ಮುಡಾ ಹಗರಣ: 50-50 ನಿಯಮ ಎಂದರೇನು? ಸೈಟ್ ಹಂಚಿಕೆ ಹೇಗೆ? ಇಲ್ಲಿದೆ ಮಾಹಿತಿ

ಮುಡಾ ಹಗರಣ ಕರ್ನಾಟಕದಲ್ಲಿ ಬಹಳಷ್ಟು ಸದ್ದು ಮಾಡಿದೆ. ಇದೀಗ 50-50 ಅನುಪಾತದಲ್ಲಿ ಯಾರಿಗೆಲ್ಲ ಮುಡಾ ಸೈಟ್ ಹಂಚಿಕೆ ಮಾಡಿದೆ ಎಂಬ ಪಟ್ಟಿ ಲಭ್ಯವಾಗಿದೆ. ಹಾಗಾದರೆ, 50:50 ಅನುಪಾತದ ನಿಯಮ ಎಂದರೇನು? ಇದರಡಿಯಲ್ಲಿ ಸೈಟ್ ಹಂಚಿಕೆ ಹೇಗೆ ನಡೆಯುತ್ತದೆ? ಈಗ ವಿವಾದ ಸೃಷ್ಟಿಯಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ಮುಡಾ ಹಗರಣ: 50-50 ನಿಯಮ ಎಂದರೇನು? ಸೈಟ್ ಹಂಚಿಕೆ ಹೇಗೆ? ಇಲ್ಲಿದೆ ಮಾಹಿತಿ
ಮುಡಾ
Follow us
ದಿಲೀಪ್​, ಚೌಡಹಳ್ಳಿ
| Updated By: ಗಣಪತಿ ಶರ್ಮ

Updated on: Nov 09, 2024 | 2:38 PM

ಮೈಸೂರು, ನವೆಂಬರ್ 9: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ವಿಚಾರಕ್ಕೆ ಸಂಬಂಧಿಸಿದ ಇದೀಗ 50:50 ಅನುಪಾತದಲ್ಲಿ ಯಾರಿಗೆಲ್ಲ ಮುಡಾ ಸೈಟ್​​ಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬ ವಿವರ ಬಹಿರಂಗವಾಗಿದೆ. ಮುಡಾ ನಿವೇಶನ ಪಡೆದವರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು 50:50 ಅನುಪಾತದಲ್ಲಿ ನಿವೇಶನ ಪಡೆದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನಂತರ ಅವರು ಸೈಟ್​ಗಳನ್ನು ಹಿಂದಿರುಗಿಸಿದ್ದರು. ಏತನ್ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಿಚಾರಣೆಗೂ ಒಳಪಡಿಸಿದೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ಕೂಡ ಹಗರಣದ ತನಿಖೆ ಆರಂಭಿಸಿದೆ.

ಹಾಗಾದರೆ, 50:50 ಅನುಪಾತದಲ್ಲಿ ಮುಡಾ ನಿವೇಶನಗಳ ಹಂಚಿಕೆ ಹೇಗೆ ನಡೆಯುತ್ತದೆ? ಅದಕ್ಕೆ ಸಂಬಂಧಿಸಿದ ನಿಯಮಗಳು ಹೇಳುವುದೇನು ಎಂಬ ವಿವರ ಇಲ್ಲಿದೆ.

50:50 ಅನುಪಾತದ ನಿಯಮ ಎಂದರೇನು?

ರೈತರರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಯಲ್ಲಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಜಾಗದ ಶೇ 50 ರಷ್ಟು ಪಾಲನ್ನು ರೈತರಿಗೆ ಹಿಂದಿರುಗಿಸುವುದಕ್ಕೆ ಸಂಬಂಧಿಸಿದ ನಿಯಮವೇ 50:50 ಅನುಪಾತದ ನಿಯಮ.

50:50 ಅನುಪಾತದ ನಿಯಮದಲ್ಲಿ ಏನೇನಿದೆ?

ಉದಾಹರಣೆಗೆ, ಒಬ್ಬ ರೈತನಿಂದ ಒಂದು ಎಕರೆ ಭೂಮಿಯನ್ನು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದೆ ಎಂದಿಟ್ಟುಕೊಳ್ಳೋಣ. ಅದರಲ್ಲಿ ಲೇಔಟ್ ನಿರ್ಮಿಸಿದರೆ ಸೃಷ್ಟಿಯಾಗುವ ನಿವೇಶನದಲ್ಲಿ ಅರ್ಧ ಪಾಲನ್ನು ರೈತನಿಗೆ ಬಿಟ್ಟುಕೊಡಬೇಕು ಎನ್ನುವುದು ನಿಯಮ‌ದ ಅರ್ಥ. (ಒಂದು ಎಕರೆ ಭೂಮಿಯಲ್ಲಿ ಚರಂಡಿ, ಸಿಎ ನಿವೇಶನ, ಪಾರ್ಕ್, ರಸ್ತೆ ಎಲ್ಲಾ ನಿರ್ಮಾಣವಾದ ಬಳಿಕ 10 ಸೈಟ್​​ಗಳು ಉಳಿದರೆ ಅದರಲ್ಲಿ 5 ಸೈಟ್ ರೈತನಿಗೆ ಮತ್ತು 5 ಸೈಟ್ ಪ್ರಾಧಿಕಾರ ಪಡೆದುಕೊಳ್ಳುತ್ತದೆ.)

2015 ರಲ್ಲಿ ರಾಜ್ಯ ಸರ್ಕಾರ 50:50 ಅನುಪಾತದ ಅಧಿಸೂಚನೆ ಹೊರಡಿಸಿದತ್ತು. ಅಧಿಸೂಚನೆ ಹೊರಡಿಸಿದ ದಿನದಿಂದ ನಂತರದ ದಿನಗಳಲ್ಲಿ ರಚನೆ ಮಾಡುವ ಬಡಾವಣೆಗಳಿಗೆ 50-50 ನಿಯಮ ಅಳವಡಿಸಿಕೊಳ್ಳಲು ಹೇಳಿದೆ. ಆದರೆ ಈ ನಿಯಮವೇ ತಪ್ಪು ಎನ್ನುವುದು ಹಲವರ ಆರೋಪ.

ವಿವಾದ ಸೃಷ್ಟಿಯಾಗಿದ್ದೇಕೆ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಲ್ಲಿಯವರೆಗೂ 50-50 ನಿಯಮದಡಿ ಹಂಚಿಕೆ ಮಾಡಿರುವ ಸೈಟ್​​ಗಳನ್ನು 2015 ಕ್ಕೂ ಹಿಂದೆ ಪ್ರಾಧಿಕಾರ ವಶಪಡಿಸಿಕೊಂಡ ಭೂಮಿಗಳಿಗೆ ನೀಡಲಾಗಿದೆ‌. ಅದಕ್ಕೂ ಮೊದಲು ಮುಡಾದಲ್ಲಿ 60-40 ಅನುಪಾತದ ನಿಯಮ ಅಸ್ತಿತ್ವದಲ್ಲಿತ್ತು. ಆಗ ಹಣ ಹಾಗೂ ಪರಿಹಾರವನ್ನು ಲ್ಯಾಂಡ್ ಲೂಸರ್ ನಿಯಮದಲ್ಲಿ ಪರಿಹಾರ ನೀಡಲಾಗುತಿತ್ತು. ಆದರೆ ಅತ್ಯಂತ ಹಳೆಯ, ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೂ ಈಗಿನ ನಿಯಮದಡಿ ಪರಿಹಾರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮುಡಾ ನಿವೇಶನ ಹಂಚಿಕೆ ಪಟ್ಟಿ ಲಭ್ಯ: ಒಬ್ಬರಿಗೆ 26 ಸೈಟ್​ ಹಂಚಿದ್ದ ಮುಡಾ!

ಇದೀಗಾ 50-50 ಅನುಪಾತದ ನಿಯಮದಡಿಯಲ್ಲಿ 1968 ಇಸವಿಯಲ್ಲಿ ಭೂಮಿ ಕಳೆದುಕೊಂಡವರಿಗೂ ಸೈಟ್ ನೀಡಿರುವುದು ಗೊತ್ತಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್