Niranjan Hiranandani: 10 ಗಂಟೆಗಳ ಕಾಲ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ ವಿಚಾರಣೆ ನಡೆಸಿದ ಇಡಿ
ರಿಯಲ್ ಎಸ್ಟೇಟ್ ಉದ್ಯಮಿ ನಿರಂಜನ್ ಹೀರಾನಂದಾನಿ ಅವರು ತಮ್ಮ ವಿರುದ್ಧ ಆರಂಭಿಸಲಾದ ಫೆಮಾ(ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ)ಉಲ್ಲಂಘನೆ ತನಿಖೆಗೆ ಸಂಬಂಧಿಸಿದಂತೆ ಸೋಮವಾರ ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೈಗಾರಿಕೋದ್ಯಮಿ ನಿರಂಜನ್ ಹೀರಾನಂದಾನಿ(Niranjan Hiranandani) ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ಇಡಿ ವಿಚಾರಣೆ 10 ಗಂಟೆಗೂ ಹೆಚ್ಚು ಕಾಲ ನಡೆಯಿತು. ಸೋಮವಾರ ಬೆಳಗ್ಗೆ 11.30ರಿಂದ ವಿಚಾರಣೆ ಆರಂಭಿಸಿದ್ದು, ರಾತ್ರಿ 10.30ಕ್ಕೆ ವಿಚಾರಣೆ ಮುಕ್ತಾಯಗೊಂಡಿದೆ. FEMA (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ಉಲ್ಲಂಘನೆಗಳ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ.
ನಾವು ತನಿಖೆಗೆ ಸಹಕರಿಸಿದ್ದೇವೆ ಮತ್ತು ಇಡಿ ಅಧಿಕಾರಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಹೀರಾನಂದಾನಿ ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಇಡಿ ಅಧಿಕಾರಿಗಳು ನಿರಂಜನ್ ಹೀರಾನಂದಾನಿ ಮತ್ತು ದರ್ಶನ್ ಹಿರಾನಂದಾನಿ ಅವರ ಮುಂಬೈನ ಆವರಣದಲ್ಲಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಇದಾದ ಬಳಿಕ ಈ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲು ಇಡಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಇಬ್ಬರಿಗೂ ಸಮನ್ಸ್ ನೀಡಲಾಗಿತ್ತು.
ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳನ್ನು ಹೊಂದಿರುವ ಹಿರಾನಂದನಿ ಸಮೂಹದ ಕಂಪನಿಗಳು ಎಫ್ಡಿಐ 400 ಕೋಟಿ ರೂ. ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಮೊತ್ತ ಬಳಕೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಎಫ್ಡಿಐ ಪಡೆದ ಕಂಪನಿಯೊಂದು ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದೆ ಎನ್ಪಿಎ ಎಂದು ಘೋಷಿಸಿತು.
ಮತ್ತಷ್ಟು ಓದಿ: ಹೀರಾನಂದಾನಿ ಗ್ರೂಪ್‌ನ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿ; ಫೆಮಾ ನಿಯಮ ಉಲ್ಲಂಘನೆ ಆರೋಪ; ದಾಖಲೆಗಳ ಪರಿಶೀಲನೆ
ಡಿಆರ್ಟಿ(ಸಾಲ ವಸೂಲಾತಿ ಮಂಡಳಿ)ಯ ವಿಚಾರಣೆ ಸಮಯದಲ್ಲಿ, ಅಪೂರ್ಣ ಯೋಜನೆಯನ್ನು ಹೀರಾನಂದಾನಿ ಗ್ರೂಪ್‌ನ ಮತ್ತೊಂದು ಘಟಕವು ವಹಿಸಿಕೊಂಡಿದೆ ಎಂದು ತಿಳಿದುಬಂದಿದೆ. ಮಾರ್ಚ್ 2022ರಲ್ಲಿ ಆದಾಯ ತೆರಿಗೆ ಇಲಾಖೆಯು ಮುಂಬೈ, ಬೆಂಗಳೂರು ಮತ್ತು ಚೆನ್ನೈ ಮೂರು ನಗರಗಳಲ್ಲಿ ಇರುವ ಹೀರಾನಂದಾನಿ ಗ್ರೂಪ್‌ನ ಸುಮಾರು 25 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಶೋಧದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ಹಿರಾನಂದನಿ ಗ್ರೂಪ್‌ನ ದಾಖಲೆ, ಹಣಕಾಸು ಇ-ದಾಖಲೆಗಳು ಮತ್ತು ಮಾರಾಟ ವಹಿವಾಟನ್ನು ಪರಿಶೀಲಿಸಿದ್ದರು.
ವಿಚಾರಣೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರಂಜನ್, ತನಿಖೆಗೆ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು. 16 ವರ್ಷಗಳ ಹಿಂದೆಯೇ ಫೆಮಾ ಉಲ್ಲಂಘನೆಯ ಆರೋಪ ಮಾಡಲಾಗಿತ್ತು ಎಂದು ಹಿರಾನಂದಾನಿ ಹೇಳಿದ್ದಾರೆ.
ಈವರೆಗೆ 42 ಅಥವಾ 43 ಬಾರಿ ವಿಚಾರಣೆ ನಡೆಸಲಾಗಿದೆ. ಇಂತಹ ವಿಚಾರ ಪ್ರಸ್ತಾಪವಾದಾಗಲೆಲ್ಲ ಆ ಸಮಸ್ಯೆಯ ಪರಿಹರಿಸುವುದು ತನ್ನ ಕರ್ತವ್ಯವಾಗಿರುವುದರಿಂದ ಸಹಕರಿಸಲು ಸಂತೋಷಪಡುತ್ತೇನೆ ಎಂದರು. ಆದ್ದರಿಂದ, ಉತ್ತರಿಸಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಕೆಲವು ವಿದೇಶಿ ವಹಿವಾಟುಗಳ ಹೊರತಾಗಿ, ಏಜೆನ್ಸಿಯುಹೀರಾನಂದಾನಿ ಗ್ರೂಪ್‌ನ ಪ್ರವರ್ತಕರೊಂದಿಗೆ ಸಂಬಂಧ ಹೊಂದಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಟ್ರಸ್ಟ್‌ನ ಫಲಾನುಭವಿಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ FEMA ತನಿಖೆಯಲ್ಲಿ ED ಯೊಂದಿಗೆ ಸಹಕರಿಸುವುದಾಗಿ ಗ್ರೂಪ್ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ