AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara 2021: ದಸರೆಯಲ್ಲಿ ‘ಗಜ ಪ್ರೇಮ’! ಆನೆಗಳ ಪ್ರೀತಿಗೆ ಸಾಕ್ಷಿಯಾಯ್ತು ಮೈಸೂರು ಅರಮನೆ

ಲಕ್ಷ್ಮಿ ಆನೆಯ ಪಕ್ಕದಲ್ಲೇ ನಿಂತು, ಧನಂಜಯ ಆನೆ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಪ್ರಾಣಿಗಳ ನಡುವೆಯೂ ಪ್ರೀತಿ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

Mysuru Dasara 2021: ದಸರೆಯಲ್ಲಿ ‘ಗಜ ಪ್ರೇಮ’! ಆನೆಗಳ ಪ್ರೀತಿಗೆ ಸಾಕ್ಷಿಯಾಯ್ತು ಮೈಸೂರು ಅರಮನೆ
ದಸರೆಯಲ್ಲಿ ಗಜಪಡೆ ಪ್ರೀತಿ ಪ್ರೇಮ
TV9 Web
| Updated By: preethi shettigar|

Updated on:Sep 24, 2021 | 10:39 AM

Share

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2021 ಸಡಗರಕ್ಕೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಮೈಸೂರಿನ ಅರಮನೆಯಲ್ಲಿ ದಸರಾ ವೈಭವ ಕಳೆಗಟ್ಟಿದೆ. ಗಜಪಡೆ ಕಲರವ ಆರಂಭವಾಗಿದೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳಿಗೆ ದಸರಾ ತಾಲೀಮು ಆರಂಭವಾಗಿದೆ. ಈ ನಡುವೆ 20 ವರ್ಷದ ಲಕ್ಷ್ಮಿ ಮತ್ತು ಧನಂಜಯ ಆನೆಗಳ ನಡುವಿನ ಪ್ರೀತಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅರಮನೆಯಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿರುವ ಲಕ್ಷ್ಮಿ ಮತ್ತು ಧನಂಜಯ ಆನೆಗಳ ನಡುವೆ ಪ್ರೀತಿ ಹೆಚ್ಚಾಗಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಕ್ಷ್ಮಿ ಆನೆಯ ಪಕ್ಕದಲ್ಲೇ ನಿಂತು, ಧನಂಜಯ ಆನೆ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಪ್ರಾಣಿಗಳ ನಡುವೆಯೂ ಪ್ರೀತಿ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಮೈಸೂರಿನಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ ಅಭಿಮನ್ಯು ನೇತೃತ್ವದ ಗಜಪಡೆಗೆ ದಿನಕ್ಕೆ 2 ಬಾರಿ ತಾಲೀಮು ನಡೆಸಲಾಗುತ್ತಿದೆ. ಇನ್ನು ಪ್ರತಿನಿತ್ಯ 2-3 ಬಾರಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಲಾಗುತ್ತಿದೆ. ಹೆಸರುಕಾಳು, ಉದ್ದಿನಕಾಳು, ಗೋಧಿ, ಕುಸಲಕ್ಕಿಗೆ ಬೆಣ್ಣೆ ಸೇರಿಸಿ, ಸಿಬ್ಬಂದಿಗಳು ನಿತ್ಯ 2 ಬಾರಿ ಗಜಪಡೆಗೆ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. 750 ಕೆಜಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಕುಮ್ಕಿ ಆನೆಗಳಿಗೆ ವಿಶೇಷ ಆಹಾರ ನೀಡುತ್ತಿದ್ದು, ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್ ಪೌಡರ್, ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯಿಂದ ತಯಾರಿಸಿರುವ ಕುಸುರೆ ನೀಡಲಾಗುತ್ತಿದೆ.

ಮೊದಲು ಅಭಿಮನ್ಯುವಿಗೆ ಸ್ನಾನ, ನಂತರದಲ್ಲಿ ಧನಂಜಯ ಗೋಪಾಲಸ್ವಾಮಿ, ಅಶ್ವತ್ಥಾಮ, ಲಕ್ಷ್ಮಿ, ಚೈತ್ರ, ವಿಕ್ರಮ, ಕಾವೇರಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಬಿಸಿಲು ಹೆಚ್ಚಿರುವುದರಿಂದ ಆನೆಗಳಿಗೆ ದಿನಕ್ಕೆ 2 ರಿಂದ 3 ಬಾರಿ ಸ್ನಾನ ಮಾಡಿಸಲಾಗುತ್ತಿದೆ.

ಗಜಪಡೆಗೆ ತೂಕ ಹೊರಿಸಿ ತಾಲೀಮು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಯಾಪ್ಟನ್ ಅಭಿಮನ್ಯುಗೆ ತೂಕ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಅಶ್ವತ್ಥಾಮ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ಚೈತ್ರಾ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಹಂತಹಂತವಾಗಿ ತೂಕ ಹೆಚ್ಚಿಸಲಿದ್ದಾರೆ.

ಗಜಪಡೆಗಳಿಗೆ ದಸರಾ ಜಂಬೂಸವಾರಿ ತಾಲೀಮು ಕಾಡಿನಿಂದ ನಾಡಿಗೆ ಸೆಪ್ಟೆಂಬರ್ 19 ರಂದು ಆನೆಗಳು ಬಂದಿದ್ದು, ಮೈಸೂರು ಅರಮನೆಯ ಒಳಾವರಣದಲ್ಲಿ ಬಿಂದಾಸ್ ಆಗಿ ವಾಕಿಂಗ್ ಮಾಡುತ್ತಿದ್ದಾವೆ. ದಸರಾ ಗಜಪಡೆಯ ಕ್ಯಾಪ್ಟನ್ ನೇತೃತ್ವದಲ್ಲಿ ಅಶ್ವತ್ಥಾಮ ಗೋಪಾಲಸ್ವಾಮಿ, ಧನಂಜಯ, ವಿಕ್ರಮ, ಚೈತ್ರಾ ಕಾವೇರಿ ಹಾಗೂ ಲಕ್ಷ್ಮೀ ಹೆಸರಿನ ಆನೆಗಳು ಭರ್ಜರಿಯಾಗಿ ಓಡಾಡುತ್ತಿದ್ದಾವೆ. ಆದರೆ, ಗಜಪಡೆಯ ನಡಿಗೆ ದೃಶ್ಯ ನೋಡಲು ಜನರಿಗೆ ಅವಕಾಶ ಇರಲಿಲ್ಲ. ಇದರಿಮದ ಜನ ಸ್ವಲ್ಪ ಬೇಸರಗೊಂಡಿದ್ದಾರೆ.

ಪ್ರತಿವರ್ಷವೂ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಗಜಪಡೆಯ ಗಜಗಾಂಭೀರ್ಯ ನಡಿಗೆ ಜೋರಾಗಿ ನಡೆಯುತ್ತಿತ್ತು. ಎಲ್ಲರೂ ದಸರಾ ಆನೆಗಳ ಬೊಂಬಾಟ್ ನಡಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಅರಮನೆಯಿಂದ ಹೊರಟ ಗಜಪಡೆ ಕೆಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಆಯುರ್ವೇದ ವೃತ್ತ ಬಂಬೂ ಬಜಾರ್ ಮೂಲಕ ಸಾಗಿ ಬನ್ನಿಮಂಟಪ ತಲುಪುತ್ತಿತ್ತು. ಅಲ್ಲಿಂದ ಅರಮನೆಗೆ ಆನೆಗಳು ವಾಪಸಾಗುತ್ತಿದ್ದವು. ಈ ಬಾರಿ ಕೊರೊನಾ ಮೂರನೇ ಅಲೆ ಭೀತಿಯಿಂದ, ದಸರಾ ಜಂಬೂಸವಾರಿ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ತಾಲೀಮು ಸಹ ಅರಮನೆಯೊಳಗೆ ನಡೆಯುತ್ತಿದ್ದು, ಸಹಜವಾಗಿ ಮೈಸೂರಿಗರಿಗೆ ನಿರಾಸೆ ತಂದಿದೆ.

ಇದನ್ನೂ ಓದಿ:

Mysuru Dasara 2021: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ, ಗಜಪಡೆಗೆ ತೂಕ ಹೊರಿಸಿ ತಾಲೀಮು

Mysuru Dasara 2021: ಮೈಸೂರು ಅರಮನೆಗೆ ಇಂದು ದಸರಾ ಗಜಪಡೆ ಆಗಮನ, ಅದ್ಧೂರಿ ಸ್ವಾಗತಕ್ಕಾಗಿ ಸಿದ್ಧತೆ

Published On - 9:37 am, Fri, 24 September 21