ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಗರಣ ಬಯಲು ಮಾಡಿದರು ಅಂತಾ KSOU ಪ್ರಾಧ್ಯಾಪಕ ಅಮಾನತು, ರಾತ್ರೋರಾತ್ರಿ ಕೊಠಡಿಗೆ ಎರಡೆರಡು ಬೀಗ
ಇತ್ತೀಚಿಗೆ ಕೆ.ಎಸ್.ಓ.ಯು. ನಲ್ಲಿ ಸಾಕಷ್ಟು ಹಗರಣಗಳು ಸದ್ದು ಮಾಡುತ್ತಲೆ ಇವೆ. ಅದರಲ್ಲೂ ಇಲ್ಲಿನ ಹಗರಣಗಳ ಬಗ್ಗೆ ಅಲ್ಲಿನ ಸಿಬ್ಬಂದಿಯೇ ದಾಖಲೆ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದೀಗ ಮಾಧ್ಯಮಗಳ ಮುಂದೆ ಮಾತನಾಡಿದರೂ ಅಂತಹ ಪ್ರಾಧ್ಯಾಪಕರಿಗೆ ಅಮಾನತು ಶಿಕ್ಷೆ ವಿಧಿಸಿದ್ದು, ಅದಷ್ಟೆ ಅಲ್ಲದೆ ಅವರ ಚೇಂಬರ್ ಗೆ ರಾತ್ರೋರಾತ್ರಿ ಎರಡೆರಡು ಬೀಗ ಜಡಿಯಲಾಗಿದೆ!
ಇತ್ತೀಚಿಗೆ ಕೆ.ಎಸ್.ಓ.ಯು. ನಲ್ಲಿ ಸಾಕಷ್ಟು ಹಗರಣಗಳು ಸದ್ದು ಮಾಡುತ್ತಲೆ ಇವೆ. ಅದರಲ್ಲೂ ಇಲ್ಲಿನ ಹಗರಣಗಳ ಬಗ್ಗೆ ಅಲ್ಲಿನ ಸಿಬ್ಬಂದಿಯೇ ದಾಖಲೆ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದೀಗ ಮಾಧ್ಯಮಗಳ ಮುಂದೆ ಮಾತನಾಡಿದರೂ ಅಂತಹ ಪ್ರಾಧ್ಯಾಪಕರಿಗೆ ಅಮಾನತು ಶಿಕ್ಷೆ ವಿಧಿಸಿದ್ದು, ಅದಷ್ಟೆ ಅಲ್ಲದೆ ಅವರ ಚೇಂಬರ್ ಗೆ ರಾತ್ರೋರಾತ್ರಿ ಎರಡೆರಡು ಬೀಗ ಜಡಿಯಲಾಗಿದೆ!
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆ.ಎಸ್.ಓ.ಯು Karnataka State Open University -KSOU) ಈ ವಿವಿನಲ್ಲಿ ಇತ್ತೀಚಿಗೆ ಒಂದಿಲ್ಲೊಂದು ಹಗರಣಗಳಿಂದ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ವಿವಿಯ ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿರುವ ವಿಡಿಯೋ ಸಾಕಷ್ಟು ಸಂಚಲ ಉಂಟುಮಾಡಿತ್ತು. ಈ ವೇಳೆ ವಿವಿಯಲ್ಲಿಯೇ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರಾಗಿರುವ ಜಗದೀಶ್ ಬಾಬು ಮಾಧ್ಯಮಗಳ ಮುಂದೆ ವಿವಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದರು.
ಇದೀಗಾ ‘ಅವರು ದಾಖಲೆ ಬಿಡುಗಡೆ ಮಾಡಿದರು -ವಿವಿ ವಿರುದ್ಧ ಮಾತನಾಡಿದರು’ ಅನ್ನೋ ಕಾರಣಕ್ಕೆ ನೋಟಿಸ್ ನೀಡಿ ಅಮಾನತು (Suspend) ಮಾಡಲಾಗಿದೆ. ಅದಷ್ಟೆ ಅಲ್ಲದೆ ಅವರ ಚೇಂಬರ್ ಗೂ ರಾತ್ರೋರಾತ್ರಿ ಮತ್ತೊಂದು ಬೀಗ ಹಾಕಲಾಗಿದೆ. ಈ ಮೂಲಕ ನಡೆಯುತ್ತಿರುವ ಅಕ್ರಮದ ಬಗ್ಗೆ ಮಾಧ್ಯಗಳಿಗೆ ಮಾತನಾಡಿದ್ರು ಅನ್ನೋ ಕಾರಣಕ್ಕೆ ಇದೀಗ ವಿವಿಯಿಂದ ಅಮಾನತು ಶಿಕ್ಷೆ ನೀಡಲಾಗಿದೆ!
ಇನ್ನು ಮತ್ತೊಂದು ಕಡೆ ಜಗದೀಶ್ ಬಾಬು ಅವರು ಪ್ರತಿದಿನ ವಿವಿಯ ತಮ್ಮ ಕೊಠಡಿ ಬಳಿಗೆ ಬಂದು ಹೋಗುತ್ತಿದ್ದಾರೆ. ಮತ್ತೊಬ್ಬರಿಗೆ ವಿಭಾಗದ ಮುಖ್ಯಸ್ಥ ಸ್ಥಾನ ನೀಡಿ ತೆರವಾಗಬೇಕು ಎಂದು ಕೂಡ ನೋಟಿಸ್ ನೀಡಲಾಗಿದೆ. ಮತ್ತೊಬ್ಬರಿಗೆ ಚಾರ್ಜ್ ಕೊಡಲು ನಾನು ತಯಾರಿದ್ದೇನೆ, ಅದನ್ನು ಸ್ವೀಕಾರ ಮಾಡಲು ಯಾರೂ ತಯಾರಿಲ್ಲವಂತೆ!
Also Read: Mass Copy in KSOU Exams: ಮೊಬೈಲ್, ಪುಸ್ತಕ ಇಟ್ಟುಕೊಂಡು ‘ಮುಕ್ತ’ ಪರೀಕ್ಷೆ, ನೀವೂ ನೋಡಿ
ಇನ್ನು ಇದಷ್ಟೆ ಅಲ್ಲದೆ ನಾನು ಮಾಡಿದ ಆರೋಪಗಳಿಗೆ ದಾಖಲೆ ಇದೆ. ನಾನು ಕಾಯಂ ನೌಕರರ ಸಂಘದ ಅಧ್ಯಕನಾಗಿದ್ದೇನೆ. ಒಬ್ಬ ಅಧ್ಯಕ್ಷನಾಗಿ ನಾನು ಮಾತಮಾಡಿದ್ದೇನೆ. ನಾನು ವಿವಿ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ನನ್ನ ಮೇಲೆ ಕ್ರಮ ತೆಗೆದುಕೊಂಡವರು ಪೇಪರ್ ಮಾರಿದವರ ಮೇಲೆ ಏಕೆ ಕ್ರಮ ಇಲ್ಲ ಅಂತ ಪ್ರಶ್ನೆ ಮಾಡಿದ್ದಾರೆ KSOU ಪ್ರಾಧ್ಯಾಪಕ ಜಗದೀಶ್ ಬಾಬು.
ಒಟ್ಟಾರೆ, ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದರು ಅನ್ನೋ ಕಾರಣಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಆದ್ರೆ ಇಷ್ಟೆಲ್ಲ ಅಕ್ರಮದ ಬಗ್ಗೆ ಧ್ವನಿ ಎತ್ತಿದರೂ ಅಕ್ರಮವೆಸಗಿದವರ ಮೇಲೆ ಯಾಕೆ ಕ್ರಮ ಇಲ್ಲ ಅನ್ನೋದು ಸಹಜವಾಗಿಯೆ ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ