ್​ ಅಂಗಳದಲ್ಲಿ ನಿಂತಿದ್ದಾರೆ. ಅಲ್ಲದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಶುರುವಾಯ್ತು ಪಕ್ಷಾಂತರ: ಕಾಂಗ್ರೆಸ್​ ತೊರೆದು ವಾಪಸ್ ಬಿಜೆಪಿ ಸೇರ್ಪಡೆಗೆ ಮುಂದಾದ ಮಾಜಿ ಶಾಸಕ!

​ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್​.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಕೇವಲ ಒಂದೂವರೆ ವರ್ಷದಲ್ಲಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಶಾಸಕಾರಿಗಿದ್ದ ಎಸ್​.ಎ ರಾಮದಾಸ್​ ಅವರಿಗೆ ಟಿಕೆಟ್​ ತಪ್ಪಿ ತಮಗೆ ಸಿಗುತ್ತದೆ ಎಂಬ ಗ್ಯಾರೆಂಟಿಯಲ್ಲಿದ್ದರು.

ತಮಗೆ ಟಿಕೆಟ್​ ಸಿಗುತ್ತದೆ ಎಂದು ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಸೂಚನೆಯನ್ನೂ ಪಡೆದಿದ್ದ ಹೆಚ್​​.ವಿ ರಾಜೀವ್​ ಸಾಕಷ್ಟು ಪ್ರಚಾರವನ್ನೂ ಮಾಡಿದ್ದರು. ಆದರೆ ಟಿಕೆಟ್​ ಘೋಷಣೆಯಾದಾಗ ಆಘಾತಕ್ಕೆ ಒಳಗಾದರು. ಬ್ರಾಹ್ಮಣ ಸಮುದಾಯದವರೇ ಆದ ಬಿಜೆಪಿ ನಗರ ಅಧ್ಯಕ್ಷ ಎಸ್​.ಶ್ರೀವತ್ಸ ಅವರಿಗೆ ಟಿಕೆಟ್​ ನೀಡಲಾಯಿತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಪಕ್ಷದ ಚಟುವಟಿಕೆಯಿಂದ ದೂರ ಉಳಿದರು. ಇದೀಗ ಕಮಲ ತೊರೆದು ಕೈ ಹಿಡಿಯಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:31 am, Sun, 24 March 24