ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ: ಸಿಎಂ ಬೊಮ್ಮಾಯಿ ಬಗ್ಗೆ ತಮಾಷೆ ಮಾಡಿ ಮಾತನಾಡಿದ ಸುತ್ತೂರು ಶ್ರೀ
ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ, ಬಸವರಾಜ ಬೊಮ್ಮಾಯಿ ಅವರಿಗೆ ಈ ಮುಖ್ಯಮಂತ್ರಿ ಪಟ್ಟ ಬಂದಿದೆ. ಹಿಂದಿನ ದಿನ ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ರೀತಿಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಂದಿದೆ ಎಂದರು.
ಮೈಸೂರು: ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು ಸುತ್ತೂರು ಶಾಖಾ ಮಠದಲ್ಲಿ(Suttur Mutt) ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ್ದಾರೆ. ಈ ವೇಳೆ ನಡೆದ ಸುತ್ತೂರು ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬಗ್ಗೆ ತಮಾಷೆ ಮಾಡಿ ಮಾತನಾಡಿದ್ದಾರೆ. ಬಯಸಿ ಬಂದಿದ್ದು ಅಂಗ ಭೋಗ, ಬಯಸದೆ ಬಂದಿದ್ದು ಲಿಂಗ ಭೋಗ, ಬಸವರಾಜ ಬೊಮ್ಮಾಯಿ ಅವರಿಗೆ ಈ ಮುಖ್ಯಮಂತ್ರಿ ಪಟ್ಟ ಬಂದಿದೆ. ಹಿಂದಿನ ದಿನ ಅವರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಈ ರೀತಿಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಂದಿದೆ ಎಂದರು.
ಇನ್ನು ಇದೇ ವೇಳೆ ವೇದಿಕೆಯಲ್ಲಿ ಕೂರಲು ಅವಕಾಶ ಇದ್ದರು ವೇದಿಕೆಗೆ ಬಾರದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜನರೊಂದಿಗೆ ಕೂತಿದ್ದರು. ಮೊದಲಿಗೆ ಬಸವೇಶ್ವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ಸುತ್ತೂರು ಮಠದ ಶ್ರೀಗಳು ನೀಡಿದ್ದು ಭಾವಚಿತ್ರಕ್ಕೆ ಪ್ರಧಾನಿ ಮೋದಿ ನಮಸ್ಕಾರ ಮಾಡಿದ್ರು. ಬಸವೇಶ್ವರ ಭಾವಚಿತ್ರದ ಜೊತೆಗೆ ಪ್ರಧಾನಿ ಮೋದಿ ತಮ್ಮ ತಾಯಿ ಜೊತೆ ಇರುವ ಭಾವಚಿತ್ರ ಉಡುಗೊರೆ ನೀಡಿದ್ರು. ಮರದ ತುಂಡುಗಳ ಮೂಲಕ ನಿರ್ಮಾಣವಾಗಿರುವ ಸುಂದರ ಭಾವಚಿತ್ರ ನೋಡುತ್ತಿದ್ದಂತೆ ಖುಷಿ ವ್ಯಕ್ತಪಡಿಸಿ ಸುತ್ತೂರು ಶ್ರೀಗಳಿಗೆ ಮೋದಿ ಕೈ ಮುಗಿದ್ರು. ಇದನ್ನೂ ಓದಿ: ಹಿಮಾಚಲ ಪ್ರದೇಶ: ಕೇಬಲ್ ಕಾರಿನಲ್ಲಿ ಮೂರು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸಿಲುಕಿದ್ದ ಎಲ್ಲ ಪ್ರಯಾಣಿಕರ ರಕ್ಷಣೆ
ಇನ್ನು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸುತ್ತೂರು ಶ್ರೀಗಳು ಹಾಡಿ ಹೊಗಳಿದ್ದಾರೆ. ಬಸವಣ್ಣನವರ ವಚನ ಮೂಲಕ ಭಾಷಣ ಆರಂಭಿಸಿದ ಸುತ್ತೂರುಶ್ರೀ, ಪ್ರಾಚೀನ ಸಂಸ್ಕೃತಿಗೆ ಗೌರವ ನೀಡಿ ಸಂಸ್ಕೃತ ಪಾಠ ಶಾಲೆ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಪತಂಜಲಿ ಯೋಗ ಸೂತ್ರದ ಬಗ್ಗೆ ಸಿದ್ದೇಶ್ವರಶ್ರೀ ಪುಸ್ತಕ ಬರೆದಿದ್ದಾರೆ. ಸಿದ್ದೇಶ್ವರಶ್ರೀಗಳ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಅದೇ ಪುಸ್ತಕವನ್ನು ಇಂದು ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ. ಸುತ್ತೂರುಮಠಕ್ಕೆ ಮೋದಿಯವರು ಈವರೆಗೆ 3 ಬಾರಿ ಭೇಟಿ ನೀಡಿದ್ದಾರೆ. ಗುಜರಾತ್ ಸಿಎಂ ಆಗಿದ್ದ ಒಮ್ಮೆ, ಪ್ರಧಾನಿಯಾದ ಬಳಿಕ 2 ಬಾರಿ ಭೇಟಿ ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ ಮೋದಿ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ರಜೆ ಪಡೆಯದೆ ಕೆಲಸ ಮಾಡಿರುವ ವ್ಯಕ್ತಿಯಿದ್ರೆ ಅದು ಮೋದಿ ಮಾತ್ರ. ಮಾನವೀಯತೆ ಬಗ್ಗೆ ವಿಶ್ವಕ್ಕೆ ಸಂದೇಶ ಸಾರಿದವರು ಪ್ರಧಾನಿ ಮೋದಿ. ತಮ್ಮ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಇಡೀ ದಿನ ಬಿಡುವಿಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಮೋದಿ ಮುಖದಲ್ಲಿ ಕಾಂತಿ ಕಡಿಮೆಯಾಗಿಲ್ಲ. ಪ್ರಧಾನಿ ಮೋದಿ ಬಟ್ಟೆಯಲ್ಲಿ ಜೇಬಿದೆ, ತುಂಬಿಸಿಕೊಳ್ಳುವ ಮನಸ್ಸಿಲ್ಲ. ಭಾರತ ಕಂಡ ಅತ್ಯಂತ ಪ್ರಭಾವಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಹೊಗಳಿದ್ದಾರೆ.
ಸಂಸ್ಕೃತ ಪಾಠ ಶಾಲೆ, ವಿದ್ಯಾರ್ಥಿ ನಿಲಯ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು.
ಮೋದಿ ನನ್ನ ತಾಯಿ ನೆನೆಸಿಕೊಂಡರು ಎಂದು ಬಾವುಕರಾದ ಎಸ್ಎ ರಾಮದಾಸ್ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮದಾಸ್ ಗೆ ವೇದಿಕೆಯಲ್ಲೆ ಬೆನ್ನಿಗೆ ಪ್ರೀತಿಯಿಂದ ಗುದ್ದಿ ಮೋದಿ ಮಾತನಾಡಿಸಿದ್ರು. ಈ ಬಗ್ಗೆ ಮಾತನಾಡಿದ ಎಸ್ಎ ರಾಮದಾಸ್, ಬಹಳ ಪ್ರೀತಿಯಿಂದ ಮಾತನಾಡಿಸಿ ಬೆನ್ನಿಗೆ ಪ್ರೀತಿಯಿಂದ ಗುದ್ದಿದ್ರು ಎಂದು ರಾಮದಾಸ್ ಪ್ರತಿಕ್ರಿಯೆ ನೀಡುವಾಗ ಭಾವುಕರಾಗಿದ್ದಾರೆ. ನನ್ನ ತಾಯಿಯನ್ನು ಮೋದಿ ಅವರು ವೇದಿಕೆ ಮೇಲೆ ನೆನಪಿಸಿಕೊಂಡರು. ರಾಮದಾಸ್ ಅವರ ತಾಯಿ ಇದ್ದಾಗ ತಿಂಡಿ ತಂದು ಕೊಡುತ್ತಿದ್ದ. ಈಗ ಅದನ್ನು ಮರೆತಿದ್ದಾನೆ ಎಂದು ಮೋದಿ ಹೇಳಿದ್ರು ಎಂದು ಹೇಳುತ್ತ ರಾಮದಾಸ್ ಗದ್ಗದಿತರಾದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:34 pm, Mon, 20 June 22