ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರ ಹೌಸ್​ ಫುಲ್: ಹುಲಿ, ಚಿರತೆಗೆ ಜಾಗವೇ ಇಲ್ಲ

| Updated By: ರಮೇಶ್ ಬಿ. ಜವಳಗೇರಾ

Updated on: Dec 02, 2023 | 6:24 PM

ಕಳೆದ ತಿಂಗಳಲ್ಲಿ ಚಿರತೆ ಹಾಗೂ ಹುಲಿಗಳ ಸೆರೆ ಹೆಚ್ಚಾಗಿದೆ. ಎಲ್ಲೊಂದರಲ್ಲಿ ಹುಲಿ, ಚಿರತೆಗಳದ್ದೇ ಹಾವಳಿಯಾಗಿದೆ. ಹೀಗಾಗಿ ದೂರು ಬಂದ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ಹುಲಿ, ಚಿರತೆಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಹೀಗೆ ಹಿಡಿದು ತಂದು ಮೈಸೂರು ಮೃಗಾಲಯದ ಪುನರ್ವಸತಿಗೆ ಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯ ಪುನರ್ವಸತಿ ಕೇಂದ್ರ ಭರ್ತಿಯಾಗಿದೆ.

ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರ ಹೌಸ್​ ಫುಲ್: ಹುಲಿ, ಚಿರತೆಗೆ ಜಾಗವೇ ಇಲ್ಲ
ಚಿರತೆ, ಹುಲಿ
Follow us on

ಮೈಸೂರು, (ಡಿಸೆಂಬರ್ 02): ಕಾಡು ಪ್ರಾಣಿಗಳು ಆಹಾರ ಹರಸಿ ನಾಡಿನತ್ತ ಬರುತ್ತಿವೆ. ಹುಲಿ, ಚಿರತೆ, ಕರಡಿ, ಆನೆಗಳು ಹಳ್ಳಿಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿವೆ. ಮತ್ತೊಂದೆಡೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸಹ ಕಾಡು ಪ್ರಾಣಿಗಳನ್ನು ಸೆರೆಹಿಡಿದು ಪುನರ್ವಸತಿಗಳಿಗೆ ರವಾನಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆದ್ರೆ, ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪುನರ್ವಸತಿ ಕೇಂದ್ರಲ್ಲಿ(Chamarajendra Zoo Rehabilitation Centre) ಹುಲಿ, ಚಿರತೆಗೆ ಜಾಗವೇ ಇಲ್ಲದಂತಾಗಿದೆ.

ಹೌದು.. ಕರ್ನಾಟದಕ ವಿವಿದೆಡೆ ಹುಲಿ, ಚಿರತೆ ಸೆರೆಯಾಗುತ್ತಿದ್ದು, ಅವುಗಳನ್ನು ಮೈಸೂರು ಮೃಗಾಲಯದ ಪುನರ್ವಸತಿಗೆ ರವಾನಿಸಲಾಗುತ್ತಿದೆ. ಆದ್ರೆ, ಇದೀಗ ಮೈಸೂರು ಮೃಗಾಲಯದ ಪುನರ್ವಸತಿ ತುಂಬಿದ್ದು, ಇನ್ಮುಂದೆ ಸೆರೆ ಹಿಡಿದು ತರುವ ಹುಲಿ, ಚಿರತೆಗಳಿಗೆ ಜಾಗ ಖಾಲಿ ಇಲ್ಲದಂತಾಗಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಫಾರಿ ಆರಂಭ: ಸಫಾರಿ ಸಮಯ, ದರ ವಿವರ ಇಲ್ಲಿದೆ

ಕಳೆದ 2 ವರ್ಷದಿಂದ ಸೆರೆ ಸಿಕ್ಕಿರುವ ಚಿರತೆ ಅಂಕಿ-ಸಂಖ್ಯೆ

2021-2022ರಲ್ಲಿ ಒಟ್ಟು 23 ಚಿರತೆಗಳನ್ನು ಸೆರೆಹಿಡಿಯಲಾಗಿದ್ದು, ಈ ಪೈಕಿ 1 ಚಿರತೆಯನ್ನು ಪುನರ್ವಸತಿ ಕೇಂದ್ರದಲ್ಲಿಟ್ಟರೆ, ಇನ್ನುಳಿದ 22 ಚಿರತೆಗಳನ್ನು ಕಾಡಿಗೆ ಬಿಡಲಾಗಿದೆ. 2022-23ರಲ್ಲಿ ಒಟ್ಟು 32 ಚಿರತೆಗಳು ಸೆರೆ ಸಿಕ್ಕಿದ್ದು, ಎಲ್ಲಾವುಗಳನ್ನು ಕಾಡಿಗೆ ರವಾನಿಸಲಾಗಿದೆ.

ಇನ್ನು 2023-24(ಅಕ್ಟೋಬರ್ ಅಂತ್ಯಕ್ಕೆ) 16 ಚಿರತೆಗಳು ಸಿಕ್ಕಿದ್ದು, ಇವುಗಳಲ್ಲಿ 3 ಚಿರತೆಗಳನ್ನು ಪುನರ್ವಸತಿ ಕೇಂದ್ರಕ್ಕೆ ತಂದಿದ್ದರೆ, 13 ಚಿರತೆಗಳನ್ನು ಕಾಡಿಗೆ ಬಿಡಲಾಗಿದೆ. ಹೀಗೆ ಒಟ್ಟು71 ಚಿರತೆಗಳು ಸೆರೆ ಸಿಕ್ಕಿದ್ದು, ಇವುಗಳ ಪೈಕಿ 4 ಪುನರ್ವಸತಿ ಕೇಂದ್ರಕ್ಕೆ ಬಿಟ್ಟರೆ, ಇನ್ನುಳಿದಂತೆ 67 ಚಿರತೆಗಳನ್ನ ಕಾಡಿಗೆ ರವಾನಿಸಲಾಗಿದೆ.

ಮೈಸೂರು ಮೃಗಾಲಯ ನಿರ್ದೇಶಕ ಹೇಳಿದ್ದೇನು?

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈಸೂರು ಮೃಗಾಲಯ ನಿರ್ದೇಶಕ ಮಹೇಶ್, ಚಾಮರಾಜೇಂದ್ರ ಮೃಗಾಲಯ ಪುನರ್ವಸತಿ ಕೇಂದ್ರ ಭರ್ತಿಯಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ 8 ಹುಲಿ ಹಾಗೂ 15 ಚಿರತೆಗಳು ಇವೆ. ಕಳೆದ ಎರಡು ವರ್ಷದಲ್ಲಿ ಹೆಚ್ಚಾಗಿ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಇದರಲ್ಲಿ 4 ಚಿರತೆಗಳನ್ನು ಮಾತ್ರ ಪುನರ್ವಸತಿ ಕೇಂದ್ರಕ್ಕೆ ತಂದಿದ್ದರೆ, ಉಳಿದ ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಇದು ಕಳೆದ ಒಂದು ತಿಂಗಳಲ್ಲಿ ಚಿರತೆ ಸೆರೆ ಹೆಚ್ಚಾಗಿದ್ದು, ಪ್ರತಿದಿನ ಒಂದಿಲ್ಲೊಂದು ಕಡೆ ಚಿರತೆ ಸೆರೆಯಾಗುತ್ತಿದೆ. ಹೀಗಾಗಿ ಇನ್ಮುಂದೆ ಗಾಯಗೊಂಡ ಹುಲಿ ಚಿರತೆ ಸೆರೆಯಾದರೆ ಮೈಸೂರಿನ ಪುನರ್ವಸತಿ ಕೇಂದ್ರದಲ್ಲಿ ಇಡಲು ಜಾಗವಿಲ್ಲ. ಬೇರೆ ಕಡೆ ಸ್ಥಳಾಂತರ ಮಾಡುವ ಪರಿಸ್ಥಿತಿ ಇದೆ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ