ವಿವಿಧ ದೇಶಗಳಿಗೂ ತಲೆನೋವಾಗಿದ್ದ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಆರೋಪಿಗಳ ಬಂಧನ

ವಿವಿಧ ದೇಶಗಳಿಗೂ ತಲೆನೋವಾಗಿದ್ದ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ

ಆರೋಪಿಗಳನ್ನು ಮತ್ತಷ್ಟು ತನಿಖೆಗೆ ಒಳಪಡಿಸಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

TV9kannada Web Team

| Edited By: guruganesh bhat

Aug 02, 2021 | 3:55 PM

ಮೈಸೂರು: ಅಂತಾರಾಷ್ಟ್ರೀಯ ಕರೆಗಳು ಸ್ಥಳೀಯ ಕರೆಗಳಾಗಿ ಬದಲಿಸಿ ಅಕ್ರಮ ಎಸಗುತ್ತಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ಆಶ್ರಫ್ ಮತ್ತು ಶೆಮಿಮ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 500ಕ್ಕೂ ಹೆಚ್ಚು ಸಿಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಮ್ ಬಾಕ್ಸ್, ರೂಟರ್ ಮೂಲಕ ಕರೆಗಳ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬಂಧಿತರು ಪರಿವರ್ತಿಸುತ್ತಿದ್ದರು.

ಆರೋಪಿಗಳ ಕೃತ್ಯದಿಂದ ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳಿಗೆ ಕೋಟ್ಯಂತರ ನಷ್ಟ ಸಂಭವಿಸುತ್ತಿತ್ತು. ಜತೆಗೆ ಈ ಆರೋಪಿಗಳು ತಮ್ಮ ಕೃತ್ಯದಿಂದ ವಿವಿಧ ದೇಶಗಳಿಗೂ ಸಹ ತಲೆನೋವಾಗಿ ಪರಿಗಣಿಸಿದ್ದರು. ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮತ್ತಷ್ಟು ತನಿಖೆಗೆ ಒಳಪಡಿಸಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಇದನ್ನೂ ಓದಿ: 

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ: ಸಾ.ರಾ. ಮಹೇಶ್

ನಾ ಕಂಡ ಯಡಿಯೂರಪ್ಪ: ವರದಿಗಾರ ರಾಮ್ ಮೈಸೂರು ವಿಶೇಷ ಬರಹ

(Mysuru Police arrest 2 people accused who were converting international calls into local calls)

Follow us on

Related Stories

Most Read Stories

Click on your DTH Provider to Add TV9 Kannada