ಮೈಸೂರು, ಡಿಸೆಂಬರ್ 14: ಸಂಸತ್ ಭವನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ್ದ ಬಂಧಿತರು ಸಂಸದ ಪ್ರತಾಪ್ ಸಿಂಹ ಐಟಿ ಸೆಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು. ಬಂಧಿತ ಮನೋರಂಜನ್, ಪ್ರತಾಪ್ ಸಿಂಹ ಬಹಳ ಹತ್ತಿರವಿದ್ದ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ (M Lakshman) ಆರೋಪಿಸಿದ್ದಾರೆ. ನಗದರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈಸೂರು, ಮಡಿಕೇರಿ ಹಾಗೂ ಡೆಲ್ಲಿಯಲ್ಲಿ ಇವರ ಜೊತೆ ಸಭೆ ನಡೆಸಿದ್ದಾರೆ. ಪ್ರತಾಪ್ ಜೊತೆ ಒಂದು ಸಭೆಯು ಆಗಿದೆ. ಆದರೆ ಯಾವಾಗ ಸಭೆ ಆಗಿದೆ ಎಂದು ಗೊತ್ತಿಲ್ಲ. ಪ್ರತಾಪ್ ಸಿಂಹ ಕಚೇರಿ ಸೀಜ್ ಮಾಡಬೇಕು ಎಂದು ಹೇಳಿದ್ದಾರೆ.
ನ್ಯಾಷನಲ್ ಸೆಕ್ಯೂರಿಟಿ ವಿಚಾರದಲ್ಲಿ ದಾಖಲೆ ಇಲ್ಲದೆ ನಾವು ಮಾತನಾಡುತ್ತಿಲ್ಲ. ನಾಳೆ ನ್ಯಾಷನಲ್ ಸೆಕ್ಯೂರಿಟಿ ಕೇಳಿದರೆ ದಾಖಲೆ ನೀಡಬೇಕಾಗುತ್ತದೆ. ಆದರಿಂದ ನಾವು ಹೇಳುವ ವಿಷಯ ಸತ್ಯಕ್ಕೆ ಹತ್ತಿರವಾದದ್ದು ಎಂದಿದ್ದಾರೆ.
ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ನಾಯಕರ ಆಗ್ರಹ
ಇಲ್ಲಿಯವರೆಗೂ ಬಿಜೆಪಿ ಸಂಸದರು, ಸಚಿವರು, ಗೃಹ ಸಚಿವರು ಒಬ್ಬರು ಪ್ರತಿಕ್ರಿಯೆ ನೀಡಿಲ್ಲ. ಸ್ವತಃ ಪ್ರತಾಪ್ ಸಿಂಹ ಕೂಡ ಒಂದು ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದು 24 ಗಂಟೆಯಾದರೂ ಒಂದು ಟ್ವೀಟ್ ಮಾಡಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಾಳೆ ದಿನ ಕಾಂಗ್ರೆಸ್ನವರೇ ಈ ಘಟನೆ ಮಾಡಿಸಿದ್ದೀರಿ ಎಂದು ಕತೆ ಕಟ್ಟಬಹುದು ಎಂದು ಕಿಡಿಕಾರಿದ್ದಾರೆ.
ಸಣ್ಣ ಸಣ್ಣ ವಿಷಯಗಳಿಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುವ ಪ್ರತಾಪ್ ಸಿಂಹ ಯಾಕೆ ಮೌನವಾಗಿದ್ದಾರೆ? ಪ್ರತಾಪ್ ಸಿಂಹ ಏಲ್ಲಿ? ಡೆಲ್ಲಿ, ಕೊಡಗಿನಲ್ಲಿದ್ದಾರಾ? ಹೈಪೆರ್ ಆಗಿದ್ದ ವ್ಯಕ್ತಿ ಸೈಲೆಂಟ್ ಆಗಿರಲು ಕಾರಣವೇನು? ಇದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಭದ್ರತಾ ವೈಫಲ್ಯ: CRPF ಡಿಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ ಗೃಹ ಇಲಾಖೆ
ನಿನ್ನೆಯ ಘಟನೆಯಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ ಅಥವಾ ಆ ಲೆಟರ್ ಕಾಂಗ್ರೆಸ್ನವರು ನೀಡಿದ್ದರೆ ಇಷ್ಟೊತ್ತಿಗೆ ದೇಶವೇ ಹೊತ್ತಿ ಉರಿಯುತ್ತಿತ್ತು. ನಾಲ್ಕು ಲೇಯರ್ ಸೆಕ್ಯೂರಿಟಿ ಹೇಗೆ ದಾಟಿ ಹೋಗಿದ್ದಾರೆ? ಇದು ಪೂರ್ವ ನಿಯೋಜಿತ ಕೃತ್ಯ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Thu, 14 December 23