AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಲ್ ಕಾನ್‌ಕಾರ್ಡ್ ಶಾಲೆ ಮಾರಾಮಾರಿ ವಿವಾದ: ಶಾಲೆ ಪ್ರಿನ್ಸಿಪಾಲ್, ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು

16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ವಿಚಾರಕ್ಕೆ ರಾಯಲ್ ಕಾನ್‌ಕಾರ್ಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ನಡುವೆ ಮಾರಾಮಾರಿಯಾಗಿತ್ತು. ಸದ್ಯ ಶಾಲೆ ವಿರುದ್ಧ ಕೇಸ್ ದಾಖಲಾಗಿದೆ.

ರಾಯಲ್ ಕಾನ್‌ಕಾರ್ಡ್ ಶಾಲೆ ಮಾರಾಮಾರಿ ವಿವಾದ: ಶಾಲೆ ಪ್ರಿನ್ಸಿಪಾಲ್, ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು
ರಾಯಲ್ ಕಾನ್‌ಕಾರ್ಡ್ ಶಾಲೆ
TV9 Web
| Updated By: ಆಯೇಷಾ ಬಾನು|

Updated on: Mar 11, 2023 | 7:51 AM

Share

ಮೈಸೂರು: ರಾಯಲ್ ಕಾನ್‌ಕಾರ್ಡ್ ಇಂಟರ್‌ನ್ಯಾಷನಲ್ ಶಾಲೆ ವಿವಾದಕ್ಕೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ವಿರುದ್ದ ಜೆಜೆ ಆ್ಯಕ್ಟ್ (Juvenile Justice) ಅಡಿ ಪ್ರಕರಣ ದಾಖಲಾಗಿದೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿನ್ಸಿಪಾಲ್ ಖುಷಿ, ಮ್ಯಾನೇಜರ್ ಹರೀಶ್, ಶಾಲಾ ನಿರ್ದೇಶಕ ರಾಕೇಶ್ ರಾಜೇ ಅರಸ್ ವಿರುದ್ದ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಮಾರ್ಚ್ 6ರಂದು ನಡೆದ ಗಲಾಟೆಗೆ ಸಂಬಂಧಿಸಿ ಚೆಲುವೇಗೌಡ, ಸಿದ್ದೇಗೌಡ ಹಾಗೂ ಮೂವರು ವಿದ್ಯಾರ್ಥಿಗಳು ದೂರು ನೀಡಿದ್ದರು.

ಹಿನ್ನೆಲೆ

ಮೈಸೂರಿನ ಬೋಗಾದಿ ಎರಡನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಅಂತರಾಷ್ಟ್ರೀಯ ಶಾಲೆಯಲ್ಲಿ ಮಾರ್ಚ್ 6ರಂದು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ನಡುವೆ ಗಲಾಟೆಯಾಗಿತ್ತು. ಶಾಲೆಯ ಆಡಳಿತ ಮಂಡಳಿ ಶಾಲೆಯ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಈ ವಿಚಾರ ತಿಳಿದು ಪೋಷಕರು ಶಾಲೆಯ ಆಡಳಿತ ಮಂಡಳಿ ಜೊತೆ ಜಗಳವಾಡಿದ್ದರು. ಈ ವೇಳೆ ಶಾಲೆಯ ಮ್ಯಾನೇಜರ್ ಹರೀಶ್ ಅವರಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಮತ್ತೊಂದು ಕಡೆ ಮಕ್ಕಳಿಗೆ ಪರೀಕ್ಷೆ ಕೊಡದೆ ಇರುವುದನ್ನು ಪೋಷಕ ಸಿದ್ದೇಗೌಡ ಪ್ರಶ್ನಿಸಿದ್ದರು. ಇದಕ್ಕೆ ಕೆಂಡಾಮಂಡಲರಾದ ಶಾಲೆಯ ಪ್ರಾಂಶುಪಾಲರಾದ ಖುಷಿ ಸಿದ್ದೇಗೌಡ ಕೊರಳಪಟ್ಟಿ ಹಿಡಿದು ಎಳೆದಾಡಿದ್ದರು.

ಇದನ್ನೂ ಓದಿ: ಶುಲ್ಕ ಕಟ್ಟಿಲ್ಲವೆಂದು ಪರೀಕ್ಷೆಗೆ ಕೂರಿಸಿಲ್ಲ; ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಪೋಷಕರು-ಶಿಕ್ಷಕರ ಮಾರಾಮಾರಿ 

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸರಸ್ವತಿ ಪುರಂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಶಾಲಾ ಆಡಳಿತ ಮಂಡಳಿ ಹಾಗೂ 16 ವಿದ್ಯಾರ್ಥಿಗಳ ಪೋಷಕರ ನಡುವೆ ಶಾಲಾ ಶುಲ್ಕದ ವಿಚಾರವಾಗಿ ಗೊಂದಲ ಉಂಟಾಗಿದೆ. ಶಾಲಾ ಆಡಳಿಯ ಪ್ರಕಾರ 1 ಲಕ್ಷದ 10 ಸಾವಿರ ಕಟ್ಟಬೇಕು. ಆದರೆ ಪೋಷಕರ ಪ್ರಕಾರ 82 ಸಾವಿರ ಫೀಸು ಕಟ್ಟಬೇಕು. ಇದೇ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ