ಮೈಸೂರು, (ನವೆಂಬರ್ 10): ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ (nanjangud nanjundeshwara temple)ದರ್ಶನ ಮಾಡಿಕೊಂಡು ಬರುವುದಾಗಿ ಹೇಳಿ ಬಂದಿದ್ದ ಮಹಿಳೆ ವಾಪಸ್ ಮನೆಗೆ ಶವವಾಗಿ ಮರಳಿದ್ದಾರೆ. ಹೌದು…ಮೈಸೂರಿನ (Mysuru)ಸುಭಾಷ್ ನಗರದ ಮಂಜುನಾಥ್ ಎಂಬುವವರ ಪತ್ನಿ ಮಂಜುಳಾ (50) ನವೆಂಬರ್ 07ರಂದು ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಾರೆ. ಆದ್ರೆ, ಅವರು ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿಯ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಅವರ ಮೃತದೇಹ ಪತ್ತೆಯಾಗಿದೆ.
ನವೆಂಬರ್ 7 ರಂದು ಮಂಜುಳಾ ಮನೆಯಿಂದ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ಬಂದಿದ್ದರು. ಆದ್ರೆ, ವಾಪಸ್ ಮನೆ ಬಂದಿರಲಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಿದರು ಇವರ ಸುಳಿವು ಸಿಕ್ಕಿರಲಿಲ್ಲ. ಇಂದು ಕಪಿಲಾ ನದಿಯಲ್ಲಿ ಶವ ಸಿಕ್ಕಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗಿದೆ.
ಇದನ್ನೂ ಓದಿ: ಶತ್ರುಗಳ ಗುಂಡಿಗೂ ಬಗ್ಗದ ಯೋಧ ಯುವತಿಯ ಲವ್ ಬಲೆಗೆ ಬಿದ್ದು ದುರಂತ ಅಂತ್ಯಕಂಡ
ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಹೊಟ್ಟೆ ನೋವು ತಾಳಲಾರದೇ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಮದುವೆಯಾದ ಒಂದೇ ವರ್ಷದಲ್ಲೇ ನವವಿವಾಹಿತೆ ಮಹಿಳೆಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ನಗರೂರಿನಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಕಾಜಲ್ ಕುಮಾರಿ(21) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯವರ ವಿರೋಧದ ನಡುವೆ ಒಂದು ವರ್ಷದ ಹಿಂದೆ ಅಷ್ಟೇ ವಿಶಾಲ್ ಕುಮಾರ್ (23 ಎನ್ನುವಾನನ್ನು ಮದುವೆಯಾಗಿದ್ದಳು. ಆದ್ರೆ, ಇಂದು ಪತಿ ಇಲ್ಲದ ವೇಳೆ ಮನೆಯ ಪ್ಯಾನ್ ಗೆ ವೇಲ್ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಕಾಜಲ್ ಕುಮಾರಿ ಮನೆಯವರ ವಿರೋಧದ ನಡುವೆಯೂ ಒಂದು ವರ್ಷದ ಹಿಂದೆ ಅಷ್ಟೇ ವಿಶಾಲ್ ಕುಮಾರ್ ಎನ್ನುವಾತನ್ನು ವಿವಾಹವಾಗಿದ್ದಳು. ಬಳಿಕ ಬೆಂಗಳೂರಿಗೆ ಬಂದು ನಗರೂರಿನಲ್ಲಿ ಜೀವನ ಸಾಗಿಸತ್ತಿದ್ದರು. ಕಾಜಲ್ ಕುಮಾರಿ ಬೆಂಗಳೂರಿನ ಫಿಲಿಪ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದ್ರೆ, ಕೆಲಸಕ್ಕೆ ಹೋಗುವ ವಿಷಯದಲ್ಲಿ ಗಲಾಟೆ, ಮಾನಸಿಕ ಹಿಂಸೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಪತಿ ವಿಶಾಲ್ ಕುಮಾರ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Fri, 10 November 23