AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ ವಿವರ

2025ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆಗಳು ಸಹ ನಡೆದಿದ್ದು, ಮೈಸೂರು ನಗರದಲ್ಲಿ ದಸರಾ ಸಂಭ್ರಮ ಕಳೆಗಟ್ಟುತ್ತಿದೆ. ಇನ್ನು ಮೈಸೂರ ದಸರಾದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಜಂಬೂಸವಾರಿ ಹಾಗೂ ಪಂಜಿನ ಕವಾಯತು. ಇವುಗಳನ್ನು ವೀಕ್ಷಿಸಲು ಟಿಕೆಟ್ ಮಾಡಲಾಗಿದ್ದು, ಆನ್ ಲೈನ್​​ ನಲ್ಲೂ ಸಹ ಪಡೆಬಹುದಾಗಿದೆ.

ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ ವಿವರ
Mysuru Dasara
ರಮೇಶ್ ಬಿ. ಜವಳಗೇರಾ
|

Updated on: Sep 07, 2025 | 1:05 PM

Share

ಮೈಸೂರು (ಸೆಪ್ಟೆಂಬರ್.07): ನಾಡಹಬ್ಬ ಮೈಸೂರು ದಸರಾ-2025ರ (Mysuru Dasara 2025) ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು (Gold Card) ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.  ಹೌದು.. ಈ ಬಾರಿಯ ಮೈಸೂರು ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಎಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವವರಿಗೆ ಜಿಲ್ಲಾಡಳಿತ, 6500 ರೂಪಾಯಿ ಗೋಲ್ಡ್‌ ಕಾರ್ಡ್‌, ಟಿಕೆಟ್‌ ಗಳನ್ನು ಬಿಡುಗಡೆ ಮಾಡಿದೆ. ಸೆ.22 ರಿಂದ ಅ.2 ರವರೆಗೆ ನಡೆಯಲಿರುವ ದಸರಾದಲ್ಲಿ ಗೋಲ್ಡ್‌ ಕಾರ್ಡ್‌ ಪಡೆದು ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಈ ಸಂಬಂಧ ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಯಾವುದಕ್ಕೆ ಎಷ್ಟು ಟಿಕೆಟ್?

ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳ ಮಾರಾಟ ಆರಂಭವಾಗಿದೆ. ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ನಿಗದಿ ಮಾಡಲಾಗಿದೆ.  ಇನ್ನು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ  ಟಿಕೆಟ್ 3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ 1500 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್​​ಲೈನ್​  ಮೂಲಕ ಸಹ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ದಸರಾ ಗೋಲ್ಡ್‌ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in/ ಮೂಲಕ ಖರೀದಿಸಬಹುದಾಗಿದೆ.

https://mysoredasara.gov.in/ ಅಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3ರಿಂದಲೇ ಆನ್​​ ಲೈನ್​​ ನಲ್ಲಿ ಖರೀದಿಗೆ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೋಲ್ಡ್​ ಕಾರ್ಡ್​ ಖರೀದಿಸಿರುವವರೆಗೆ(ಒಂದಕ್ಕೆ 6500) ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ(ವಿಶೇಷ ದರ್ಶನಕ್ಕೆ), ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ. ಡ್ರೋನ್ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಆನ್​​ಲೈನ್​​ನಲ್ಲಿ ಟಿಕೆಟ್​ ಖರೀದಿ ವಿಧಾನ ಇಲ್ಲಿದೆ

  • ಮೈಸೂರು ದಸರಾ ಅಧಿಕೃತ ವೆಬ್​ಸೈಟ್ https://www.mysoredasara.gov.in ಗೆ ಭೇಟಿ ನೀಡಿ.
  • ಹೋಮ್​ ಪೇಜ್​ನಲ್ಲಿ ಟಿಕೆಟ್​ಗಳು ಮತ್ತು ಲೈವ್​ ಅಂತ ಕಾಣುತ್ತದೆ.
  • ಅದರ ಮೇಲೆ ಕ್ಲಿಕ್​ ಮಾಡಿದ ನಂತರ ಆಯ್ಕೆ ಕೇಳುತ್ತದೆ
  • ಟಿಕೆಟ್​ ಬುಕ್ಕಿಂಗ್​ ಮೇಲೆ ಕ್ಲಿಕ್​ ಮಾಡಿ.
  • ನಂತರ ಟಿಕೆಟ್​ ಬುಕ್ಕಿಂಗ್​ ಪೇಜ್​ ತೆರಯುತ್ತದೆ
  • ಕೆಳಗಡೆ ಬಂದರೆ ಮೈಸೂರು ದಸರಾ ಗೋಲ್ಡ್​ ಕಾರ್ಡ್​, ಪಂಜಿನ ಕವಾಯಿತು ಬನ್ನಿಮಂಟಪ, ದಸರಾ 2024 ಜಂಬೂ ಸವಾರಿ ದರ ಸಮೇತ ಆಯ್ಕೆ ತೋರಿಸಲಾಗಿರುತ್ತದೆ.
  • ಬಳಿಕ, ಟಿಕೆಟ್​ ಖರೀದಿ ಎಂಬುವುದರ ಮೇಲೆ ಕ್ಲಿಕ್​ ಮಾಡಿ, ಮತ್ತೊಂದು ಪೇಜ್​ ತೆರೆಯುತ್ತದೆ. ಅಲ್ಲಿ ಎಷ್ಟು ಟಿಕೆಟ್​ ಅಂತ ಕ್ಲಿಕ್​ ಮಾಡಿ. ನಂತರ buy tickets ಮೇಲೆ ಕ್ಲಿಕ್​ ಮಾಡಿ. ನಿಮ್ಮ ಸಂಪೂರ್ಣ ಮಾಹಿತಿ ದಾಖಲಿಸಿ, ಹಣ ಪಾವತಿಸಿ ಟಿಕೆಟ್​ ಪಡೆದುಕೊಳ್ಳಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ