ಮೈಸೂರು, (ಆ.07): ವಿಶ್ವವಿಖ್ಯಾತ ಮೈಸೂರು ದಸರಾವನ್ನು (Mysuru Dasara 2023) ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 15 ರಂದು ಸಿಎಂ ಸಿದ್ದರಾಮಯ್ಯ(Siddaramaiah) ದಸರಾಗೆ ಚಾಲನೆ ನೀಡಲಿದ್ದಾರೆ. ಹೀಗಾಗಿ ದಸರಾ ಸಿದ್ಧತೆಗಳು ಶುರುವಾಗಿವೆ. ಇನ್ನು ಮೈಸೂರು ದಸರಾ ಕಳೆ ಹೆಚ್ವಿಸಲು ಗಜ ಪಡೆ ಇದೇ ಸೆಪ್ಟೆಂಬರ್ 1ಕ್ಕೆ ಆಗಮಿಸಲಿವೆ. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಆಗಸ್ಟ್ 07) ಸುದ್ದಿಗಾರರೊಮದಿಗೆ ಮಾತನಾಡಿದ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸೆಪ್ಟೆಂಬರ್ 1ಕ್ಕೆ ಮೈಸೂರಿಗೆ ಗಜ ಪಡೆ ಆಗಮಿಸಲಿದ್ದು, ಮೈಸೂರು ಜಿಲ್ಲಾಡಳಿತ ಸ್ವಾಗತದಿಂದ ಸ್ವಾಗತಿಸಲಾಗುತ್ತದೆ. ಇನ್ನು ಈ ಬಾರಿ 14 ಆನೆಗಳು ಗಜ ಪಯಣದ ಮೂಲಕ ಮೈಸೂರಿಗೆ ಆಗಮನವಾಗಲಿದ್ದು, ಹುಣಸೂರು ತಾಲ್ಲೂಕು ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಈ ಬಾರಿಯ ಮೈಸೂರು ದಸರಾಗೆ ರಾಜ್ಯ ಸರ್ಕಾರದಿಮದ ವಿಶೇಷ ಅನುದಾನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದಸರಾಗೆ ವಿಶೇಷ ಅನುದಾನ ಕೇಳಿಲ್ಲ. ಅದ್ದೂರಿ ದಸರಾಗೆ ಬೇಕಾಗುವಷ್ಟು ಅನುದಾನ ಕೊಡುತ್ತೇವೆ. ದಸರಾ ಉದ್ಘಾಟಕರ ಆಯ್ಕೆ ತೀರ್ಮಾನವನ್ನು ಮುಖ್ಯಂಂತ್ರಿ ವಿವೇಚನೆಗೆ ಬಿಟ್ಟಿದ್ದೇವೆ. ಸಿಎಂ ಅವರೇ ಉದ್ಘಾಟಕರ ಹೆಸರು ತೀರ್ಮಾನ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಈಗಾಗಲೇ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ನಾಗರಹೊಳೆ ಬಂಡೀಪುರದ ವಿವಿಧ ಆನೆ ಕ್ಯಾಂಪ್‌ಗಳಿಗೆ ತೆರಳಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ. ಇನ್ನು ಬಳ್ಳೆ ರಾಂಪುರ ಆನೆ ಶಿಬಿರದಲ್ಲಿರುವ ದಸರಾ ಆನೆಗಳ ಪರಿಶೀಲನೆ ನಡೆದಿದೆ. ನಾಗರಹೊಳೆ, ಬಂಡೀಪುರ ಸೇರಿ ಹಲವು ಕ್ಯಾಂಪ್‌ಗಳಲ್ಲಿ ಮೈಸೂರು ಡಿಸಿಎಫ್ ಸೌರಭ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ. ಈ ಬಾರಿಯೂ ಅರ್ಜುನ ದಸರಾದಲ್ಲಿ ಭಾಗವಹಿಸುವುದು ಖಚಿತವಾಗಿದ್ದು, ಜಂಬೂಸವಾರಿ ವೇಳೆ ಅರ್ಜುನ ಆನೆ ಮಂಚೂಣಿಯಲ್ಲಿ ಹೆಜ್ಜೆ ಹಾಕಲಿದ್ದಾನೆ ಎಂದು ತಿಳಿದುಬಂದಿದೆ.
ಇನ್ನಷ್ಟು ಮೈಸೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:23 pm, Mon, 7 August 23