AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಂಸ್ಕೃತಿಕ ನಗರಿಯಲ್ಲಿ ಕಣ್ಮರೆಯಾಗಲಿದೆ ಗುಲ್ ಮೋಹರ್!

ಮೈಸೂರು: ನಗರದ ರಸ್ತೆಗಳ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳು‌ ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿದೆ. ಇನ್ನು ಮುಂದೆ ಪಾಲಿಕೆ ಗುಲ್ ಮೋಹರ್ ಗಿಡಗಳನ್ನ ನೆಡಬಾರದು ಎಂದು ನಿರ್ಧಾರಕ್ಕೆ ಬಂದಿದೆ. ಅಷ್ಟೆ ಅಲ್ಲದೆ ದುರ್ಬಲವಾಗಿರುವ ಮರಗಳನ್ನು ಕೆಡವಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಇಡೀ ಮೈಸೂರು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ವಿಸುತ್ತಿದಿದ್ದು ಅಂದ್ರೆ ಅದು ಗುಲ್ ಮೋಹರ್ ಮರದಲ್ಲಿ ಅರಳುತ್ತಿದ್ದ ಹೂಗಳೆ. ಆದ್ರೆ ದುರ್ಬಲವಾಗಿರುವ ಈ ಮರಗಳು ಗಾಳಿಗೆ ಬೀಳುತ್ತಿದ್ದು, ಇದರಿಂದ ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ಅಷ್ಟೆ ಅಲ್ಲದೆ […]

ಸಾಂಸ್ಕೃತಿಕ ನಗರಿಯಲ್ಲಿ ಕಣ್ಮರೆಯಾಗಲಿದೆ ಗುಲ್ ಮೋಹರ್!
ಸಾಧು ಶ್ರೀನಾಥ್​
| Edited By: |

Updated on:May 25, 2020 | 8:59 AM

Share

ಮೈಸೂರು: ನಗರದ ರಸ್ತೆಗಳ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳು‌ ಮುಂದಿನ ದಿನಗಳಲ್ಲಿ ಕಣ್ಮರೆಯಾಗಲಿದೆ. ಇನ್ನು ಮುಂದೆ ಪಾಲಿಕೆ ಗುಲ್ ಮೋಹರ್ ಗಿಡಗಳನ್ನ ನೆಡಬಾರದು ಎಂದು ನಿರ್ಧಾರಕ್ಕೆ ಬಂದಿದೆ. ಅಷ್ಟೆ ಅಲ್ಲದೆ ದುರ್ಬಲವಾಗಿರುವ ಮರಗಳನ್ನು ಕೆಡವಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಇಡೀ ಮೈಸೂರು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ವಿಸುತ್ತಿದಿದ್ದು ಅಂದ್ರೆ ಅದು ಗುಲ್ ಮೋಹರ್ ಮರದಲ್ಲಿ ಅರಳುತ್ತಿದ್ದ ಹೂಗಳೆ. ಆದ್ರೆ ದುರ್ಬಲವಾಗಿರುವ ಈ ಮರಗಳು ಗಾಳಿಗೆ ಬೀಳುತ್ತಿದ್ದು, ಇದರಿಂದ ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ಅಷ್ಟೆ ಅಲ್ಲದೆ ಪ್ರಾಣ ಹಾನಿಗೂ ಕಾರಣವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ನಗರ ವ್ಯಾಪ್ತಿಯಲ್ಲಿ ಇರುವ ದುರ್ಬಲ ಗುಲ್ ಮೋಹರ್ ಮರಗಳನ್ನು ತೆರವು ಮಾಡಲು ನಿರ್ಧಾರ ಮಾಡಲಾಗಿದೆ.‌

ಅಷ್ಟೆ ಅಲ್ಲದೆ ಮರಗಳನ್ನು ತೆರವು ಮಾಡಿದ ಸ್ಥಳಕ್ಕೆ ಮತ್ತೆ ಬೇರೆ ಗಿಡಗಳನ್ನು ನೆಡಲು ಪಾಲಿಕೆ ತೀರ್ಮಾನಿಸಿದೆ. ಆದ್ರೆ ಈ‌ ಮರಗಳು‌ ದುರ್ಬಲವಾಗಲು ಪಾಲಿಕೆ ತೆಗೆದುಕೊಂಡ ಅವೈಜ್ಞಾನಿಕ ನೀತಿಯೆ ಕಾರಣ ಎಂಬುದು ಕೆಲವರ ಆರೋಪವಾಗಿದೆ. ನಗರ ಸಂಪೂರ್ಣ ಕಾಂಕ್ರಿಟ್ ಹಾಗೂ ಡಾಂಬರೀಕರಣವಾಗಿದೆ. ಮರದ ಬುಡದ ವರೆಗು ಡಾಂಬರಾಕಿದ್ದರಿಂದ ನೀರು ಇಂಗಲು ಸಾಧ್ಯವಾಗದೆ ಮರ ದುರ್ಬಲವಾಗುತ್ತಿದೆ. ಮರ ಕೆಡುವ ಬದಲು ಮರದ ಬುಡುವನ್ನು ಡಾಂಬರಿಂದ ದೂರ ಮಾಡಿದ್ರೆ ಸಾಕು ಎನ್ನುವ ಮಾತುಗಳು ಸಹ‌ ಕೇಳಿ ಬರುತ್ತಿದೆ.

ಗುಲ್‌ ಮೋಹರ್ ಮರದ ಹಿನ್ನೆಲೆ: ಬೇಸಿಗೆ ಸಂದರ್ಭದಲ್ಲಿ ಹೂ ಬಿಡುವ ಮರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅದರಲ್ಲು ಮೈಸೂರಿನ ಪ್ರಮುಖ ರಸ್ತೆಯ ಬದಿಯಲ್ಲಿ ಈ ಮರಗಳನ್ನು ನೆಡಲಾಗಿದ್ದು ಪ್ರವಾಸಿಗರಿಗೆ ಆಕರ್ಷಣೆಯಾಗಿ ಕಾಣುತ್ತಿದೆ. ಈ ಮರ ಪೂರ್ವ ಆಫ್ರಿಕಾದ ಮಡಗಾಸ್ಕರ್ ದ್ವೀಪ ರಾಷ್ಟ್ರದಿಂದ ಬಂತೆದ್ದು ಹೇಳಲಾಗುತ್ತೆ. ಭಾರತಕ್ಕೆ 125 ವರ್ಷಗಳ ಮುಂಚೆ ಬಂತೆದ್ದು ಹೇಳಲಾಗುತ್ತೆ.‌ ಇದನ್ನ ಹೆಚ್ಚಾಗಿ ರಸ್ತೆ ಬದಿಯಲ್ಲಿ ನೆಡಲಾಗುತ್ತೆ.

ಗುಲ್ ಮೋಹರ್​ಗೆ ಪರ್ಯಾಯ ಏನು? ಬೇಸಿಗೆ ಸಂದರ್ಭದಲ್ಲಿ ನಗರದ ಸೌಂದರ್ಯ ಹೆಚ್ಚಿಸುತ್ತಿದ್ದ ಗುಲ್ ಮೋಹರ್ ಮರಗಳನ್ನು ತೆಗೆದರೆ ಸೌಂದರ್ಯ ಹಾಳಾಗುತ್ತೆ. ಕಾಲಕ್ರಮೇಣ ಗುಲ್ ಮೋರ್ ಮರಗಳು ಕಡಿಮೆಯಾದ್ರೆ ಬದಲಿ ಏನು ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಇದರಿಂದ ಗುಲ್ ಮೋಹರ್ ಬದಲಿಗೆ ಹೂ ಬಿಡುವಂತ ಸಸಿಗಳನ್ನೆ ನೆಡಲು ಪಾಲಿಕೆ ತೀರ್ಮಾನ ಮಾಡಿದೆ.

Published On - 8:30 am, Mon, 25 May 20

ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ
ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ