Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್​; ಇಲ್ಲಿ ಡೀಟೈಲ್ಸ್​​​

| Updated By: ವಿವೇಕ ಬಿರಾದಾರ

Updated on: Oct 14, 2023 | 10:50 AM

ಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಟೂರ್​ ಪ್ಯಾಕೇಜ್ ಕಲ್ಪಿಸಿದೆ.

Mysore Dasara 2023: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್​; ಇಲ್ಲಿ ಡೀಟೈಲ್ಸ್​​​
KSRTC
Follow us on

ಮೈಸೂರು ಅ.14: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಟೂರ್​ ಪ್ಯಾಕೇಜ್ (Tour Package)​ ಕಲ್ಪಿಸಿದೆ. ಪ್ರವಾಸಿಗರಿಗೆ ಗಿರಿದರ್ಶಿನಿ, ದೇವದರ್ಶಿನಿ ಹಾಗೂ ಕೊಡಗು ಟ್ರಿಪ್​ ಯೋಜನೆ ಮಾಡಿದೆ. ಅ.20 ರಿಂದ 26ರವರೆಗೆ ಈ ಪ್ಯಾಕೇಜ್​ನ ಸೇವೆಯ ಬಸ್‌ಗಳು ಕಾರ್ಯಾ ನಿರ್ವಹಿಸಲಿವೆ.

ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ಲೀಪರ್​, ಐರಾವತ, ಐರಾವತ ಕ್ಲಬ್​ ಕ್ಲಾಸ್​ (ಮಲ್ಟಿ ಆಕ್ಸಲ್​​) ಇ.ವಿ ಪವರ್​ ಪ್ಲಸ್​​, ಅಂಬಾರಿ ಕ್ಲಬ್​​ ಕ್ಲಾಸ್​​, ಅಂಬಾರಿ ಉತ್ಸವ್​​ ಹಾಗೂ ಪಲ್ಲಕ್ಕಿ ಉತ್ಸವ ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್​​​ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆಯ ಒಂದು ದಿನದ ಪ್ಯಾಕೇಜ್​ ಇದಾಗಿದೆ.

ಇದನ್ನೂ ಓದಿ: ಮೈಸೂರು ದಸರಾ: ಬಸ್ ಫ್ರೀ ಇರುವುದರಿಂದ ದಸರಾ ಕಣ್ತುಂಬಿಕೊಳ್ಳಲು ಹೆಚ್ಚು ಜನ ಬರುವ ನಿರೀಕ್ಷೆ, ಹೆಚ್ಚುವರಿ ಬಸ್ ಬಿಟ್ಟ ಕೆಎಸ್​ಆರ್​ಟಿಸಿ

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ:- 400 ರೂ. ಮತ್ತು ಮಕ್ಕಳಿಗೆ 250 ರೂ.)

ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ‌.ಆರ್.ಎಸ್ (ಪ್ರಯಾಣ ದರ ವಯಸ್ಕರಿಗೆ:- 450 ರೂ. ಮತ್ತು ಮಕ್ಕಳಿಗೆ 250 ರೂ.)

ದೇವದರ್ಶಿನಿ: ನಂಜನಗೂಡು, ಬ್ಲಪ್, ಮುಡುಕುತೊರೆ ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ:- 400 ರೂ. ಮತ್ತು ಮಕ್ಕಳಿಗೆ 250 ರೂ.)

ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ, ಗೋಲ್ಡನ್‌ ಟೆಂಪಲ್, ಹಾರಂಗಿ, ರಾಜಾಸೀಟ್, ಅಬ್ಬಿಫಾಲ್ಸ್ (ಐರಾಮ ಕ್ಲಬ್ ಕ್ಲಾಸ್ ಪ್ರಯಾಣ ದರ ವಯಸ್ಕರಿಗೆ 1200 ರೂ. ಮತ್ತು ಮಕ್ಕಳಿಗೆ 1000 ರೂ.)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:49 am, Sat, 14 October 23