ಎರಡು ತಿಂಗಳ ಅವಧಿಯ ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

ಇದೇ ಅಧಿಕಾರ ಸೆಪ್ಟಂಬರ್ 5ಕ್ಕೆ ಮೈಸೂರು ನಗರ ಪಾಲಿಕೆ ಮೇಯರ್​ ಅಧಿಕಾರವಧಿ ಅಂತ್ಯವಾಗಲಿದ್ದು, ಈ ಬಾರಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹೊಡಿಯಲೇಬೇಕೆಂದು ಕಾಂಗ್ರೆಸ್​ ತೆರೆಮರೆಯ ಕಸರತ್ತು ನಡೆಸಿದೆ. ಹೀಗಾಗಿ ಇನ್ನೂ ಕೇವಲ ಎರಡು ತಿಂಗಳು ಮಾತ್ರ ಅಧಿಕಾರವಧಿ ಇದ್ದರೂ ಸಹ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎರಡು ತಿಂಗಳ ಅವಧಿಯ ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ
ಮೈಸೂರು ನಗರ ಪಾಲಿಕೆ
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 7:05 AM

ಮೈಸೂರು, (ಆಗಸ್ಟ್ 17): ಮೈಸೂರು (Mysuru) ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ತವರು ಜಿಲ್ಲೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್(Congress) ಜಿಲ್ಲೆಯಲ್ಲಿ ದಿಗ್ವಿಜಯ ಪಡೆದಿದೆ ನಿಜ. ಆದ್ರೆ ಮೈಸೂರು ಮಹಾನಗರ ಪಾಲಿಕೆ(Mysore City Corporation) ಅಧಿಕಾರ ಮಾತ್ರ ಬಿಜೆಪಿ ಕೈಯಲ್ಲಿದೆ. ಇದೇ ಅಧಿಕಾರ ಸೆಪ್ಟಂಬರ್ 5 ಕ್ಕೆ ಅಂತ್ಯವಾಗಲಿದ್ದು, ಮುಂದಿನ ಉಳಿಯಲಿರೋ 2 ತಿಂಗಳ ಅಧಿಕಾರ ಪಡೆಯಲು ಕಾಂಗ್ರೆಸ್‌ ಕಸರತ್ತು ಆರಂಭಿಸಿದೆ. ಅಂದಹಾಗೆ..ಐದು ವರ್ಷದ ಅಧಿಕಾರದ ಅವಧಿಯಲ್ಲಿ ಮೊದಲ ಅವಧಿಗೆ ಮಾತ್ರ ಕೇವಲ 1 ವರ್ಷ ಮಾತ್ರ ಕಾಂಗ್ರೆಸ್‌ನ ಮೇಯರ್ ಆಯ್ಕೆ ಆಗಿದ್ರು. ಆ ಬಳಿಕ ಇಲ್ಲಿ ಜೆಡಿಎಸ್‌ ಹಾಗೂ ಬಿಜೆಪಿಯದ್ದೇ ಪಾರುಪತ್ಯ.

ಮೈಸೂರು ಪಾಲಿಕೆ ಒಟ್ಟು 65 ಸದಸ್ಯರ ಬಲ ಹೊಂದಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಎಂಎಲ್‌ಎ, ಎಂಪಿ ಸೇರಿದಂತೆ 9 ಜನಪ್ರತಿನಿಧಿಗಳೊಂದಿಗೆ ಒಟ್ಟು 74 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇನ್ನು ಬಿಜೆಪಿ 25 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್‌ 23 ಸದಸ್ಯರನ್ನ ಹೊಂದಿದೆ. ಜೆಡಿಎಸ್‌ ಕೂಡಾ 21 ಸ್ಥಾನದಲ್ಲಿ ಗೆದ್ದಿದೆ. ಇನ್ನು ಐವರು ಪಕ್ಷೇತರ ಸದಸ್ಯರಿದ್ದಾರೆ.

ಇದನ್ನೂ ಓದಿ: ಮೈಸೂರು: ಐತಿಹಾಸಿಕ ದೇವರಾಜ ಮಾರುಕಟ್ಟೆ ಮರುನಿರ್ಮಾಣ, ನೆಲಸಮ ವಿಚಾರ: ಹೈಕೋರ್ಟ್ ಆದೇಶ, ಆತಂಕದಲ್ಲಿ ವ್ಯಾಪಾರಿಗಳು

ಕಳೆದ ಬಾರಿ ಮೂರು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿ ಗೆದ್ದು ಬೀಗಿತ್ತು. ಆದ್ರೆ ಈ ಬಾರಿ ಜೆಡಿಎಸ್‌ನಲ್ಲಿರುವ ಮುಸ್ಲಿಂ ಸದಸ್ಯರಿಗೆ ಗಾಳ ಹಾಕಿರುವ ಕಾಂಗ್ರೆಸ್‌ ಅವರ ಬಲದೊಂದಿಗೆ ಅಧಿಕಾರ ಹಿಡಿಯುವ ಕನಸು ಕಂಡಿದೆ. ಹಾಲಿ ಮೇಯರ್‌ ಅವಧಿ ಸೆಪ್ಟೆಂಬರ್ 5 ಕ್ಕೆ ಮುಗಿಯಲಿದೆ. ವಿಷ್ಯ ಅಂದ್ರೆ 2023ರ ನವೆಂಬರ್‌ 17 ಕ್ಕೆ ಪಾಲಿಕೆಯ ಸದಸ್ಯರ ಅವಧಿಯೇ ಮುಗಿಯಲಿದೆ. ಹೀಗಾಗಿ ಹೊಸ ಮೇಯರ್‌ಗೆ ಸಿಗೋದು ಕೇವಲ ಎರಡು ತಿಂಗಳ ಅಧಿಕಾರ ಮಾತ್ರ.

ಇನ್ನು ಈ ಅವಧಿಯಲ್ಲಿ ಮೈಸೂರು ದಸರಾ ಕೂಡಾ ಬರುವುದರಿಂದ ಕಾಂಗ್ರೆಸ್‌ನ ಮೇಯರ್‌ ಇರಬೇಕು ಎನ್ನುವುದು ಸಿದ್ದರಾಮಯ್ಯನವರ ಕನಸಾಗಿದೆ. ಹೀಗಾಗಿಯೇ ಕಾಂಗ್ರೆಸ್‌ ಹೇಗಾದರೂ ಮಾಡಿ ಮೈಸೂರು ಪಾಲಿಕೆಯ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದೆ. ಹೀಗಾಗಿ ಕಾಂಗ್ರೆಸ್ ತನ್ನ 23 ಸದಸ್ಯರ ಜತೆ ಐವರು ಪಕ್ಷೇತರರು, ಐವರು ಜೆಡಿಎಸ್‌ ಸದಸ್ಯರಿಗೆ ಗಾಳ ಹಾಕಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್‌ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ