AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಕೇಸ್​: ಸಿಎಂ ವಿರುದ್ಧ ಆರೋಪ ಮಾಡಿದ್ದ ಆರ್​​ಟಿಐ ಕಾರ್ಯಕರ್ತ ಗಂಗರಾಜು ಮೇಲೆ ಹಲ್ಲೆಗೆ ಯತ್ನ

ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಆರ್​ಟಿಐ ಕಾರ್ಯಕರ್ತ ಗಂಗರಾಜು ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದೆ.

ಮುಡಾ ಕೇಸ್​: ಸಿಎಂ ವಿರುದ್ಧ ಆರೋಪ ಮಾಡಿದ್ದ ಆರ್​​ಟಿಐ ಕಾರ್ಯಕರ್ತ ಗಂಗರಾಜು ಮೇಲೆ ಹಲ್ಲೆಗೆ ಯತ್ನ
ಆರ್​ಟಿಐ ಕಾರ್ಯಕರ್ತ ಗಂಗರಾಜು
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on:Sep 03, 2024 | 2:02 PM

Share

ಮೈಸೂರು, ಸೆಪ್ಟೆಂಬರ್​ 03: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಆರ್​​ಟಿಐ (RTI) ಕಾರ್ಯಕರ್ತ ಗಂಗರಾಜು (Gangaraju) ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೈಸೂರು-ಶ್ರೀರಂಗಪಟ್ಟಣ ಮುಖ್ಯ ರಸ್ತೆಯಲ್ಲಿ ಗಂಗರಾಜು ಅವರು ಕುಟುಂಬ ಸಮೇತರಾಗಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಗಂಗರಾಜು ಅವರ ಕಾರು ಅಡ್ಡಗಟ್ಟಿ, ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಗಂಗರಾಜು ಅವರು ಪೊಲೀಸ್​ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ತಮ್ಮ ಮೇಲೆ ಹಲ್ಲೆ ಯತ್ನಿಸಿದ ವಿಚಾರವಾಗಿ ಆರ್​ಟಿಐ ಕಾರ್ಯಕರ್ತ ಗಂಗರಾಜು ಮಾತನಾಡಿ, ನಾನು ವೈಯಕ್ತಿಕ ವಿಚಾರಕ್ಕೆ ಹೋರಾಟವನ್ನು ಮಾಡಿಲ್ಲ. ಸಾರ್ವಜನಿಕ ಆಸ್ತಿ ಉಳಿಸಲು ಹೋರಾಟ ಮಾಡಿದ್ದೇನೆ. ನಾನು ರಕ್ಷಣೆ ಕೇಳಿದ್ದೆ ಆದರೆ, ಕೊಡಲಿಲ್ಲ. ಈಗಲೂ ಮನವಿ ಮಾಡುತ್ತೇನೆ, ನನಗು ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆಯನ್ನು ಕೊಡಿ. ಸಾವಿರಾರು ಕೋಟಿ ಹಗರಣವನ್ನು ಬಯಲಿಗೆಳೆಯುತ್ತೇನೆ.ಆತಂಕದಲ್ಲೇ ಜೀವನ ನಡೆಸುವಂತಾಗಿದೆ ಎಂದು ಭಾವುಕರಾದರು.

ಗನ್​​ ಮ್ಯಾನ್ ಬೇಕಾದರೆ ಹಣ ಕೊಡಿ ಎಂದು ಹೇಳುತ್ತಾರೆ. ನಾನು ಹಣ ಎಲ್ಲಿಂದ ತಂದು ಕೊಡಲಿ. ಮನೆ ಬಳಿ ಭದ್ರತೆ ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ.  ಆದರೆ, ಯಾವುದೇ ಭದ್ರತೆ ಕೊಟ್ಟಿಲ್ಲ. ಮನೆಯವರು ಇದೆಲ್ಲ ಬೇಕಾ ಬಿಟ್ಟು ಬಿಡಿ ಅಂತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಹೋರಾಟ ನಿಲ್ಲಿಸಲ್ಲ. ನಾನು ಕೊನೆ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಗಂಗರಾಜುಗೆ ಜೀವ ಬೆದರಿಕೆ

ನನಗೆ ಜೀವ ಬೆದರಿಕೆ ಹಾಕಿದ್ದು, ಓರ್ವ ಗನ್ ಮ್ಯಾನ್​​ ನೀಡಿ ಎಂದು ಮುಂಖ್ಯಮಂತ್ರಿಗಳ ಕಚೇರಿಗೆ ಪತ್ರ ಬರೆದಿದ್ದರು. ಆದರೆ, ಗಂಗರಾಜು ಅವರಿಗೆ ಗನ್ ​ಮ್ಯಾನ್​ ನೀಡಲು ನಿರಾಕರಿಸಿದ್ದು, ಗಂಗರಾಜು ಮನೆಯ ಬಳಿ ನಿರಂತರವಾಗಿ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಗಂಗರಾಜು ಮನೆಯ ಬಳಿ ಬೀಟ್ ಸಹಿ ಪುಸ್ತಕ ಇಡಲಾಗಿದೆ ಎಂದು ಪೊಲೀಸರು ಹೇಳಿದ್ದರು.

ಯಾರು ಈ ಗಂಗರಾಜು

ಮುಡಾದ 50 : 50 ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಆಗಿರುವ ಹಗಣರಗಳ ಬಗ್ಗೆ ಆರ್​ಟಿಐ ಕಾರ್ಯಕರ್ತರ ಗಂಗರಾಜು ಬಹಿರಂಗಪಡಿಸಿದ್ದಾರೆ. ಕೆಸರೆ ಗ್ರಾಮದಲ್ಲಿನ 3.16 ಎಕರೆ ಜಮೀನಿನ‌ ದಾಖಲೆಗಳ‌ನ್ನು ಆರ್​ಟಿ ಐ ಮೂಲಕ ತೆಗೆದುಕೊಂಡಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಂಬಂಧಿಸಿದ್ದ ಮೂಲ ಭೂ ದಾಖಲೆಗಳು ಕಳವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ, ಮುಡಾದಲ್ಲಿ ಹಗರಣ ನಡೆದಿದೆ ಎಂದು ಮುಡಾ ಆಯುಕ್ತರು, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಮುಡಾ ಹಗರಣದ ಬಗ್ಗೆ ಸುಮಾರು 2019ರಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಶಾಸಕರ ವಿರುದ್ದ ಹೋರಾಟ ನಡೆಸಿದ್ದಾರೆ. ಈ ಎಲ್ಲ ಕಾರಣದಿಂದ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ 2020ರಲ್ಲಿ ಹಲ್ಲೆ ಸಹಾ ನಡೆದಿತ್ತು.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ‌ ದಾಖಲೆ‌ ಸೃಷ್ಟಿ ಎಂದ ಆರ್​​ಟಿಐ ಕಾರ್ಯಕರ್ತ

ಗಗರಾಜು ವಿರುದ್ಧ ದೂರು

ಆರ್​ಟಿಐ ಕಾರ್ಯಕರ್ತ ಗಂಗರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು. ಅಲ್ಲದೇ, ಇವರನ್ನು ಕೂಡಲೇ ಬಂಧಿಸಬೇಕೆಂದು ಮೈಸೂರು ಜಿಲ್ಲಾ ಪೊಲೀಸ್​ ಆಯುಕ್ತರಿಗೆ ಕಾಂಗ್ರೆಸ್​​ ನಿಯೋಗ ದೂರು ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:45 pm, Tue, 3 September 24

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ