AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ ಮಾಹಿತಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈಗಾಗಲೆ ತಯಾರಿ ಆರಂಭವಾಗಿದೆ. ಅರಮನೆ ನಗರಿ ಜಗಮಗಿಸುವ ಲೈಟಿಂಗ್​ನಿಂದ ಕಂಗೊಳಿಸುತ್ತಿದೆ. ಮೈಸೂರು ದಸರಾ ವೀಕ್ಷಣೆಗೆ ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಗೋಲ್ಡ್​ ಕಾರ್ಡ್​, ಟಿಕೆಟ್​ ಸಿಗಲಿವೆ.

ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ ಮಾಹಿತಿ
ಮೈಸೂರು ದಸರಾ
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on:Sep 27, 2024 | 10:42 AM

Share

ಮೈಸೂರು, ಸೆಪ್ಟೆಂಬರ್​ 27: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರ (Mysore Dasara 2024) ಟಿಕೆಟ್​ ಮಾರಾಟ ಶನಿವಾರದಿಂದ (ಸೆ.28) ಆರಂಭವಾಗಲಿದೆ. ಎರಡು ರೀತಿಯ ಟಿಕೆಟ್​ಗಳಿವೆ. ಗೋಲ್ಡ್​ ಕಾರ್ಡ್​ (Gold Card) ಮತ್ತು ಸಾಮಾನ್ಯ ಟಿಕೆಟ್​​. ಈ ಎರಡವುಗಳನ್ನು ಆನ್​ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ. ಸೆಪ್ಟೆಂಬರ್​ 30ರವರೆಗೆ ಮಾತ್ರ ಗೋಲ್ಡ್​ ಕಾರ್ಡ್​ ಮತ್ತು ಟಿಕೆಟ್ ​ಮಾರಾಟ ಮಾಡಲಾಗುತ್ತದೆ ಎಂದು ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು.

ಗೋಲ್ಡ್​ ಕಾರ್ಡ್​, ಟಿಕೆಟ್​ ದರ

ದಸರಾ ಮತ್ತು ಯುವ ದಸರಾಗೆ ಟಿಕೆಟ್​ ಮಾರಾಟ ಸೆ.28ರಿಂದ ಆರಂಭವಾಗಲಿದೆ. ಪ್ರತಿನಿತ್ಯ 1 ಸಾವಿರದಿಂದ 1500 ಗೋಲ್ಡ್ ಕಾರ್ಡ್​ಗಳನ್ನು ಮರಾಟ ಮಾಡಲಾಗುತ್ತದೆ. ಒಂದು ದಸರಾ ಗೋಲ್ಡ್ ಕಾರ್ಡ್​ಗೆ 6,500 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್​ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿ‌ನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 3,500 ರೂ. ಬೆಲೆಯ ಟಿಕೆಟ್​ ಲಭ್ಯವಿದೆ. ಇನ್ನು, ಕೇವಲ ಪಂಜಿನ ಕವಾಯತು ವೀಕ್ಷಣೆಗೆ 1,000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

ಟಿಕೆಟ್​ ಖರೀದಿ ಹೇಗೆ?

  • ಮೈಸೂರು ದಸರಾ ಅಧಿಕೃತ ವೆಬ್​ಸೈಟ್ https://www.mysoredasara.gov.in ಗೆ ಭೇಟಿ ನೀಡಿ.
  • ಹೋಮ್​ ಪೇಜ್​ನಲ್ಲಿ ಟಿಕೆಟ್​ಗಳು ಮತ್ತು ಲೈವ್​ ಅಂತ ಕಾಣುತ್ತದೆ.
  • ಅದರ ಮೇಲೆ ಕ್ಲಿಕ್​ ಮಾಡಿದ ನಂತರ ಆಯ್ಕೆ ಕೇಳುತ್ತದೆ.
  • ಟಿಕೆಟ್​ ಬುಕ್ಕಿಂಗ್​ ಮೇಲೆ ಕ್ಲಿಕ್​ ಮಾಡಿ.
  • ನಂತರ ಟಿಕೆಟ್​ ಬುಕ್ಕಿಂಗ್​ ಪೇಜ್​ ತೆರಯುತ್ತದೆ
  • ಕೆಳಗಡೆ ಬಂದರೆ ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಪಂಜಿನ ಕವಾಯಿತು ಬನ್ನಿಮಂಟಪ, ದಸರಾ 2024 ಜಂಬೂ ಸವಾರಿ ದರ ಸಮೇತ ಆಯ್ಕೆ ತೋರಿಸಲಾಗಿರುತ್ತದೆ.
  • ಬಳಿಕ, ಟಿಕೆಟ್​ ಖರೀದಿ ಎಂಬುವುದರ ಮೇಲೆ ಕ್ಲಿಕ್​ ಮಾಡಿ, ಮತ್ತೊಂದು ಪೇಜ್​ ತೆರೆಯುತ್ತದೆ. ಅಲ್ಲಿ ಎಷ್ಟು ಟಿಕೆಟ್​ ಅಂತ ಕ್ಲಿಕ್​ ಮಾಡಿ. ನಂತರ buy tickets ಮೇಲೆ ಕ್ಲಿಕ್​ ಮಾಡಿ. ನಿಮ್ಮ ಸಂಪೂರ್ಣ ಮಾಹಿತಿ ದಾಖಲಿಸಿ, ಹಣ ಪಾವತಿಸಿ ಟಿಕೆಟ್​ ಖರೀದಿಸಿ.

ಇದನ್ನೂ ಓದಿ: ಮೈಸೂರು ದಸರಾ ಗಜಪಡೆ, ಅಶ್ವಾರೋಹಿ ಪಡೆಗೆ ಸಿಡಿಮದ್ದು ತಾಲೀಮು: ಬೆದರಿದ ಹೊಸ ಆನೆಗಳು, ಚದುರಿದ ಕುದುರೆಗಳು‌!

ಸಿಂಹಾಸನ ಜೋಡಣಾ ಕಾರ್ಯ ಆರಂಭ

ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಿದೆ. ಬೆಳಗ್ಗೆ 7.30ಕ್ಕೆ ನವಗ್ರಹ ಹೋಮ ಶಾಂತಿ ಪೂಜೆ ಮೂಲಕ ಸಿಂಹಾಸನ ಜೋಡಣಾ ಕಾರ್ಯ ಶುರುವಾಯಿತು. ಅರಮನೆ ದರ್ಬಾರ್ ಹಾಲ್​ನಲ್ಲಿ ಬೆಳಗ್ಗೆ 9.55 ರಿಂದ 10.25ರೊಳಗೆ ರತ್ನಖಚಿತ ಸಿಂಹಾಸನ ಜೋಡಿಸಲಾಗಿದೆ.  ಅಕ್ಟೋಬರ್​ 3ರಿಂದ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ.  ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಅರಮನೆ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:34 am, Fri, 27 September 24

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು