ಮೈಸೂರು, ಅಕ್ಟೋಬರ್ 30: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದ 50:50 ಹಗರಣ ಸಂಬಂಧ ಮೈಸೂರಿನ ವಿವಿಧೆಡೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅನೇಕ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದರು. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿ ಮೇಲೂ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಇದರಿಂದ, ವಕ್ರತುಂಡ ಸೊಸೈಟಿ ಹೆಸರಿನಲ್ಲಿಯೂ ಅವ್ಯವಹಾರ ನಡೆದಿತ್ತೇ ಎಂಬ ಅನುಮಾನ ಬಲವಾಗಿತ್ತು.
ಇದೀಗ, ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದು ತಿಳಿದುಬಂದಿದೆ. ಇಡಿ ಅಧಿಕಾರಿಗಳ ಪ್ರಶ್ನೆಗಳು ‘ಟಿವಿ9’ಗೆ ಲಭ್ಯವಾಗಿದೆ.
ಹಲವು ಪ್ರಶ್ನೆಗಳನ್ನ ಸಿದ್ಧಪಡಿಸಿಕೊಂಡು ಬಂದಿದ್ದ ಇಡಿ ಅಧಿಕಾರಿಗಳು ಬ್ಯುಲ್ಡರ್ ಜಯರಾಮ್ಗೆ ಸೇರಿದ ಎಂಎಂಜಿ ಕನ್ಸಟ್ರಕ್ಷನ್ ಕಚೇರಿ ಹಾಗೂ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದಲ್ಲೇ ಹೇಳಿಕೆ ದಾಖಲಿಸಿದ್ದಾರೆ. ಪ್ರತಿಯೊಂದು ಪ್ರಶ್ನೆ ಹಾಗೂ ಉತ್ತರವನ್ನ ಕಚೇರಿಯಲ್ಲೇ ಕುಳಿತು ಟೈಪ್ ಮಾಡಿಕೊಂಡಿದ್ದಾರೆ. ಸಿದ್ದಪಡಿಸಿದ ಪ್ರಶ್ನೆಗಳು ಜೊತೆಗೆ ದಾಖಲೆ ಪರಿಶೀಲನೆ ನಂತರ ಬಂದ ಅನುಮಾನದ ಮೇಲೆ ಪ್ರಶ್ನೆಗಳನ್ನು ಕೇಳಲಾಗಿದೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ.
ಇದನ್ನೂ ಓದಿ: ಇಡಿ ದಾಳಿ: ವಕ್ರತುಂಡ ಸೊಸೈಟಿ ಹೆಸರಿನಲ್ಲಿ ನಡೆದಿತ್ತಾ ಬಹುದೊಡ್ಡ ಭ್ರಷ್ಟಾಚಾರ?
ಕಚೇರಿಯಲ್ಲಿ ಪ್ರತಿಯೊಂದು ದಾಖಲೆಗಳನ್ನ ಪರಿಶೀಲನೆ ಮಾಡಿ ಇಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ.
ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ