ಬೆಳ್ಳಂಬೆಳಗ್ಗೆಯೇ ತಂಬಾಕು ಹರಾಜು ಪೂಜೆ ನೆರವೇರಿಸಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್

ಬೆಳ್ಳಂಬೆಳಗ್ಗೆಯೇ ತಂಬಾಕು ಹರಾಜು ಪೂಜೆ ನೆರವೇರಿಸಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್
ಬೆಳ್ಳಂಬೆಳಗ್ಗೆಯೇ ತಂಬಾಕು ಹರಾಜು ಪೂಜೆ ನೆರವೇರಿಸಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್

ಬೆಳಗ್ಗೆ 7.30ಕ್ಕೆ ಪ್ರತಾಪ್ ಸಿಂಹ ಪೂಜೆ ಮಾಡಿದರು. ಈ ವೇಳೆ ರೈತರೊಂದಿಗೆ ಮಾತಿನ ಚಕಮಕಿ ನಡೆಯಿತು. ಇಷ್ಟು ಬೇಗ ಯಾಕೆ ಪೂಜೆ ಮಾಡಿದ್ರಿ ಎಂದು ಮುತ್ತಿಗೆ ಹಾಕಿದ ರೈತರು ಪ್ರಶ್ನಿಸಿದರು. ಸರಿಯಾಗಿ ಆರಂಭಿಕ ಬೆಲೆ‌‌ ನೀಡಿಲ್ಲ ಎಂದು ತರಾಟೆಗೆ ಎತೆಗೆದುಕೊಂಡರು. ಕೇವಲ 185 ರೂಪಾಯಿ ಅರಂಭಿಕ ಬೆಲೆ ನೀಡಲಾಗಿದೆ ಎಂದು ರೈತರು ಅಸಮಾಧಾನಗೊಂಡರು.

TV9kannada Web Team

| Edited By: sadhu srinath

Sep 24, 2021 | 10:43 AM


ಮೈಸೂರು: ತಂಬಾಕು ಹರಾಜು ಪೂಜೆಗೆ ಬಂದಿದ್ದ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರಿಂದ ಘೇರಾವ್ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರ್ಕೆಟ್‌ನಲ್ಲಿ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ರೈತರು ಘೇರಾವ್ ಮಾಡಿದ್ದಾರೆ.

ಮುಹೂರ್ತ ನೋಡಿ ಪೂಜೆ ಆರಂಭಿಸಿದ್ದಕ್ಕೆ ಗರಂ ಆದ ರೈತರು ಆರಂಭದಲ್ಲೇ ಕಡಿಮೆ ಬೆಲೆಗೆ ಹರಾಜಾಗಿದ್ದಕ್ಕೂ ಅಸಮಾಧಾನಗೊಂಡರು. ಬೆಳಗ್ಗೆಯೇ ಏಕೆ ಆರಂಭ ಮಾಡುತ್ತಿದ್ದೀರೆಂದು ರೈತರು ಪ್ರಶ್ನೆ ಮಾಡಿದರು. ಅದಕ್ಕೆ ಮುಹೂರ್ತ ನೋಡಿ ಆರಂಭ ಮಾಡ್ತಿದ್ದೇವೆ ಎಂದು ಸಂಸದ ಪ್ರತಾಪ್ ಉತ್ತರಿಸಿದರು. ಅದಕ್ಕೆ ತಂಬಾಕು ಹರಾಜು ಪೂಜೆಗೆ ಬಂದಿದ್ದ ಪ್ರತಾಪ್ ಸಿಂಹ ಮತ್ತು ಮಾಜಿ ಸಂಸದ ಸಿ.ಹೆಚ್. ವಿಜಯ ಶಂಕರ್‌ಗೆ ಘೇರಾವ್ ಮಾಡಿದ್ದಾರೆ.

ಈ ವೇಳೆ ರೈತರೊಂದಿಗೆ ಮಾತಿನ ಚಕಮಕಿ ನಡೆಯಿತು. ಸರಿಯಾಗಿ ಆರಂಭಿಕ ಬೆಲೆ‌‌ ನೀಡಿಲ್ಲ ಎಂದು ತರಾಟೆಗೆ ಎತೆಗೆದುಕೊಂಡರು. ಕೇವಲ 185 ರೂಪಾಯಿ ಅರಂಭಿಕ ಬೆಲೆ ನೀಡಲಾಗಿದೆ ಎಂದು ರೈತರು ಅಸಮಾಧಾನಗೊಂಡರು. ಬೆಳಗ್ಗೆ 7.30ಕ್ಕೆ ಪ್ರತಾಪ್ ಸಿಂಹ ಪೂಜೆ ಮಾಡಿದರು. ಇಷ್ಟು ಬೇಗ ಯಾಕೆ ಪೂಜೆ ಮಾಡಿದ್ರಿ ಎಂದು ಮುತ್ತಿಗೆ ಹಾಕಿದ ರೈತರು ಪ್ರಶ್ನಿಸಿದರು.

ಇದನ್ನೂ ಓದಿ:
ಜಮೀನು ದಾಖಲೆ ಪತ್ರಕ್ಕೆ ಸತಾಯಿಸುತ್ತಿರುವ ಅಧಿಕಾರಿಗಳು, ಬಸ್ ನಿಲ್ದಾಣದಲ್ಲೇ‌ ವಾಸ ಮಾಡಿರುವ ಕುಟುಂಬ

ಇದನ್ನೂ ಓದಿ:
ನಮ್ಮ ಶಾಸಕರೇ ಡಿಸಿಸಿ ಬ್ಯಾಂಕ್‌ಗಳಲ್ಲಿ 245 ಕೋಟಿ ಸಾಲ ಪಡೆದು ಒಂದೇ ಒಂದು ರೂ ಕಟ್ಟಿಲ್ಲ! ಸಹಕಾರ ಸಚಿವ ಸೋಮಶೇಖರ್ ಅಳಲು

(tobacco farmers gherao mysore mp pratap simha in piriyapatna)

Follow us on

Related Stories

Most Read Stories

Click on your DTH Provider to Add TV9 Kannada