ಮೇಟಗಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ; 9 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಬೇಕಿದ್ದ ನಾಲ್ವರು ಅರೆಸ್ಟ್

| Updated By: ಆಯೇಷಾ ಬಾನು

Updated on: Mar 05, 2024 | 10:40 AM

ಮೈಸೂರು, ಮಂಡ್ಯ, ಹಾಸನ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಬೇರೆ ಬೇರೆ ಠಾಣೆಯಲ್ಲಿ 9 ಪ್ರಕರಣಗಳನ್ನು ಹೊಂದಿದ್ದಾರೆ. ಆರೋಪಿಗಳಿಂದ 6 ಲಕ್ಷ ರೂಪಾಯಿ ಮೌಲ್ಯದ 9 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಮೇಟಗಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ; 9 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಬೇಕಿದ್ದ ನಾಲ್ವರು ಅರೆಸ್ಟ್
9 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಬೇಕಿದ್ದ ನಾಲ್ವರು ಅರೆಸ್ಟ್
Follow us on

ಮೈಸೂರು, ಮಾರ್ಚ್.05: ಮೇಟಗಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ದ್ವಿಚಕ್ರ (Two Wheeler) ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂಪಾಯಿ ಮೌಲ್ಯದ 9 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳು ಮೈಸೂರು, ಮಂಡ್ಯ, ಹಾಸನ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದರು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರದಕರಣ ದಾಖಲಾಗಿದ್ದು ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಮೇಟಗಳ್ಳಿ ಠಾಣೆಯ 2, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ 2, ಕೆಆರ್​ಎಸ್ ನ 1, ಪಾಂಡವಪುರದ 2, ಮೇಲುಕೋಟೆ 1, ಹಾಸನದ ಎಕ್ಸ್ ಟೆನ್ಷನ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 9 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ನಂಬರ್ ಪ್ಲೇಟ್ ಇಲ್ಲದ ಎರಡು ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಆರೋಪಿಗಳು ಬರುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Niranjan Hiranandani: 10 ಗಂಟೆಗಳ ಕಾಲ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ ವಿಚಾರಣೆ ನಡೆಸಿದ ಇಡಿ

ಬೇಕರಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ

ಕ್ಷುಲಕ ಕಾರಣಕ್ಕೆ ಬೇಕರಿಗೆ ನುಗ್ಗಿದ ಗುಂಪೊಂದು ಮಹಿಳೆ ಮೇಲೆ ಹಲ್ಲೆ ಮಾಡಿದೆ. ಹೊಸನಗರ ತಾಲೂಕು ಕೋಡೂರಿನಲ್ಲಿ ನಡೆದಿದೆ. ಲಕ್ಷ್ಮಿ ಮಲ್ನಾಡ್ ಬೇಕರಿಗೆ ನುಗ್ಗಿದ, ಕೀರ್ತಿ, ಯೋಗೇಂದ್ರ, ಮಂಜುಶೆಟ್ಟಿ, ಕಿರಣ್ ಹಾಗೂ ಸಂದೀಪ್ ಶೆಟ್ಟಿ ಎಂಬುವರು, ಬೇಕರಿ ಮಾಲೀಕ ಪ್ರದೀಪ್ ಹಾಗೂ ಪತ್ನಿ ವಿದ್ಯಾ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದೆ.

ಕಾರಿನಲ್ಲಿ ಬಂದು ಕುರಿ ಕಳ್ಳತನ

ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕುರಿ-ಮೇಕೆ ಕಳ್ಳರ ಕಾಟ ಮಿತಿಮೀರಿದೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ಖದೀಮರು ರಾತ್ರೋರಾತ್ರಿ 28 ಕುರಿ ಮತ್ತು ಮೇಕೆಗಳನ್ನ ಹೊತ್ತೊಯ್ದಿದ್ದಾರೆ. ಬೊಮ್ಮನಹಳ್ಳಿ ಶ್ರೀರಾಮಣ್ಣ ಅವರ 6, ದೊಡ್ಡಿಪಾಳ್ಯದ ಬೈಲಪ್ಪಅವರ5, ಬೆತ್ತನಗೆರೆ ಬೈಲಪ್ಪ ಅವರ 9 ಹಾಗೂ ಹುಸ್ಕೂರಿನ ಸುಧಾಮ್ಮ ಅವರ8 ಮೇಕೆಗಳನ್ನ ಕಳ್ಳತನ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ