ಮೈಸೂರು ಜನರಿಗೆ ಸಿಹಿ ಸುದ್ದಿ: ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಅವಧಿ ವಿಸ್ತರಣೆ

| Updated By: ವಿವೇಕ ಬಿರಾದಾರ

Updated on: Jun 11, 2024 | 11:08 AM

ಮೈಸೂರು ಜನತೆಗೆ ಮಹಾನಗರ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್​​ ಬಿಎಲ್​​​ ಭೈರಪ್ಪ ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ರಿಯಾಯಿತಿ ಅವಧಿಯನುನ್ನು ಒಂದು ತಿಂಗಳು ವಿಸ್ತರಣೆ ಮಾಡಿದೆ.

ಮೈಸೂರು ಜನರಿಗೆ ಸಿಹಿ ಸುದ್ದಿ: ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಅವಧಿ ವಿಸ್ತರಣೆ
ಮೈಸೂರು ಮಹಾನಗರ ಪಾಲಿಕೆ
Follow us on

ಮೈಸೂರು, ಜೂನ್​ 11: ಮೈಸೂರು (Mysore) ನಗರ ಜನರಿಗೆ ಮಹಾನಗರ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಆಸ್ತಿ ತೆರಿಗೆಯಲ್ಲಿ ಶೇ5 ರಷ್ಟು ರಿಯಾಯಿತಿ ನೀಡಿದ್ದು, ಪಾವತಿ ಅವಧಿಯನ್ನು 2024ರ ಜುಲೈ ವರೆಗೆ ವಿಸ್ತರಣೆ ಮಾಡಿದೆ. ಮೈಸೂರು ಮಹಾನಗರ ಪಾಲಿಕೆ (Mysore City Corporation) ಆಸ್ತಿ ತೆರಿಗೆ ಪಾವತಿಗೆ ಏ.30 ಗಡುವು ನೀಡಿತ್ತು. ಆದರೆ, ತಾಂತ್ರಿಕ ಕಾರಣ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆ ಅಧಿಕಾರಿಗಳ ಅನುಪಸ್ತಿಯಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಸ್ತಿ ತೆರಿಗೆ ಪಾವತಿಯನ್ನು ಒಂದು ತಿಂಗಳು ವಿಸ್ತರಿಸಬೇಕು ಎಂದು ಮಾಜಿ ಮೇಯತ್​ ಬಿಎಲ್​​​ ಭೈರಪ್ಪ ಪಾಲಿಕೆಗೆ ಮನವಿ ಮಾಡಿದ್ದರು.

ಮಹಾನಗರ ಪಾಲಿಕೆ ಏಪ್ರಿಲ್​ 1 ರಿಂದ 30ರ ವರೆಗೆ ಶೇ5 ರಷ್ಟು ಆಸ್ತಿ ತೆರಿಗೆ ರಿಯಾಯಿತಿಯನ್ನು ನೀಡಿತ್ತು. ಆದರೆ, ಆನ್​ಲೈನ್​ನಲ್ಲಿ ಆಸ್ತಿ ತೆರಿಗೆ ಪಾವತಿಸಲು ತಾಂತ್ರಿಕ ದೋಷ ಕಂಡುಬಂತು. ಅಲ್ಲದೆ ಸಾರ್ವಜನಿಕ ರಜಾ, ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರು ಈ ವಿನಾಯಿತಿಯನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ರಿಯಾಯಿತಿ ಅವದಿಯನ್ನು ಇನ್ನೂ ಒಂದು ತಿಂಗಳು ಅವದಿ ವಿಸ್ತರಿಸುವಂತೆ ಸಾರ್ವಜನಿಕರು ಮತ್ತು ಮಾಜಿ ಮೇಯರ್​ ಬಿಎಲ್​ ಭೈರಪ್ಪ ಒತ್ತಾಯಿಸಿದ್ದರು.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿದಾರರಿಗೆ ಮತ್ತೆ ಬಿಸಿ ಮುಟ್ಟಿಸಲು ಪ್ಲಾನ್; ಜೂನ್ 7ರ ಬಳಿಕ ಬಾಕಿ ವಸೂಲಿಗೆ BBMP ಸಜ್ಜು

ಮೈಸೂರು ಮಹಾನಗರ ಪಾಲಿಕೆ ಮೇ ಒಂದೇ ತಿಂಗಳಲ್ಲಿ ಬರೋಬ್ಬರಿ 92.24 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. 2024-25ನೇ ಸಾಲಿನಲ್ಲಿ 220 ಕೋಟಿ ರೂ. ಸಂಗ್ರಹ ಗುರಿ ಹೊಂದಿದ್ದ ಪಾಲಿಕೆಯು, ಕೇವಲ ಒಂದು ತಿಂಗಳ ಒಳಗಾಗಿ ಇಷ್ಟು ಪ್ರಮಾಣದ ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 7.81 ಕೋಟಿ ರೂ. ಸಂಗ್ರಹವಾಗಿದೆ. ಈ ತೆರಿಗೆ ರಿಯಾತಿ ಗ್ರಾಹಕರಿಗೂ ಅನುಕಲವಾಗಿದ್ದು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ