ಮುಡಾ ಹಗರಣ ವಿಚಾರಣೆ: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಪ್ರಶ್ನೆಗಳ ವಿವರ ಇಲ್ಲಿದೆ
ಮುಡಾ ಹಗರಣದ ತನಿಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾಯುಕ್ತರ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಪತ್ನಿಯ ಹೆಸರಿನಲ್ಲಿ 14 ನಿವೇಶನಗಳನ್ನು ಪಡೆದ ಆರೋಪದ ಬಗ್ಗೆ ಲೋಕಾಯುಕ್ತ ಪೊಲೀಸರು 20 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಲ್ಲಿ ಭೂಮಿ ಹಂಚಿಕೆ, ಅಧಿಕಾರ ದುರ್ಬಳಕೆ, ಮತ್ತು ಆರ್ಥಿಕ ಲಾಭದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೇರಿವೆ.
ಮೈಸೂರು, ನವೆಂಬರ್ 6: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿಗಳಿಗೆ ಕೇಳಲು ಲೋಕಾಯುಕ್ತ ಸಿದ್ಧ ಮಾಡಿಕೊಂಡಿರುವ ಪ್ರಶ್ನೆಗಳ ಬಗ್ಗೆ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎ 1 ಆರೋಪಿಯಾಗಿರುವ ಸಿದ್ದರಾಮಯ್ಯಗೆ ಕೇಳಲು ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರು ಸಿದ್ಧ ಮಾಡಿಕೊಂಡಿದ್ದರು.
ಸಿಎಂಗೆ ಲೋಕಾಯುಕ್ತ ಪ್ರಶ್ನೆಗಳಿವು
- 14 ನಿವೇಶನಗಳನ್ನು ನಿಮ್ಮ ಪತ್ನಿ ಮುಡಾದಿಂದ ಪಡೆದರುವುದು ನಿಮ್ಮ ಪ್ರಭಾವದಿಂದ ಎಂಬ ಆರೋಪ ಇದೆ?
- ನಿಮ್ಮ ಅಧಿಕಾರದವನ್ನ ದುರುಪಯೋಗ ಪಡಿಸಿಕೊಂಡಿದ್ದೀರಾ ಎಂಬ ಆರೋಪ ಇದೆ?
- ನೀವು ಅಧಿಕಾರದಲ್ಲಿದ್ದಾಗಲೇ ನಾಲ್ಕು ಹಂತದಲ್ಲಿ ಪ್ರಭಾವ ನಡೆದಿಯೆಂತೆ?
- ಭೂಮಿ ಕಳೆದಕೊಂಡ ಬಡವಾಣೆ ಬಿಟ್ಟು ಸಮಾನಾಂತರ ಬಡವಾಣೆಯಲ್ಲಿ ಹೊರತುಪಡಿಸಿ ವಿಜಯನಗರದಲ್ಲಿ ನಿವೇಶನ ಬೇಕು ಅಂತ ಅರ್ಜಿ ಹಾಕಿದ್ರಾ?
- ವಿಜಯನಗರದಲ್ಲಿ 14 ನಿವೇಶನ ನಿಮ್ಮ ಪತ್ನಿ ಹೆಸರಿಗೆ ಬಂದಿದ್ದು ನಿಮಗೆ ಗೊತ್ತಿದ್ಯಾ? ಯಾವಾಗ ಗೊತ್ತಾಯಿತು?
- ನಿಮ್ಮ ಬಾಮೈದ ನಿಮ್ಮ ಪತ್ನಿಗೆ ಭೂಮಿಯನ್ನ ಅರಿಶಿಣ ಕುಂಕುಮಕ್ಕೆ ದಾನ ಕೊಟ್ಟಾಗ ನಿಮಗೆ ಮಾಹಿತಿ ಇತ್ತಾ?
- ಭೂಮಿಯ ವಿವಾದದ ಹಿನ್ನೆಲೆ ನಿಮಗೆ ಯಾವಾಗ ಗೊತ್ತಾಯಿತು?
- ನಿವೇಶನ ಹಂಚಿಕೆ ಮಾಡುವಾಗ ಮುಡಾ ಆಯುಕ್ತರನ್ನ ಸಂಪರ್ಕ ಮಾಡಿದ್ರಾ?
- ನಿಮ್ಮ ಪುತ್ರ ಯತೀಂದ್ರ ನಿವೇಶನ ಹಂಚಿಕೆ ಸಂಧರ್ಭದಲ್ಲಿ ಮುಡಾ ಸಭೆಗೆ ಇದ್ರು ಎಂಬ ಆರೋಪ ಇದೆ?
- ಆರ್ಥಿಕ ಲಾಭಕ್ಕಾಗಿ ಇದೇ ವಿಜಯನಗರ ವ್ಯಾಪ್ತಿಯಲ್ಲಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಇದೆ?
- ವೈಟ್ನರ್ ಹಿಂದಿರುವ ಪದಗಳು ಏನು?
- ನಿಮ್ಮ ಪತ್ನಿ ಪಾರ್ವತಿ ಅವರು ಕೊಟ್ಟ ಪತ್ರದಲ್ಲಿ ಇದ್ದ ಬದಲಿ ನಿವೇಶನದ ಮಾಹಿತಿ ಹೇಳಿ?
- ನೀವು ಭೂಮಿಗೆ 65 ಕೋಟಿ ಹಣ ಪರಿಹಾರಣ ಹಣ ಕೇಳಿದ್ರಿ, ಇದು ಯಾವ ಆಧಾರದ ಮೇಲೆ?
- ಒಟ್ಟಾರೆ ಪ್ರಕರಣದ ಬಗ್ಗೆ ಏನೆಲ್ಲ ಮಾಹಿತಿ ಇದೆ ಹೇಳಿ?
ಇದನ್ನೂ ಓದಿ: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ: ಆರ್ ಅಶೋಕ ವಾಗ್ದಾಳಿ
ಹೀಗೆ ಹಲವು ಪ್ರಶ್ನೆಗಳನ್ನು ಲೋಕಯುಕ್ತರು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಪ್ರಮುಖ ದಾಖಲೆಗಳು, ಸಹಿ ಹಾಗೂ ಫೋಟೋಗ್ರಾಫ್ಗಳನ್ನ ಮುಂದಿಟ್ಟು ಪ್ರಶ್ನೆ ಕೇಳಲಾಗಿದೆ. ಇದಕ್ಕೂ ಮುನ್ನ ಕೇಸ್ನ ವಿವರನ್ನು ಆರೋಪಿಗೆ ತನಿಖಾಧಿಕಾರಿ ವಿವರಿಸಿದರು. ಬಳಿಕ ವಿಚಾರಣೆ ಆರಂಭಿಸಲಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:31 am, Wed, 6 November 24