ಇಡಿ ದಾಳಿ: ವಕ್ರತುಂಡ ಸೊಸೈಟಿ ಹೆಸರಿನಲ್ಲಿ ನಡೆದಿತ್ತಾ ಬಹುದೊಡ್ಡ ಭ್ರಷ್ಟಾಚಾರ?

ಮೈಸೂರಿನ ಮುಡಾ ಹಗರಣದ ತನಿಖೆಯನ್ನು ಇಡಿ ಅಧಿಕಾರಿಗಳು ಮತ್ತೊಂದು ಚುರುಕುಗೊಳಿಸಿದ್ದು, ಎಂಎಂಜಿ ಕನ್ಸ್ಟ್ರಕ್ಷನ್ ಕಚೇರಿ ಮತ್ತು ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ವಕ್ರತುಂಡ ಸೊಸೈಟಿ ಹೆಸರಿನಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿರಬಹುದು ಎಂಬ ಅನುಮಾನಗಳು ಮೂಡಿವೆ.

ಇಡಿ ದಾಳಿ: ವಕ್ರತುಂಡ ಸೊಸೈಟಿ ಹೆಸರಿನಲ್ಲಿ ನಡೆದಿತ್ತಾ ಬಹುದೊಡ್ಡ ಭ್ರಷ್ಟಾಚಾರ?
ಇಡಿ ದಾಳಿ: ವಕ್ರತುಂಡ ಸೊಸೈಟಿ ಹೆಸರಿನಲ್ಲಿ ನಡೆದಿತ್ತಾ ಬಹುದೊಡ್ಡ ಭ್ರಷ್ಟಾಚಾರ?
Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2024 | 3:32 PM

ಮೈಸೂರು, ಅಕ್ಟೋಬರ್​ 29: ಮುಡಾ ಹಗರಣಕ್ಕೆ (Muda case) ಸಂಬಂಧಿಸಿದಂತೆ ನಿನ್ನೆ ಮೈಸೂರಿನಲ್ಲಿ ಬಿಲ್ಡರ್ ಜಯರಾಮ್ ಮನೆ, ಕಚೇರಿ ಮೇಲೆ ಇಡಿ ತಂಡ ದಾಳಿ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ನಗರದ ಎಂಎಂಜಿ ಕಚೇರಿ ಕೆಳಗೆ ಇರುವ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಆ ಮೂಲಕ ವಕ್ರತುಂಡ ಸೊಸೈಟಿ ಹೆಸರಿನಲ್ಲಿ ಬಹುದೊಡ್ಡ ಭ್ರಷ್ಟಾಚಾರ ನಡೆದಿತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ದಿನೇಶ್ ಕುಮಾರ್ ಆಯುಕ್ತರಾಗಿ ಮೈಸೂರಿಗೆ ಬಂದ ಬಳಿಕ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘ ಆರಂಭವಾಗಿದೆ. ದಿನೇಶ್ ಕುಮಾರ್ ಕುಟುಂಬಸ್ಥರಿಬ್ಬರು ನಿರ್ದೇಶಕರಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ 50-50 ಹಗರಣಕ್ಕಾಗಿಯೇ ವಕ್ರತುಂಡ ಸೊಸೈಟಿ ಸೃಷ್ಟಿಯಾಯಿತಾ? ಇಡೀ ಹಗರಣದ ಬೇನಾಮಿ ಕೇಂದ್ರವೆ ವಕ್ರತುಂಡ ಸೊಸೈಟಿನಾ ಎಂಬ ಸಾಕಷ್ಟು ಅನುಮಾನಗಳು ಶುರುವಾಗಿವೆ.

ಇದನ್ನೂ ಓದಿ: ಬೆಂಗಳೂರು: ವಾಕಿಂಗ್​ನಲ್ಲಿದ್ದ ಮುಡಾ ಅಧಿಕಾರಿ ಇಡಿ ದಾಳಿ ಸುದ್ದಿ ಕೇಳ್ತಿದ್ದಂತೆ ಅಲ್ಲಿಂದಲೇ ರನ್ನಿಂಗ್!

ಮುಡಾ ಹಗರಣ ಕುರಿತ ತನಿಖೆಯನ್ನು ಇಡಿ ಅಧಿಕಾರಿಗಳ ತಂಡ ಚುರುಕುಗೊಳಿಸಿದ್ದು, ಮತ್ತಷ್ಟು ಜನರಿಗೆ ನಡುಕ ಶುರುವಾಗಿದೆ. ಜಾರಿ ನಿರ್ದೇಶನಾಲಯ ತಂಡ, ಉದ್ಯಮಿಗಳು, ಜನಪ್ರತಿನಿಧಿಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರಭಾವಿಗಳ ಹೆಸರುಗಳನ್ನು ಪಟ್ಟಿ ಮಾಡಿದೆ. ಅಲ್ಲದೇ, ಪ್ರತಿಯೊಬ್ಬರ ಚಲನವಲನಗಳ ಮೇಲೂ ಕಣ್ಣಿಟ್ಟಿದೆ.

ಮೈಸೂರಿನ ಎಂಎಂಜಿ ಕನ್ಸ್ಟ್ರಕ್ಷನ್ ಕಚೇರಿ ಮೇಲೆ ಇಡಿ ದಾಳಿ

ಮುಡಾ ಸೈಟ್​ ಅಕ್ರಮ ಸಂಬಂಧ ಮೈಸೂರಿನ ಎಂಎಂಜಿ ಕನ್ಸ್ಟ್ರಕ್ಷನ್ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದಾರೆ. ಎಂಎಂಜಿ ಕನ್ಸ್ಟ್ರಕ್ಷನ್​​ ಕಚೇರಿಗೆ ಕೆನರಾ ಬ್ಯಾಂಕ್ ಡಿವಿಷನಲ್ ಮ್ಯಾನೇಜರ್ ಗೋಪಾಲ್​, ಕುವೆಂಪುನಗರ ಕೆನರಾ ಬ್ಯಾಂಕ್​ ಶಾಖೆ ಮ್ಯಾನೇಜರ್ ಆಗಮಿಸಿದ್ದಾರೆ. ಅಧಿಕಾರಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕುವೆಂಪುನಗರ ಕ್ಯಾನರಾ ಬ್ಯಾಂಕ್​ ವಹಿವಾಟು ಬಗ್ಗೆ ಇಡಿ ಮಾಹಿತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪರಮಾಪ್ತನ ಮನೆ ಮೇಲೂ ಇಡಿ ದಾಳಿ, ಮುಂದಿನ ಟಾರ್ಗೆಟ್ ಯಾರು?

ಸಿಎಂ ಸಿದ್ದರಾಮಯ್ಯ ಆಪ್ತ ರಾಕೇಶ್ ಪಾಪಣ್ಣ ಮನೆಯಲ್ಲೂ ಇಡಿ ಶೋಧ ನಡೆಸಿದೆ. ನಿನ್ನೆ ಬೆಳಗ್ಗೆಯಿಂದ ತಡರಾತ್ರಿವರೆಗೂ ಶೋಧಿಸಿದ್ದ ಅಧಿಕಾರಿಗಳು, ಮತ್ತೆ ಇಂದು ಬೆಳಗ್ಗೆಯಿಂದ ಹುಡುಕಾಟ ಮುಂದುವರಿಸಿದ್ದಾರೆ. ಮುಡಾಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ