ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಮಹಾಭಿಷೇಕ, ಫೋಟೋಸ್ ಇಲ್ಲಿದೆ
Mysuru Chamundi Betta: ಇಂದು ಮೈಸೂರಿನ ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ 18ನೇ ವರ್ಷದ ಮಹಾಭಿಷೇಕ ನಡೆದಿದೆ. ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಮಹಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂದಿ ವಿಗ್ರಹಕ್ಕೆ 32 ಬಗೆಯ ಅಭಿಷೇಕಗಳನ್ನು ನೆರವೇರಿಸಲಾಯಿತು.
Updated on: Dec 03, 2023 | 1:21 PM

ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ನಂದಿ ವಿಗ್ರಹಕ್ಕೆ ಇಂದು ವಿಜೃಂಭಣೆಯಿಂದ ಮಹಾಭಿಷೇಕ ನಡೆಯಿತು. ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಮಹಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಂದು ನಡೆದ 18ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಮಹಾಭಿಷೇಕ ಕಾರ್ಯಕ್ರಮದಲ್ಲಿ ಸುತ್ತೂರು ದೇಶೀಕೇಂದ್ರ ಶ್ರೀಗಳು, ಹೊಸಮಠದ ಚಿದಾನಂದಾ ಶ್ರೀಗಳು ಭಾಗಿಯಾಗಿದ್ದರು.

ಕ್ಷೀರಾಭಿಷೇಕ, ಗಂಧಾಭಿಷೇಕ, ಕುಂಕುಮಾಭಿಷೇಕ, ಅರಿಶಿನ ಅಭಿಷೇಕ ಸೇರಿದಂತೆ ಸುಮಾರು 32 ಬಗೆಯ ಅಭಿಷೇಕಗಳನ್ನು ಸುತ್ತೂರು ಶ್ರೀಗಳು ನೆರವೇರಿಸಿದರು.

ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಬಗೆ ಬಗೆಯ ಫಲ ಪುಷ್ಪಗಳ ಮಿಶ್ರಿತ ಅಭಿಷೇಕ ಮಾಡಲಾಯಿತು. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿರುವ ಐತಿಹಾಸಿಕ ನಂದಿ ವಿಗ್ರಹಕ್ಕೆ ಮಹಾಭಿಷೇಕ ವಿಜೃಂಭಣೆಯಿಂದ ನೆರವೇರಿತು.

ಚಾಮುಂಡಿ ಬೆಟ್ಟದ ನಂದಿ ವಿಗ್ರಹಕ್ಕೆ ಇಂದು ನಡೆದ ಮಹಾಭಿಷೇಕವನ್ನು ನೂರಾರು ಜನರು ಕಣ್ತುಂಬಿಕೊಂಡರು.

ಮೂರನೇ ಕಾರ್ತಿಕ ಸೋಮವಾರಕ್ಕೂ ಮುನ್ನ ಭಾನುವಾರ ಮಹಾಭಿಷೇಕ ಜರುಗಿದೆ. ಬೆಟ್ಟದ ಬಳಗ ಟ್ರಸ್ಟ್ ನ ಪ್ರಕಾಶನ್ ಕಾರ್ಯದರ್ಶಿ ಗೋವಿಂದ ಅವರ ನೇತೃತ್ವದಲ್ಲಿ ಮಹಾಭಿಷೇಕಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
























