ಕೇವಲ 5 ತಿಂಗಳುಗಳಲ್ಲಿ 135.36 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ ಮೈಸೂರು ಮಹಾನಗರ ಪಾಲಿಕೆ

Mysuru Property Tax collection; ವಲಯ 1ರಲ್ಲೇ ಒಟ್ಟು 13,607 ಆಸ್ತಿ ಮಾಲೀಕರಿಂದ ತೆರಿಗೆ ಆದಾಯ 16,66,85,457 ರೂ. ಸಂಗ್ರಹಿಸಲಾಗಿದೆ. ಈ ಪೈಕಿ 4,55,88,679 ರೂ. ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗಿದೆ. ಕರ್ನಾಟಕ ವನ್ ಮೂಲಕ 82,28,199 ರೂ. ಸಂಗ್ರಹಿಸಲಾಗಿದ್ದು, ಬ್ಯಾಂಕ್ ಕೌಂಟರ್ ಗಳಲ್ಲಿ 11,28,68,579 ರೂ. ಸಂಗ್ರಹಿಸಲಾಗಿದೆ.

ಕೇವಲ 5 ತಿಂಗಳುಗಳಲ್ಲಿ 135.36 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ ಮೈಸೂರು ಮಹಾನಗರ ಪಾಲಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Sep 20, 2023 | 9:47 PM

ಮೈಸೂರು, ಸೆಪ್ಟೆಂಬರ್ 20: ಮೈಸೂರು ಮಹಾನಗರ ಪಾಲಿಕೆಯು (MCC) ಆಸ್ತಿ ತೆರಿಗೆ ಸಂಗ್ರಹದಲ್ಲಿ (Property Tax collection) ಗಮನಾರ್ಹ ಯಶಸ್ಸನ್ನು ಸಾಧಿಸಿದ್ದು, ಕೇವಲ 5 ತಿಂಗಳುಗಳಲ್ಲಿ 135.36 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಈ ವರ್ಷದ ವಾರ್ಷಿಕ ಗುರಿಯು162 ಕೋಟಿ ರೂ. ಆಗಿದ್ದು, ಉಳಿದ ಮೊತ್ತವನ್ನು ಮುಂದಿನ ತಿಂಗಳುಗಳಲ್ಲಿ ಸಂಗ್ರಹಿಸಲಾಗುವುದು. ಈ ಸಾಧನೆಯು ಗುರಿಯ ಶೇ 80 ರಷ್ಟಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಏಪ್ರಿಲ್ 1 ರಿಂದ ಸೆಪ್ಟೆಂಬರ್ 19, 2023 ರವರೆಗೆ ಐದು ತಿಂಗಳ ಸಂಕ್ಷಿಪ್ತ ಅವಧಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ಆಯುಕ್ತರು, ಸಹಾಯಕ ಆಯುಕ್ತರು, ಕಂದಾಯ ನಿರೀಕ್ಷಕರು ಮತ್ತು ಇತರರು ಸೇರಿದಂತೆ ಎಲ್ಲಾ ಒಂಬತ್ತು ಎಂಸಿಸಿ ವಲಯಗಳ ಅಧಿಕಾರಿಗಳ ನೇತೃತ್ವದಲ್ಲಿ ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸಮರ್ಥವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಲಯ 1ರಲ್ಲೇ ಒಟ್ಟು 13,607 ಆಸ್ತಿ ಮಾಲೀಕರಿಂದ ತೆರಿಗೆ ಆದಾಯ 16,66,85,457 ರೂ. ಸಂಗ್ರಹಿಸಲಾಗಿದೆ. ಈ ಪೈಕಿ 4,55,88,679 ರೂ. ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗಿದೆ. ಕರ್ನಾಟಕ ವನ್ ಮೂಲಕ 82,28,199 ರೂ. ಸಂಗ್ರಹಿಸಲಾಗಿದ್ದು, ಬ್ಯಾಂಕ್ ಕೌಂಟರ್ ಗಳಲ್ಲಿ 11,28,68,579 ರೂ. ಸಂಗ್ರಹಿಸಲಾಗಿದೆ.

ವಲಯ 2 ರಲ್ಲಿ 17,64,67,528 ರೂ. ಸಂಗ್ರಹಿಸಲಾಗಿದ್ದು, ವಲಯ 3ರಲ್ಲಿ 8,04,76,514 ರೂ. ಆನ್‌ಲೈನ್‌ನಲ್ಲಿ ಸಂಗ್ರಹಿಸಲಾಗಿದೆ. ಕರ್ನಾಟಕ ವನ್ ಮೂಲಕ 3,53,59,979 ರೂ. ಸಂಗ್ರಹಿಸಲಾಗಿದ್ದು, ಬ್ಯಾಂಕ್ ಕೌಂಟರ್‌ಗಳಲ್ಲಿ 11,11,25,444 ರೂ. ಸಂಗ್ರಹಿಸಲಾಗಿದೆ. ವಲಯವಾರು ಒಟ್ಟು 22,80,71,912 ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿಜಯಪುರ: 15 ವರ್ಷದಿಂದ ತೆರಿಗೆ ಕಟ್ಟದ ಮುದ್ದೇಬಿಹಾಳದ ಬಾರೊಂದರ ಮಾಲೀಕ ಪುರಸಭೆಯವರು ತಮಟೆ ಬಾರಿಸತೊಡಗಿದಾಗ ಕೂಗಾಡತೊಡಗಿದ!

ಎಂಸಿಸಿ ಉಪ ಆಯುಕ್ತ (ಕಂದಾಯ) ದಾಸೇಗೌಡ ಅವರು ಈ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಹಳೆಯ ಆಸ್ತಿಗಳ ಮೇಲಿನ ಬಾಕಿ ಮಾತ್ರವಲ್ಲದೆ ಹೊಸ ಆಸ್ತಿಗಳಿಂದ ಆಸ್ತಿ ತೆರಿಗೆಯನ್ನು ಸಹ ಸೇರಿಸಿ ಸಂಗ್ರಹಿಸಲಾಗಿದೆ. ವಲಯ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಸಾರ್ವಜನಿಕರ ಸಹಕಾರವೇ ಈ ಸಾಧನೆಗೆ ಕಾರಣವಾಗಿದೆ ಎಂದು ದಾಸೇಗೌಡ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ