ಮೈಸೂರಿನಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ; ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್ ದೃಢ

ಜಿಲ್ಲಾಡಳಿತ ಸೋಂಕಿತೆಯ ಸಂಪರ್ಕಿತರನ್ನ ಪತ್ತೆ ಹಚ್ಚುತ್ತಿದೆ. ಸೋಂಕಿತೆಯನ್ನು ಪ್ರತ್ಯೇಕವಾಗಿರಿಸಿ ಜಿಲ್ಲಾಡಳಿತ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆ ಆಗಿದೆ.

ಮೈಸೂರಿನಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ; ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್ ದೃಢ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Dec 28, 2021 | 4:29 PM

ಮೈಸೂರು: ನಗರದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ ಆಗಿದೆ. ಮೈಸೂರು ವಿಶ್ವವಿದ್ಯಾಲಯದ ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್ ದೃಢಪಟ್ಟಿದೆ. ತಾಂಜೇನಿಯಾ ದೇಶದಿಂದ ಬಂದಿದ್ದ ವಿದ್ಯಾರ್ಥಿನಿಗೆ ಸೋಂಕು ಕಂಡುಬಂದಿದೆ. ಡಿಸೆಂಬರ್ 20 ರಂದು ಆಗಮಿಸಿದ್ದ ಸೋಂಕಿತ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗೂ ಕೊವಿಡ್19 ಒಮಿಕ್ರಾನ್ ಪ್ರಕರಣ ಎಂದು ದೃಢವಾಗಿದೆ.

ಜಿಲ್ಲಾಡಳಿತ ಸೋಂಕಿತೆಯ ಸಂಪರ್ಕಿತರನ್ನ ಪತ್ತೆ ಹಚ್ಚುತ್ತಿದೆ. ಸೋಂಕಿತೆಯನ್ನು ಪ್ರತ್ಯೇಕವಾಗಿರಿಸಿ ಜಿಲ್ಲಾಡಳಿತ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆ ಆಗಿದೆ.

ಹೋಟೆಲ್‌ಗಳ ಕೊಠಡಿಯಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇರುವುದಿಲ್ಲ ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ. ಹಾಗೂ ಹೋಟೆಲ್‌ಗಳಲ್ಲಿ ಶೇಕಡಾ 50 ರಷ್ಟು ಗ್ರಾಹಕರಿಗೆ ಅವಕಾಶ ಎಂದು ತಿಳಿಸಲಾಗಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ಆಹಾರ, ಪಾನೀಯಗಳನ್ನ ಬಡಿಸುವ ಸ್ಥಳಕ್ಕೆ ಮಾತ್ರ ಈ ನಿರ್ಬಂಧ ಇರಲಿದೆ. ಹೋಟೆಲ್‌ಗಳ ಕೊಠಡಿಯಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇರುವುದಿಲ್ಲ. ವಾಸ್ತವ್ಯಕ್ಕೆ ನಿರ್ಬಂಧ ಇರಲ್ಲವೆಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ ಒಮಿಕ್ರಾನ್ ಸೈಲೆಂಟಾಗಿಯೇ ಆರ್ಭಟ ಶುರು ಮಾಡ್ತಿದೆ. ದಿನಕ್ಕೆ ಒಂದೋ, ಎರಡೋ ಬರ್ತಿದ್ದ ಕೇಸ್‌ಗಳು ಈಗ ಹತ್ತು, ಹನ್ನೆರಡಾಗಿದೆ. ನೆರೆ ರಾಜ್ಯದಲ್ಲೂ ಒಮಿಕ್ರಾನ್ ಹಾವಳಿ ಮಿತಿ ಮೀರಿದೆ. ಹೀಗಾಗಿ, ರಾಜ್ಯ ಸರ್ಕಾರ ಹೊಸ ರೂಪಾಂತರಿಗೆ ಆರಂಭದಲ್ಲೇ ಅಂತ್ಯವಾಡಲು ಖಡಕ್ ರೂಲ್ಸ್‌ಗಳನ್ನ ಜಾರಿ ಮಾಡ್ತಿದೆ. ಇಂದಿನಿಂದ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ..

ಹೇಗಿರಲಿದೆ ಕರ್ಫ್ಯೂ? ಇಂದು ರಾತ್ರಿ 10 ಗಂಟೆಯೊಳಗೆ ಎಲ್ಲವೂ ಕ್ಲೋಸ್ ಆಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್‌ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿವೆ. 10 ಗಂಟೆ ಒಳಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಮಾಲ್, ಥಿಯೇಟರ್, ಶಾಪ್, ಕಚೇರಿಗಳು ಲಾಕ್‌ ಆಗಬೇಕು. ಬಟ್ಟೆ ಅಂಗಡಿ, ಬೀದಿ ಬದಿ ವ್ಯಾಪಾರ ಕೂಡ ಕ್ಲೋಸ್ ಆಗಲಿದೆ. ಒಲಾ, ಉಬರ್, ಆಟೋ, ಟ್ಯಾಕ್ಸಿಗಳ ಓಡಾಟ ಬಂದ್ ಆಗಲಿದೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವಂತಿಲ್ಲ. ಇನ್ನು ರಾತ್ರಿ 10 ರಿಂದ ಮೆಟ್ರೋ ಟ್ರೇನ್ ಸಂಚಾರದಲ್ಲಿ ಕಡಿತಗೊಳಿಸಲಾಗಿದೆ.

ಜನರ ಆರೋಗ್ಯದ ದೃಷ್ಟಿಯಿಂದ ನೈಟ್ಕರ್ಫ್ಯೂ ಎಂದ ಸಿಎಂ ವ್ಯಾಪಾರಕ್ಕೆ ತೊಂದ್ರೆಯಾಗುತ್ತೆ ನೈಟ್‌ ಕರ್ಫ್ಯೂ ಸಡಿಲಿಕೆ ಮಾಡಿ ಅನ್ನೋ ಒತ್ತಾಯಕ್ಕೆ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬಿಲ್ ಕುಲ್ ಆಗಲ್ಲ ಎಂದಿದ್ದಾರೆ. ವ್ಯಾಪಾರ, ವಹಿವಾಟು ನಡೀಬೇಕು. ಜನರಿಗೆ ತೊಂದ್ರೆಯಾಗುತ್ತೆ ಅನ್ನೋ ಕಾಳಜಿ ಇದೆ. ಆದ್ರೆ, ಜನರ ಆರೋಗ್ಯದ ದೃಷ್ಟಿಯಿಂದಲೇ ನೈಟ್‌ ಕರ್ಫ್ಯೂ ಜಾರಿ ಮಾಡಿದ್ದೇವೆ ಅಂತಾ ಸಿಎಂ ಖಡಕ್ ಸಂದೇಶ ನೀಡಿದ್ರು.

ಇದನ್ನೂ ಓದಿ: Bengaluru: ಮಂಗಳವಾರ ಫ್ಲೈಓವರ್​ಗಳನ್ನು ಮುಚ್ಚುವುದಿಲ್ಲ; ಬುಧವಾರದಿಂದ ಫ್ಲೈಓವರ್ ಕ್ಲೋಸ್ ಆಗಿರಲಿದೆ- ಕಮಲ್ ಪಂತ್

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಧನದ ಚೆಕ್ ವಿತರಿಸಿದ ಶಾಸಕ ಆರ್ ಮಂಜುನಾಥ್

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?