ಮುಡಾ ಹಗರಣ: ಸಿಎಂ ಪತ್ನಿ ಹೆಸರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎನ್ನಲಾದ ಲಿಸ್ಟ್​ ವೈರಲ್

| Updated By: ವಿವೇಕ ಬಿರಾದಾರ

Updated on: Nov 12, 2024 | 8:50 AM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50-50 ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳು ಮಂಜೂರಾಗಿತ್ತು ಎನ್ನಲಾಗಿರುವ ಪಟ್ಟಿ ವೈರಲ್​ ಆಗಿದೆ.

ಮುಡಾ ಹಗರಣ: ಸಿಎಂ ಪತ್ನಿ ಹೆಸರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎನ್ನಲಾದ ಲಿಸ್ಟ್​ ವೈರಲ್
ಮುಡಾ
Follow us on

ಮೈಸೂರು, ನವೆಂಬರ್​ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) 50-50 ನಿವೇಶ ಹಂಚಿಕೆ ಹಗರಣ (Muda Scam) ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ವಾಗ್ದಾಳಿ ಮಾಡಲು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಿದೆ. ಈ ಹಿಂದೆ ಮುಡಾದಿಂದ ಹಂಚಿಕೆ ಮಾಡಲಾಗಿದ್ದ 211 ನಿವೇಶನಗಳ ಪಟ್ಟಿ ಟಿವಿ9ಗೆ ಲಭ್ಯವಾಗಿತ್ತು. ಇದೀಗ ನಿವೇಶನ ಪಡೆದವರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Paravati) ಅವರ ಹೆಸರೂ ಇರುವ ಪಟ್ಟಿ ಸಮಾಜಿಕ ಜಾಲಾಣದಲ್ಲಿ  ವೈರಲ್​ ಆಗಿದೆ.

ಪಟ್ಟಿಯಲ್ಲಿ ಬರೊಬ್ಬರಿ 928 ನಿವೇಶಗಳ ವಿವರ ಇದೆ. ವೈರಲ್​ ಆದ ಪಟ್ಟಿಯಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಪಡೆದ 14 ನಿವೇಶನಗಳ ವಿವರ ಇದೆ. ಹಾಗೇ ಸಿದ್ದರಾಮಯ್ಯ ಆಪ್ತ ಹಿನ್‌ಕಲ್ ಪಾಪಣ್ಣ ಸೇರಿದಂತೆ ಹಲವರು 50:50 ಅನುಪಾತದಲ್ಲಿ ಪಡೆದಿರುವ ಸೈಟ್‌ಗಳ ವಿವರ ಕೂಡ ಇದೆ.

ಈ ಹಿಂದಿನ ಪಟ್ಟಿಯಲ್ಲಿ ಏನಿತ್ತು?

ಮೂಡಾ 241 ನಿವೇಶನ ಮಂಜೂರು ಮಾಡಿತ್ತು. 241 ನಿವೇಶನಗಳಲ್ಲಿ ಅಬ್ದುಲ್ ವಾಜಿದ್ ಒಬ್ಬರಿಗೆನೇ 26 ನಿವೇಶನ ಮಂಜೂರು ಮಾಡಲಾಗಿತ್ತು. ಯಾವತ್ತೋ ವಶಪಡಿಸಿಕೊಂಡ ಭೂಮಿಗಳಿಗೆ 2020 ರಿಂದ 2023ರ ಅವಧಿಯಲ್ಲಿ ಆಯುಕ್ತರ ತೀರ್ಮಾನದಂತೆ ಸೈಟ್ ಹಂಚಿಕೆ ಮಾಡಲಾಗಿತ್ತು ಎಂದು ಹಿಂದೆ ದೊರೆತ್ತಿದ್ದ ಪಟ್ಟಿಯಲ್ಲಿ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್​​​, ಮತ್ತೊಂದು ಸಾಕ್ಷಿ ಬಯಲು ಮಾಡಿದ ಸ್ನೇಹಮಯಿ ಕೃಷ್ಣ

ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ಕೇಳಿ ಬಂದ ಆರೋಪ

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು.

ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:49 am, Tue, 12 November 24