AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬೊಮ್ಮಾಯಿಗೆ ಮಂಡಿ‌ ನೋವು: ಪ್ರಧಾನಿಯನ್ನೇ ಬದಲಾಯಿಸದ ನಾವು ಸಿಎಂ ಬದಲಾಯಿಸ್ತೇವಾ? -ಸಂಸದ ಪ್ರತಾಪ್‌

ಪ್ರಧಾನಿ ಆಗಿದ್ದಾಗ ವಾಜಪೇಯಿರಿಗೆ ಕೂಡ ಎರಡು ಮಂಡಿ‌ ನೋವಿತ್ತು. ಪ್ರಧಾನಿಯನ್ನೇ ಬದಲಿಸಿರಲಿಲ್ಲ. ಇನ್ನೂ ಸಿಎಂ ಬದಲಾಯಿಸುತ್ತೇವಾ? ಸಿಎಂ ಬದಲಾವಣೆ ಕೇವಲ ಊಹಾಪೋಹ ಎಂದು ಮೈಸೂರು ನಗರದಲ್ಲಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿಗೆ ಮಂಡಿ‌ ನೋವು: ಪ್ರಧಾನಿಯನ್ನೇ ಬದಲಾಯಿಸದ ನಾವು ಸಿಎಂ ಬದಲಾಯಿಸ್ತೇವಾ? -ಸಂಸದ ಪ್ರತಾಪ್‌
ಪ್ರತಾಪ್ ಸಿಂಹ
Follow us
TV9 Web
| Updated By: preethi shettigar

Updated on:Dec 29, 2021 | 3:07 PM

ಮೈಸೂರು: ಸಿಎಂ ಸ್ಥಾನದಿಂದ ಬೊಮ್ಮಾಯಿರನ್ನು ಬದಲಾವಣೆ ಮಾಡುವ ವಿಚಾರವಾಗಿ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸಭೆ ಕಟ್ಟಡದಲ್ಲಿ ವಾಸ್ತುದೋಷವಿದೆ. 223 ಶಾಸಕರಿಗೂ ನಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಹೀಗಾಗಿ ಇಂಥ ಮಾತುಗಳು ಕೇಳಿ ಬರುತ್ತವೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಮಂಡಿ ನೋವು ಇದೆ ಎಂದು ಸಿಎಂ ಬದಲಾಯಿಸಲು ಸಾಧ್ಯವಿಲ್ಲ. ಮಂಡಿ ನೋವಿಗೆ ಚಿಕಿತ್ಸೆ ಕೊಡಿಸುತ್ತೇವೆ. ಸಿಎಂ ಬದಲಾಯಿಸಲ್ಲ ಎಂದು ತಿಳಿಸಿದ್ದಾರೆ.

ಪ್ರಧಾನಿ ಆಗಿದ್ದಾಗ ವಾಜಪೇಯಿರಿಗೆ ಕೂಡ ಎರಡು ಮಂಡಿ‌ ನೋವಿತ್ತು. ಪ್ರಧಾನಿಯನ್ನೇ ಬದಲಿಸಿರಲಿಲ್ಲ. ಇನ್ನೂ ಸಿಎಂ ಬದಲಾಯಿಸುತ್ತೇವಾ? ಸಿಎಂ ಬದಲಾವಣೆ ಕೇವಲ ಊಹಾಪೋಹ ಎಂದು ಮೈಸೂರು ನಗರದಲ್ಲಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದ್ದಾರೆ.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾ ಒತ್ತಾಯ ವಿಚಾರ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ರಂಗಾಯಣದಲ್ಲಿ ಬಹು ಕಾಲದಿಂದಲೂ ಎಡಚರ ಹಾವಳಿ ಆಗಿತ್ತು. ಇದು ಎಡಪಂಥೀಯರ ಸ್ವತ್ತು ಎನ್ನುವ ರೀತಿಯ ಆಗಿತ್ತು. ಮಾರ್ಕ್ಸ್ ವಾದ, ಟೆರಿಸ್ಟ್ ಮನಸ್ಥಿತಿಯನ್ನು ಬಿಡಿ. ಈ ರೀತಿಯ ಅಪಪ್ರಚಾರ ಮಾಡಬೇಡಿ. ನಿಮಗೆ ಅವಕಾಶ ಸಿಕ್ಕುತ್ತಿಲ್ಲ ಅಂದರೆ ಅವಕಾಶ ಕೊಡಿಸುತ್ತೇವೆ. ರಂಗಾಯಣದಲ್ಲಿ ಎಡಪಂಥ ಬಲಫಂಥ ಮಧ್ಯಪಂಥ ಎಲ್ಲದಕ್ಕೂ ಅವಕಾಶ ಸಿಗಬೇಕು ಎಂದು ತಿಳಿಸಿದ್ದಾರೆ.

ರಂಗಾಯಣದ ನಿರ್ದೇಶಕರ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರ ಬೆಂಬಲ ವಿಚಾರವಾಗಿ ಇದೆ ಸಂದರ್ಭದಲ್ಲಿ ಅವರು ಮಾತನಾಡಿದ್ದು, ಟೆರರಿಸ್ಟ್‌ಗಳಿಗೆ ಬೆಂಬಲ ಕೊಟ್ಟವರು ಇವರಿಗೆ ಕೊಡದೆ ಇರುತ್ತಾರಾ? ಎಲ್ಲಾ ದೇಶ ವಿರೋಧಿ ಚಟುವಟಿಕೆ ಹಿಂದೆ ಕಾಂಗ್ರೆಸ್ ಇರುತ್ತದೆ. ಅಡ್ಡಂಡ ಕಾರ್ಯಪ್ಪ ಬಂದ ಮೇಲೆ ರಂಗಾಯಣ ಕ್ರಿಯಾ ಶೀಲವಾಗಿದೆ ಎಂದು ಹೇಳಿದ್ದಾರೆ.

ಮತಾಂತರ ಕಾಯ್ದೆ ಜಾರಿಗೆ ವಿರೋಧ ಬಿಷಪ್‌ಗಳ ಫಾದರ್‌ ಸೇರಿ ಕಾಯ್ದೆ ವಿರೋಧಿಸುತ್ತಿರುವವರ ವಿರುದ್ಧ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಜನರನ್ನು ಮಂಗ್ಯಾ ಮಾಡಿ ಮತಾಂತರ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಚಿಕಿತ್ಸೆ ಕೊಡಿಸಿ ರೋಗ ವಾಸಿ ಮಾಡಿಸುತ್ತಾರೆ. ನಂತರ ಏಸುವಿನ ಪ್ರಾರ್ಥನೆ ಮಾಡಿಸುತ್ತಾರೆ. ಏಸುವಿನಿಂದ ಗುಣ ಆಯ್ತು ಅಂತಾ ಮೋಸದಿಂದ ಮತಾಂತರ ಮಾಡುತ್ತಾರೆ. ಇಂತಹ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ. ಬರೀ ಏಸುವಿನ ದೇವಾಲಯ ಕಟ್ಟಿಸಿ ಎಂದು ಹೇಳಿದ್ದಾರೆ.

ಯೂರೋಪಿಯನ್ ದೇಶಗಳಲ್ಲಿ ಕ್ರೈಸ್ಥ ಧರ್ಮ ನೆಲ ಕಚ್ಚುತ್ತಿದೆ. ಅಲ್ಲಿ ಚರ್ಚ್‌ಗಳಿಗೆ ಯಾರು ಹೋಗುತ್ತಿಲ್ಲ. ಚರ್ಚ್‌ಗಳು ಅಲ್ಲಿ ಮಾರಾಟಕ್ಕಿವೆ. ಅದಕ್ಕಾಗಿ ಇಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನವೇ ಮತಾಂತರ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಬರೀ ಹಿಟ್ ಆ್ಯಂಡ್ ರನ್ ಮಾಡುತ್ತಾರೆ: ಪ್ರತಾಪ ಸಿಂಹ ಸಿದ್ದರಾಮಯ್ಯ ಬರೀ ಹಿಟ್ ಆ್ಯಂಡ್ ರನ್ ಮಾಡುತ್ತಾರೆ. ಒಂದು ವಿಚಾರ ತೆಗೆದುಕೊಳ್ಳುತ್ತಾರೆ ಅರ್ಧಕ್ಕೆ ಬಿಡುತ್ತಾರೆ. ಮತಾಂತರ ನಿಷೇಧ ಕರಡಿಗೆ ಅವರೇ ಸಹಿ ಹಾಕಿದ್ದರು. ಸದನದಲ್ಲಿ ಇಲ್ಲ ಅಂತಾ ಹೇಳಿ ಅಲ್ಲೂ ಸಿಕ್ಕಿಕೊಂಡರು. ನಂತರ ಕಣ್ಣುತಪ್ಪಿನಿಂದ ಅದು ಇದು ಅಂತಾ ಹೇಳಿದರು. ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲ್ಲ. ಮಹಾರಾಷ್ಟ್ರಕ್ಕೆ ಹೆದರಿಕೊಳ್ಳುವ ಕಾಂಗ್ರೆಸ್‌ನವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆ ವಾಪಸ್ಸು ವಿಚಾರ ಇಂತಹ ಮನಸ್ಥಿತಿಯಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಮಾದರಿ ಸರ್ಕಾರ. ಇದು ಜನರಿಗೆ ಗೊತ್ತಿದೆ ಆದ್ದರಿಂದ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2023ರಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಕಿತ್ತು ಒಗೆಯುವ, ಕಿತ್ತು ಹಾಕುವ ಅವಕಾಶ ಜನ ನಿಮಗೆ ಕೊಡುವುದಿಲ್ಲ. ಅವರ ನಾಯಕರು ಪ್ರತಿ ಬಾರಿ ಹೊಸ ಹೊಸ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಕ್ರಿಶ್ಚಿಯನಿಟಿ ಏನು ಮಾರುಕಟ್ಟೆಯ ವಸ್ತುನಾ? ನೀವು ಟ್ರೈ ಮಾರಿ ನಾವು ಮೇರಿ ಅನ್ನೋಕೆ? ಇದೇನು ಸೋಪಾ ಮಾರಾಟನಾ? ನಿಮ್ಮ ಧರ್ಮವನ್ನು ಮಾರುಕಟ್ಟೆ ವಸ್ತು ಮಾಡಬೇಡಿ. ಮೋಸದಿಂದ ಮತಾಂತರ‌ ಮಾಡಬೇಡಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಇದನ್ನೂ ಓದಿ:

ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

ಬೆಳ್ಳಂಬೆಳಗ್ಗೆಯೇ ತಂಬಾಕು ಹರಾಜು ಪೂಜೆ ನೆರವೇರಿಸಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್

Published On - 12:20 pm, Wed, 29 December 21