Kannada News Karnataka Mysuru Mysore Dasara 2024: South Western Railway will attach Additional Coaches to 34 Mysore trains, Kannada News
ದಸರಾ ಹಬ್ಬ: ಮೈಸೂರಿಗೆ ತೆರಳುವ 34 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ
ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ತಯಾರಿ ಜೋರಾಗಿ ನಡೆದಿದೆ. ದಸರಾವನ್ನು ವೀಕ್ಷಿಸಲು ರಾಜ್ಯ, ಅಂತರರಾಜ್ಯ, ವಿದೇಶದಿಂದಲೂ ಜನರು ಆಗಮಿಸುತ್ತಾರೆ. ಇದರಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಳವಾಗಲಿದೆ. ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.
ದಸರಾ, ರೈಲು
Follow us on
ಬೆಂಗಳೂರು, ಸೆಪ್ಟೆಂಬರ್ 24: ದಸರಾ (Dasara 2024) ಸಂಬಂಧ ಮೈಸೂರಿಗೆ (Mysore) ಪ್ರಯಾಣಿಸುವರ ಸಂಖ್ಯೆ ಅಧಿಕವಾಗುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯವು (South Western Railway) 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಣೆ ಮಾಡಲಿದೆ.
ಹೆಚ್ಚು ಬೋಗಿಗಳನ್ನ ಜೋಡಿಸುವ ರೈಲುಗಳ ವಿವರ
ಒಂದು ಸ್ಲೀಪರ್ ಕ್ಲಾಸ್
ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್
ಅಕ್ಟೋಬರ್ 1 ರಿಂದ 12ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸಪ್ರೆಸ್
ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 06233/06234 ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್
ಅಕ್ಟೋಬರ್ 2 ರಿಂದ 13ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ಪ್ರೆಸ್
ಅಕ್ಟೋಬರ್ 3 ರಿಂದ 14ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸಪ್ರೆಸ್
ಅಕ್ಟೋಬರ್ 1 ರಿಂದ 12 ರವರೆಗೆ ರೈಲು ಸಂಖ್ಯೆ 16591 ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸಪ್ರೆಸ್.
ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 16592 ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸಪ್ರೆಸ್
ಅಕ್ಟೋಬರ್ 2 ರಿಂದ 13 ರವರೆಗೆ ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
ಅಕ್ಟೋಬರ್ 3 ರಿಂದ 14 ರವರೆಗೆ ರೈಲು ಸಂಖ್ಯೆ 16536 ಪಂಢರಪುರ ಗೋಲಗುಂಬಜ್ ಎಕ್ಸಪ್ರೆಸ್
ಎರಡು ಸ್ಲೀಪರ್ ಕ್ಲಾಸ್
ಅಕ್ಟೋಬರ್ 3 ರಿಂದ 12ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್
ಅಕ್ಟೋಬರ್ 4 ರಿಂದ 13ರವರೆಗೆ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್