ಖಾಲಿ ಪೇಪರ್ಗೆ ಮೃತಪಟ್ಟ ವೃದ್ಧೆಯ ಹೆಬ್ಬೆಟ್ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು! ವಿಡಿಯೋ ಫುಲ್ ವೈರಲ್
ಸಂಬಂಧಿಕರು ಮೃತ ವೃದ್ಧೆಯಿಂದ ಹೆಬ್ಬೆಟ್ ಮುದ್ರೆ ಹಾಕಿಸಿಕೊಳ್ಳುತ್ತಿದ್ದಾಗ ಮಹಿಳೆಯೊಬ್ಬರು ಪ್ರಶ್ನಿಸಿ, ಸಂಬಂಧಿಕರ ನಡೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಮೈಸೂರು: ಖಾಲಿ ಪೇಪರ್ಗೆ ಮೃತಪಟ್ಟ ವೃದ್ಧೆ ಹೆಬ್ಬೆಟ್ ಮುದ್ರೆಯನ್ನು ಒತ್ತಿಸಿಕೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ. ವೃದ್ಧೆ ಮೃತರಾಗಿದ್ದಾರೆ. ಆದರೆ ಮೃತ ಸಂಬಂಧಿಕರು ಈ ನಡುವೆ ಖಾಲಿ ಪೇಪರ್ಗೆ ಹೆಬ್ಬೆಟ್ ಮುದ್ರೆ ಒತ್ತಿಸಿಕೊಂಡಿದ್ದಾರೆ. ಖಾಲಿ ಪೇಪರ್ಗೆ ಮೃತ ವೃದ್ಧೆಯ ಮುದ್ರೆಯನ್ನು ಹಾಕಿಸಿಕೊಂಡ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಾರು 11 ದಿನದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಬಂಧಿಕರು ಮೃತ ವೃದ್ಧೆಯಿಂದ ಹೆಬ್ಬೆಟ್ ಮುದ್ರೆ ಹಾಕಿಸಿಕೊಳ್ಳುತ್ತಿದ್ದಾಗ ಮಹಿಳೆಯೊಬ್ಬರು ಪ್ರಶ್ನಿಸಿ, ಸಂಬಂಧಿಕರ ನಡೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿದ್ಯಾರಣ್ಯಾಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಡಿಯೋದಲ್ಲಿ ಇರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇಂದು (ನ.28) 11ನೇ ದಿನದ ಕಾರ್ಯಕ್ರಮ ನಡೆಯುತ್ತಿದ್ದು, ವಿಡಿಯೋ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಸಂಬಂಧಿಕರ ನಡೆಯನ್ನ ಪ್ರಶ್ನಿಸಿ ವಿಡಿಯೋ ಮಾಡಿದ ಮಹಿಳೆ, ಹೆಬ್ಬೆಟ್ಟು ಮುದ್ರಿಸಿಕೊಂಡಿರುವ ಪತ್ರಗಳನ್ನ ಪಡೆಯಲು ಯತ್ನಿಸುತ್ತಾರೆ. ಆದರೆ ಮಹಿಳೆ ಕೈಗೆ ಖಾಲಿ ಪತ್ರಗಳು ಸಿಕ್ಕಿಲ್ಲ. ಮೃತ ಹೆಣ್ಣಿನ ಕೈಯಲ್ಲಿ ಹೀಗೆ ಮಾಡಿಸಿಕೊಳ್ಳುವುದು ತಪ್ಪು ಎಂದು ಹೇಳಿದ ಮಹಿಳೆ ಜೊತೆ ಸಂಬಂಧಿಕರು ಮಾತಿನ ಚಕಮಕಿ ನಡೆಸಿದ್ದಾರೆ. ಈ ಎಲ್ಲಾ ಸಂಗತಿಗಳು ವೈರಲ್ ಆದ ವಿಡಿಯೋದಲ್ಲಿ ತಿಳಿದುಬಂದಿದೆ.
ಆಸ್ತಿಗಾಗಿ ಗಲಾಟೆ ಹನ್ನೊಂದು ದಿನಗಳ ಹಿಂದೆ ಜಯಮ್ಮ(63) ಎಂಬುವವರು ಮೃತಪಟ್ಟಿದ್ದಾರೆ. ಜಯಮ್ಮನ ಕುಟುಂಬಕ್ಕೆ ಪಿತ್ರಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಜಯಮ್ಮ ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದರಂತೆ. ಆಸ್ತಿ ಪಾಲು ಪಡೆಯಲು ಪತಿಯೂ ಬದುಕಿಲ್ಲ, ಮಕ್ಕಳೂ ಇಲ್ಲ. ಜಯಮ್ಮನ ಪಾಲಿನ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಜಗಳವಾಗುತ್ತಿತ್ತು. ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾರೆ. ಅಕ್ಕನ ಮಗನ ಸುರೇಶ್ ಎಂಬುವವರು ಆಸ್ತಿಗಾಗಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಅಂತ ತಿಳಿದುಬಂದಿದೆ.
ಇದನ್ನೂ ಓದಿ
‘ರೈಡ್ ಫಾರ್ ಅಪ್ಪು’: ಪುನೀತ್ ಸ್ಮರಣಾರ್ಥ ಬೈಕ್ ಮೆರವಣಿಗೆಗೆ ಸಿ.ಎನ್. ಅಶ್ವತ್ಥ ನಾರಾಯಣ ಚಾಲನೆ
Published On - 3:02 pm, Sun, 28 November 21