Mysore News: ಮೈಸೂರಿನ ಈ ಬಡಾವಣೆಗಳಿಗೆ ಜೂ.20, 21 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಮೈಸೂರಿನ ಹಲವು ಪ್ರದೇಶಗಳಿಗೆ ಇಂದು ಮತ್ತು ನಾಳೆ (ಜೂ.20, 21) ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮೈಸೂರು: ಮೈಸೂರಿನ (Mysore) ಹಲವು ಬಡಾವಣೆಗಳಿಗೆ (Area) ಇಂದು ಮತ್ತು ನಾಳೆ (ಜೂ.20, 21) ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎರಡು ದಿನಗಳ ಕಾಲ ಮೈಸೂರಿನ ಹಲವೆಡೆ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ (KPTCL)ನ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಸಂಬಂಧ ಪಂಪಿಂಗ್ ಸ್ಟೇಷನ್‌ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಮೈಸೂರಿನಲ್ಲಿ ಹಲವು ಬಡಾವಣೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ನೀರು ವ್ಯತ್ಯಯವಾಗುವ ಪ್ರದೇಶಗಳು
42 ರಿಂದ 51 ರ ನಡುವಿನ ವಾರ್ಡ್‌ಗಳು ಕೆ.ಜಿ. ಕೊಪ್ಪಳ, ಶಾರದಾದೇವಿ ನಗರ, ದಟ್ಟಗಲ್ಲಿ, ಲಕ್ಷ್ಮೀಪುರ, ಸುನ್ನದಕೇರಿ, ಅಗ್ರಹಾರ, 54 ಮತ್ತು 65 ರ ನಡುವಿನ ವಾರ್ಡ್‌ಗಳು ಗುಂಡೂರಾವ್ ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪು ನಗರ, ರಾಮಕೃಷ್ಣ ನಗರ, ಕುವೆಂಪು ನಗರ, ಎಂ ಬ್ಲಾಕ್, ವಿದ್ಯಾರಣ್ಯಪುರಂ, ಅಶೋಕಪುರಂ , ವಿಶ್ವೇಶ್ವರ ನಗರ, ಜೆಪಿ ನಗರ, ಅರವಿಂದ ನಗರ, ಶ್ರೀರಾಂಪುರ ಮತ್ತು ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ